ಕಾಶ್ಮೀರದಲ್ಲಿ ಐದು ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದ ಲಷ್ಕರ್-ಎ-ತೊಯ್ಬಾ ಉಗ್ರನ ಹತ್ಯೆ

ಸೆ.7ರಂದು ಹಣ್ಣು ವ್ಯಾಪಾರಿ ಕುಟುಂಬದ ಮೇಲೆ ಈತ ಗುಂಡಿನ ದಾಳಿ ನಡೆಸಿದ್ದ. ಈ ವೇಳೆ ಐದು ವರ್ಷದ ಹಸುಳೆ ಕೂಡ ಗಂಭೀರವಾಗಿ ಗಾಯಗೊಂಡಿತು. ಗಾಯಗೊಂಡ ಮಗುವನ್ನು ಏರ್​ ಅಂಬ್ಯುಲೆನ್ಸ್​ ಮೂಲಕ ನವದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Seema.R | news18-kannada
Updated:September 11, 2019, 1:17 PM IST
ಕಾಶ್ಮೀರದಲ್ಲಿ ಐದು ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದ ಲಷ್ಕರ್-ಎ-ತೊಯ್ಬಾ ಉಗ್ರನ ಹತ್ಯೆ
ಎಲ್​ಇಟಿ ಉಗ್ರ
  • Share this:
ನವದೆಹಲಿ (ಸೆ.11): ಇಲ್ಲಿನ ಸೊಪೊರೆ ಜಿಲ್ಲೆಯಲ್ಲಿ ಕಳೆದ ವಾರ ಮನೆಯೊಂದರ ಮೇಲೆ ಐದು ವರ್ಷದ ಮಗು ಸೇರಿದಂತೆ ನಾಲ್ವರ ಮೇಲೆ ಅಮಾನುಷವಾಗಿ ಗುಂಡಿನ ದಾಳಿ ನಡೆಸಿದ್ದ, ಲಷ್ಕರ್​ ಎ ತೊಯ್ಬಾ ಉಗ್ರ ಸಂಘಟನೆಯ ಆಸಿಫ್​ ಮಕ್ಬುಲ್​ ಭಟ್​​ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ.

ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಈ ಹತ್ಯೆ ನಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಈತ ವಲಸಿಗ ಕಾರ್ಮಿಕ ಶಫಿ ಆಲ್ಮ್​ ಹತ್ಯೆಗೂ ಕಾರಣವಾಗಿದ್ದ ಎಂದು ಕೂಡ ಜಮ್ಮು ಕಾಶ್ಮೀರ ಪೊಲೀಸರು ಟ್ವೀಟ್​ ಮಾಡಿದ್ದಾರೆ.

ಸೆ.7ರಂದು ಹಣ್ಣು ವ್ಯಾಪಾರಿ ಕುಟುಂಬದ ಮೇಲೆ ಈತ ಗುಂಡಿನ ದಾಳಿ ನಡೆಸಿದ್ದ. ಈ ವೇಳೆ ಐದು ವರ್ಷದ ಹಸುಳೆ ಕೂಡ ಗಂಭೀರವಾಗಿ ಗಾಯಗೊಂಡಿತು. ಗಾಯಗೊಂಡ ಮಗುವನ್ನು ಏರ್​ ಅಂಬ್ಯುಲೆನ್ಸ್​ ಮೂಲಕ ನವದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಿಧಿ 370ನ್ನು ರದ್ದುಗೊಳಿಸಿದಾಗಿನಿಂದ ಕಣಿವೆ ರಾಜ್ಯದಲ್ಲಿ ನಿರ್ಬಂಧ ವಿಧಿಸಲಾಗಿದೆ. ಕಣಿವೆ ರಾಜ್ಯದ ಜನರಲ್ಲಿ ಭಯಮೂಡಿಸುವ ಸಲುವಾಗಿ ಮತ್ತು ಶಾಂತಿ ಕದಡುವ ಉದ್ದೇಶದಿಂದ ಈ ಘಟನೆ ನಡೆದಿರುವ ಸಾಧ್ಯತೆ ಇದೆ.

ಇದನ್ನು ಓದಿ: ಟ್ವಿಟರ್​ನಲ್ಲಿ ಹೊಸ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ

ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ, ಕಾಶ್ಮೀರದ ಶಾಂತಿಗೆ ಭಂಗಮಾಡಲು ಪ್ರಯತ್ನಿಸುತ್ತಿದೆ. ಇಲ್ಲಿನ ನಾಗರಿಕರ ಹತ್ಯೆ ಮಾಡುವ ಮೂಲಕ ಭಯ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಕಳೆದ ತಿಂಗಳು ಲಷ್ಕರ್​ ಎ ತೋಯ್ಬಾದ ಇಬ್ಬರು ಉಗ್ರರನ್ನು ಎಲ್​ಒಸಿ ಬಳಿ ಸೆರೆಹಿಡಿಯಲಾಗಿತ್ತು. ಇವರು ಶಾಂತಿ ಕದಡುವ ಉದ್ದೇಶದಿಂದಲೇ ಕೆಲವು ಗುಂಪುಗಳನ್ನು ಭಾರತದ ಒಳ ನುಸುಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸೇನೆ ತಿಳಿಸಿದೆ.

First published: September 11, 2019, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading