ಬಾಲಕೋಟ್​ ಉಗ್ರರ ನೆಲೆ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಕೊನೆಗೂ ಸಿಕ್ತು ಸಾಕ್ಷಿ!

ವಾಯುಪಡೆ ಬಾಲಕೋಟ್​ನ ಜೈಷ್​ ಸಂಘಟನೆಯ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿ, ಅಲ್ಲಿನ ಕ್ಯಾಂಪ್​ಗಳನ್ನು ಧ್ವಂಸಗೊಳಿಸಿರುವ ಬಗ್ಗೆ ಸ್ಯಾಟಲೈಟ್​ ಚಿತ್ರಣವನ್ನು ಸಂಘ್ರಹಿಸಲಾಗಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.

Sushma Chakre | news18
Updated:March 7, 2019, 8:21 AM IST
ಬಾಲಕೋಟ್​ ಉಗ್ರರ ನೆಲೆ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಕೊನೆಗೂ ಸಿಕ್ತು ಸಾಕ್ಷಿ!
ರೈಟರ್ಸ್​ ನೀಡಿದ್ದ ಬಾಲಕೋಟ್ ಉಗ್ರರ​ ಕ್ಯಾಂಪ್​ನ ಸ್ಯಾಟಲೈಟ್​ ಚಿತ್ರ
  • News18
  • Last Updated: March 7, 2019, 8:21 AM IST
  • Share this:
ನವದೆಹಲಿ (ಮಾ.7): ಪಾಕಿಸ್ತಾನದ ಬಾಲಕೋಟ್​ನಲ್ಲಿದ್ದ ಜೈಷ್​-ಇ- ಮೊಹಮದ್ ಸಂಘಟನೆಯ ತರಬೇತಿ ಶಿಬಿರದ ಮೇಲೆ ಏರ್​ಸ್ಟ್ರೈಕ್ ನಡೆಸಿ ಧ್ವಂಸಗೊಳಿಸಿದ್ದಾಗಿ ಭಾರತೀಯ ವಾಯುಸೇನೆ ಹೇಳಿಕೊಂಡಿತ್ತು. ಇದೀಗ ಅದಕ್ಕೆ ಪುರಾವೆಗಳನ್ನೂ ಒದಗಿಸಿದ್ದು, ಅಲ್ಲಿನ ರಡಾರ್​ ಮತ್ತು ಸ್ಯಾಟಲೈಟ್​ ಚಿತ್ರಣವನ್ನು ಸೇನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಭಾರತ ಬಾಲಕೋಟ್​ ಮೇಲೆ ದಾಳಿ ಮಾಡಿಲ್ಲ. ಅಲ್ಲಿನ ತರಬೇತಿ ಶಿಬಿರಗಳು ಇನ್ನೂ ಹಾಗೇ ಇದೆ. ಅವುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ರೈಟರ್ಸ್​ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸ್ಯಾಟಲೈಟ್​ ಚಿತ್ರಣವನ್ನು ಸಾಕ್ಷಿಯಾಗಿ ನೀಡಿರುವ ಭಾರತೀಯ ವಾಯುಸೇನೆ ಆ ಜಾಗದಲ್ಲಿ ಜೈಷ್​ ಸಂಘಟನೆಯ ತರಬೇತಿ ಶಿಬಿರ ಹಾನಿಯಾಗಿರುವುದನ್ನು ಸಾಬೀತುಪಡಿಸಿದೆ.

ಭಾರತೀಯ ವಾಯುಸೇನೆ ತನ್ನದೇ ಮೂಲಗಳಿಂದ ಸ್ಯಾಟಲೈಟ್​ ಚಿತ್ರಣವನ್ನು ಸಂಗ್ರಹಿಸಿದೆ. ಅದರಲ್ಲಿ ಜೈಷ್​-ಇ-ಮೊಹಮದ್​ ಸಂಘಟನೆಯ ಕ್ಯಾಂಪ್​ಗೆ ಹಾನಿಯಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆ ಸಾಕ್ಷಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ವಾಯುಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಾಕೋಟ್​ನಲ್ಲಿ ಸತ್ತ ಉಗ್ರರ ಶವಗಳನ್ನು ನೋಡಬೇಕು: ಪುಲ್ವಾಮ ದಾಳಿಯಲ್ಲಿ ಮಡಿದ ಯೋಧರ ಕುಟುಂಬಗಳಿಂದ ಆಗ್ರಹ

ರೈಟರ್ಸ್​ ಸಂಸ್ಥೆ 2018ರಲ್ಲಿ ತೆಗೆದ ಜೈಷ್​ ಸಂಘಟನೆಯ ಕ್ಯಾಂಪ್​ನ ಚಿತ್ರಣ ಮತ್ತು 2019ರ ಮಾರ್ಚ್​ 4ರಂದು ತೆಗೆದ ಚಿತ್ರವನ್ನು ಹೋಲಿಕೆ ಮಾಡಿ ಎರಡೂ ಫೋಟೋಗಳಲ್ಲೂ ಯಾವುದೇ ಬದಲಾವಣೆಗಳು ಕಂಡುಬರುತ್ತಿಲ್ಲ. ಹಾಗಾಗಿ, ಭಾರತ ಆ ಕ್ಯಾಂಪ್​ ಮೇಲೆ ದಾಳಿ ನಡೆಸಿರುವುದೇ ಸುಳ್ಳು ಎಂದು ಆರೋಪ ಮಾಡಿತ್ತು. ಆ ಚಿತ್ರಣವನ್ನು ಸ್ಯಾನ್​ ಫ್ರಾನ್ಸಿಸ್ಕೋ ಮೂಲದ ಖಾಸಗಿ ಸ್ಯಾಟಲೈಟ್​ ಆಪರೇಟರ್​ ಆಗಿರುವ ಪ್ಲಾನೆಟ್​ ಲ್ಯಾಬ್​ನಿಂದ ರೈಟರ್ಸ್​ ಸಂಗ್ರಹಿಸಿತ್ತು.

ಫೆಬ್ರವರಿ 26ರಂದು ಪಾಕ್​ ಗಡಿಯೊಳಗೆ ನುಸುಳಿ ಬಾಲಕೋಟ್​ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು. ಉಗ್ರರಿಗೆ ತರಬೇತಿ ನೀಡುತ್ತಿದ್ದ ಜೈಷ್​ ಸಂಘಟನೆಯ ಬೃಹತ್​ ಶಿಬಿರದ ಮೇಲೆ ದಾಳಿ ನಡೆಸಿ ಸುಮಾರು 300 ಉಗ್ರರನ್ನು ಹತ್ಯೆ ಮಾಡಿದ್ದಾಗಿ ಸೇನೆ ಹೇಳಿಕೊಂಡಿತ್ತು. ಉಗ್ರರು ಸತ್ತಿದ್ದಾರೆ ಎಂಬುದಕ್ಕೆ ಪುರಾವೆಯೇನು? ಎಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದವು. ಅದರ ಮಾರನೇ ದಿನ ಪಾಕಿಸ್ತಾನದ ಎಫ್​-16 ಭಾರತದ ಮೇಲೆ ದಾಳಿ ನಡೆಸಲು ಬಂದಾಗ ಅದನ್ನು ಬೆನ್ನತ್ತಿ ಹೋಗಿದ್ದ ಮಿಗ್​-21 ಯುದ್ಧ ವಿಮಾನ ಪಾಕ್​ನಲ್ಲಿ ನೆಲಕ್ಕುರುಳಿ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಪಾಕಿಸ್ತಾನದವರ ವಶವಾಗಿದ್ದರು. 2 ದಿನಗಳ ನಂತರ ಪಾಕ್​ ಅಭಿನಂದನ್​ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿತ್ತು.

ಭಾರತದೊಳಗಿದ್ದಾರೆ ರೆಡ್ ಕಾರಿಡಾರ್ ಉಗ್ರರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ಭಾರತ ನಡೆಸಿದ್ದ ದಾಳಿಯಲ್ಲಿ ದೊಡ್ಡ ಪ್ರಮಾಣದ ಜೈಷ್​ ಸಂಘಟನೆಯ ಉಗ್ರರು ಮೃತಪಟ್ಟಿರುವುದಾಗಿ ವಾಯುಸೇನೆಯ ಅಧಿಕಾರಿಗಳು ಹೇಳಿದ್ದರು. ದಾಳಿ ನಡೆದ ದಿನ ಕೇಂದ್ರ ಸರ್ಕಾರ 350 ಉಗ್ರರು ಸತ್ತಿದ್ದಾರೆ ಎಂದು ಹೇಳಿತ್ತು. ನಂತರ, 350 ಅಲ್ಲ 250 ಉಗ್ರರು ಸತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್​ ಷಾ ಹೇಳಿದ್ದರು. ಆದರೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಇದುವರೆಗೂ ದಾಳಿಯಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆಂಬ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.

First published:March 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading