Thiomargarita Magnifica: ಬರಿಗಣ್ಣಿನಿಂದಲೂ ನೋಡಬಹುದಾದ ಬ್ಯಾಕ್ಟೀರಿಯಾ ಪತ್ತೆ ಮಾಡಿರುವ ವಿಜ್ಞಾನಿಗಳು

ಪ್ರಬಲ ಆವಿಷ್ಕಾರ ಎಂದೇ ಹೇಳಬಹುದಾದ ವಿದ್ಯಮಾನವೊಂದರಲ್ಲಿ ಕ್ಯಾರಿಬಿಯನ್ ದ್ವಿಪದಲ್ಲಿ ವಿಜ್ಞಾನಿಗಳು ಮಳೆ ಹುಳುವಿನಂತೆ ಆಕಾರ ಹೊಂದಿರುವ ಬ್ಯಾಕ್ಟೀರಿಯಾ ಒಂದನ್ನು ಪತ್ತೆ ಹಚ್ಚಿರುವುದಾಗಿ ವರದಿಯಾಗಿದೆ.

ಬರಿಗಣ್ಣಿನಿಂದಲೂ ನೋಡಬಹುದಾದ ಬ್ಯಾಕ್ಟೀರಿಯಾ

ಬರಿಗಣ್ಣಿನಿಂದಲೂ ನೋಡಬಹುದಾದ ಬ್ಯಾಕ್ಟೀರಿಯಾ

  • Share this:
ಪ್ರಬಲ ಆವಿಷ್ಕಾರ ಎಂದೇ ಹೇಳಬಹುದಾದ ವಿದ್ಯಮಾನವೊಂದರಲ್ಲಿ ಕ್ಯಾರಿಬಿಯನ್ ದ್ವಿಪದಲ್ಲಿ ವಿಜ್ಞಾನಿಗಳು (Scientists) ಮಳೆ ಹುಳುವಿನಂತೆ ಆಕಾರ ಹೊಂದಿರುವ ಬ್ಯಾಕ್ಟೀರಿಯಾ ಒಂದನ್ನು ಪತ್ತೆ ಹಚ್ಚಿರುವುದಾಗಿ ವರದಿಯಾಗಿದೆ. ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳು ಮೈಕ್ರೋಸ್ಕೋಪಿಕ್  (Microscopic) ಅಂದರೆ ಮೈಕ್ರೋಸ್ಕೋಪ್ ಬಳಸಿ ನೋಡಿದಾಗ ಮಾತ್ರವೆ ಕಂಡುಬರುವಷ್ಟು ಚಿಕ್ಕದಾಗಿರುತ್ತವೆ. ಆದರೆ ಇದೀಗ ಪತ್ತೆ ಹಚ್ಚಲಾಗಿರುವ ಈ ಬ್ಯಾಕ್ಟೀರಿಯಾ (bacteria) ಅನ್ನು ಬರಿಗಣ್ಣಿನಿಂದಲೂ ನೋಡಬಹುದಾಗಿದೆ ಎನ್ನಲಾಗಿದೆ. ಸದ್ಯ ತಿಳಿದುಬಂದಿರುವ ಮಾಹಿತಿಯ ಪ್ರಕಾರ, ಮನುಷ್ಯನ ಕಣ್ಣಿನ ರೆಪ್ಪೆಯ ಗರಿಯೊಂದರಷ್ಟು ಗಾತ್ರ ಹೊಂದಿರುವ ಈ ಬ್ಯಾಕ್ಟೀರಿಯಾ ಒಂದು ಸೆ.ಮೀ ಗಳಷ್ಟು ಉದ್ದವಿರುವುದಾಗಿ ತಿಳಿದುಬಂದಿದೆ. ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳು 1-5 ಮೈಕ್ರೋಮೀಟರ್ ಗಳಷ್ಟಿರುತ್ತವೆ (Micrometer), ಆದರೆ, ಇದೀಗ ಪತ್ತೆ ಮಾಡಲಾಗಿರುವ ಈ ಬ್ಯಾಕ್ಟೀರಿಯಾ 10,000 ಮೈಕ್ರೋಮೀಟರ್ ಗಳಷ್ಟಿದೆ ಎನ್ನಲಾಗಿದೆ.

ಕಣ್ಣಿಗೆ ಕಾಣುವ ಬ್ಯಾಕ್ಟೀರಿಯಾಗಳು
ಬ್ಯಾಕ್ಟೀರಿಯಾ ಏಕಕೋಶ ಜೀವಿಗಳಾಗಿದ್ದು ಭೂಗೃಹದ ಬಹುತೇಕ ಎಲ್ಲ ಕಡೆಯೂ ಕಂಡುಬರುತ್ತವೆ. ಇವು ಬಿಲಿಯನ್ ವರ್ಷಗಳಿಂದಲೂ ಭೂಮಿಯ ಮೇಲೆ ತಮ್ಮದೆ ಆದ ವಾತಾವರಣದಲ್ಲಿ ಬದುಕುತ್ತಿವೆ ಎನ್ನಲಾಗಿದ್ದು ಈಗಲೂ ಸರಳವಾದ ರಚನೆಗಳನ್ನೇ ಇವು ಹೊಂದಿವೆ. ಮನುಷ್ಯನ ದೇಹದಲ್ಲೂ ಸಹ ಬ್ಯಾಕ್ಟೀರಿಯಾಗಳಿದ್ದು ಅವುಗಳಲ್ಲಿ ಕೆಲವು ಬ್ಯಾಕ್ಟೀರಿಯಾಗಳಷ್ಟೆ ಕಾಯಿಲೆಗಳನ್ನು ಬರಿಸುತ್ತವೆ.

ಥಿಯೋಮಾರ್ಗರಿಟಾ ಮ್ಯಾಗ್ನಿಫಿಕಾ
ಥಿಯೋಮಾರ್ಗರಿಟಾ ಮ್ಯಾಗ್ನಿಫಿಕಾ ಎಂಬ ಜೀವಿಯು ಮಿಕ್ಕೆಲ್ಲ ಗುರುತಿಸಲಾಗಿರುವ ದೊಡ್ಡ ಬ್ಯಾಕ್ಟೀರಿಯಾಗಳಿಗಿಂತ ಸುಮಾರು 50 ಪಟ್ಟುಗಳಷ್ಟು ದೊಡ್ಡದಾಗಿದ್ದು ಬರಿಗಣ್ಣಿಗೆ ಕಾಣಿಸುವಂತಿದೆ. ಹೀಗೆ ಬರಿಗಣ್ಣುಗಳಿಗೆ ಕಾಣಿಸಬಹುದಾದ ಅತಿ ದೊಡ್ಡ ಬ್ಯಾಕ್ಟೀರಿಯಾ ಇದಾಗಿದೆ ಎಂದು ಹೇಳಲಾಗಿದೆ.

ಬ್ಯಾಕ್ಟೀರಿಯಾದ ಜೀವಕೋಶವು ಸರಾಸರಿ ಉದ್ದ ಎಷ್ಟು?
ಈ ಆವಿಷ್ಕಾರದ ವಿವರಣೆಯನ್ನು ಸೈನ್ಸ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಈ ಕುರಿತು ಸಂಶೋಧಕರು ಈ ಬ್ಯಾಕ್ಟೀರಿಯಾದ ಜೀವಕೋಶವು ಸರಾಸರಿ ಉದ್ದ 9,000 ಮೈಕ್ರೋಮೀಟರ್ಸ್ ಆಗಿದೆ ಹೇಳಿದ್ದಾರೆ. "ಮೈಕ್ರೋಸ್ಕೋಪಿ ತಂತ್ರಗಳ ಶ್ರೇಣಿಯನ್ನು ಬಳಸಿಕೊಂಡು, ಸಂಶೋಧನಾ ಲೇಖಕರು ಡಿಎನ್ಎ ಮತ್ತು ರೈಬೋಸೋಮ್ಗಳೊಂದಿಗೆ ಪೊರೆಗಳೊಳಗೆ ವಿಭಾಗಿಸಲಾದ ಹೆಚ್ಚು ಪಾಲಿಪ್ಲಾಯ್ಡ್ ಕೋಶಗಳನ್ನು ಇದರಲ್ಲಿ ಗಮನಿಸಿದರು.

ಕ್ಯಾಂಡಿಡಾಟಸ್ ಥಿಯೋಮಾರ್ಗರಿಟಾ ಮ್ಯಾಗ್ನಿಫಿಕಾ ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಂನ ಏಕ ಕೋಶಗಳು ತೆಳುವಾದ ಮತ್ತು ಕೊಳವೆಯಾಕಾರದಲ್ಲಿದ್ದರೂ, ಒಂದು ಸೆಂಟಿಮೀಟರ್‌ಗಿಂತಲೂ ಹೆಚ್ಚು ಉದ್ದವನ್ನು ವಿಸ್ತರಿಸುತ್ತವೆ, ”ಎಂದು ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದ್ವೀಪಸಮೂಹದಲ್ಲಿ ಈ ಬ್ಯಾಕ್ಟೀರಿಯಾ ಪತ್ತೆ
ಫ್ರೆಂಚ್ ವೆಸ್ಟ್ ಇಂಡೀಸ್ ಮತ್ತು ಗಯಾನಾ ವಿಶ್ವವಿದ್ಯಾನಿಲಯದ ಸಹ-ಲೇಖಕ ಮತ್ತು ಜೀವಶಾಸ್ತ್ರಜ್ಞರಾಗಿರುವ ಒಲಿವಿಯರ್ ಗ್ರೋಸ್, 2009 ರಲ್ಲಿ ಗ್ವಾಡೆಲೋಪ್ ದ್ವೀಪಸಮೂಹದಲ್ಲಿ ಈ ಬ್ಯಾಕ್ಟೀರಿಯಾ ಗುಳಿಬಿದ್ದ ಮ್ಯಾಂಗ್ರೋವ್ ಎಲೆಗಳಿಗೆ ಅಂಟಿಕೊಳ್ಳುವ ಮೊದಲ ಉದಾಹರಣೆಯನ್ನು ಕಂಡುಕೊಂಡರು. ಆದರೆ ಅದರ ಆಶ್ಚರ್ಯಕರವಾಗಿದ್ದ ದೊಡ್ಡ ಗಾತ್ರದ ಕಾರಣ ತಕ್ಷಣವೇ ಅವರಿಗೆ ಇದು ಬ್ಯಾಕ್ಟೀರಿಯಂ ಎಂದು ತಿಳಿದಿರಲಿಲ್ಲ.

ಈ ಬ್ಯಾಕ್ಟೀರಿಯಾಗಳು ಸರಾಸರಿ ಒಂದು ಇಂಚಿನ ಮೂರನೇ ಒಂದು ಭಾಗದಷ್ಟು (0.9 ಸೆಂಟಿಮೀಟರ್‌ಗಳು) ಉದ್ದವನ್ನು ಹೊಂದಿವೆ. ನಂತರದಲ್ಲಿ ನಡೆಸಲಾದ ಆನುವಂಶಿಕ ವಿಶ್ಲೇಷಣೆಯು ಜೀವಿಯು ಒಂದೇ ಬ್ಯಾಕ್ಟೀರಿಯಾದ ಕೋಶ ಎಂದು ಬಹಿರಂಗಪಡಿಸಿತು ಎನ್ನಲಾಗಿದೆ. ಇನ್ನು, ಜೌಗು ಪ್ರದೇಶದಲ್ಲಿ ಸಿಂಪಿ ಚಿಪ್ಪುಗಳು, ಬಂಡೆಗಳು ಮತ್ತು ಗಾಜಿನ ಬಾಟಲಿಗಳಿಗೆ ಅಂಟಿಕೊಂಡಿರುವ ಬ್ಯಾಕ್ಟೀರಿಯಾವನ್ನು ಗ್ರೋಸ್ ಎಂಬ ಸಂಶೋಧಕರು ಕಂಡುಹಿಡಿದರು.

ಇದನ್ನೂ ಓದಿ:  Burmese Python: ಅಬ್ಬಾಬ್ಬಾ, ಈ ಹೆಬ್ಬಾವಿನ ಹೊಟ್ಟೆಯಲ್ಲಿ ಇತ್ತಂತೆ ಬರೋಬ್ಬರಿ 122 ಮೊಟ್ಟೆಗಳು!

ವಿಜ್ಞಾನಿಗಳು ಇದನ್ನು ಲ್ಯಾಬ್ ಸಂಸ್ಕೃತಿಯಲ್ಲಿ ಬೆಳೆಸಲು ಇನ್ನೂ ಸಾಧ್ಯವಾಗಿಲ್ಲ, ಆದರೆ ಸಂಶೋಧಕರು ಹೇಳುವ ಪ್ರಕಾರ ಇದರ ಕೋಶವು ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಗೆ ಹೋಲಿಸಿದರೆ ಅಸಾಮಾನ್ಯವಾದ ರಚನೆಯನ್ನು ಹೊಂದಿದೆ. ಆದಾಗ್ಯೂ, ಇಲ್ಲಿ ಗಮನಿಸಬಹುದಾದ ಒಂದು ಪ್ರಮುಖ ವ್ಯತ್ಯಾಸವೆಂದರೆ, ಇದು ದೊಡ್ಡ ಕೇಂದ್ರ ವಿಭಾಗ ಅಥವಾ ನಿರ್ವಾತ ಪ್ರದೇಶವನ್ನು ಹೊಂದಿದ್ದು ಇದು ಕೋಶದ ಉದ್ದಕ್ಕೂ ಬದಲಾಗಿ ಆ ನಿಯಂತ್ರಿತ ಪರಿಸರದಲ್ಲಿ ಕೆಲವು ಕೋಶ ಕಾರ್ಯಗಳನ್ನು ಮಾಡಲು ಅನುಮತಿಸುತ್ತದೆ ಎಂಬ ವಿಚಾರ ಎನ್ನಲಾಗಿದೆ.

ಬ್ಯಾಕ್ಟೀರಿಯಾ ಇಷ್ಟು ದೊಡ್ಡದಾಗಿರಲು ಕಾರಣವೇನು
ಸದ್ಯ ಈ ಬ್ಯಾಕ್ಟೀರಿಯಾ ಏಕೆ ಇಷ್ಟೊಂದು ದೊಡ್ಡದಾಗಿದೆ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ, ಆದರೆ ಸಂಶೋಧನಾ ತಂಡದ ಸಹ-ಲೇಖಕರಾಗಿರುವ ವೊಲಂಡ್ ಅವರು ಇದು ಸಣ್ಣ ಸಣ್ಣ ಜೀವಿಗಳಿಗೆ ಆಹಾರವಾಗುವುದನ್ನು ತಪ್ಪಿಸಿಕೊಳ್ಳಲು ದೊಡ್ಡ ಆಕಾರದಲ್ಲಿ ರೂಪಾಂತರ ಹೊಂದಿರಬಹುದು ಎಂದು ಊಹಿಸಿದ್ದಾರೆ.

ಇದನ್ನೂ ಓದಿ:  Giant Sturgeon: ಸೆರೆ ಸಿಕ್ಕಿತು ಅಪರೂಪದ ಜೈಂಟ್ ಸರ್ಜನ್! ಇದಕ್ಕೆ 100 ವರ್ಷ

“ಇದೊಂದು ಅದ್ಭುತ ಆವಿಷ್ಕಾರ. ಈ ದೈತ್ಯ ಬ್ಯಾಕ್ಟೀರಿಯಾಗಳು ಎಷ್ಟು ಹೊರಗಿವೆ ಎಂಬ ಪ್ರಶ್ನೆಯನ್ನು ಇದು ಈಗ ಎತ್ತುತ್ತದೆ ಹಾಗೂ ನಾವು ಎಂದಿಗೂ ಬ್ಯಾಕ್ಟೀರಿಯಾವನ್ನು ಕಡಿಮೆ ಎಂದು ತಿಳಿಯಬಾರದೆಂಬ ಅಂಶವನ್ನು ಇದು ನಮಗೆ ನೆನಪಿಸುತ್ತದೆ ”ಎಂದು ಅಧ್ಯಯನದಲ್ಲಿ ಭಾಗಿಯಾಗದ ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವವಿಜ್ಞಾನಿ ಪೆಟ್ರಾ ಲೆವಿನ್ ಅಸೋಸಿಯೇಟೆಡ್‌ ಮಾಧ್ಯಮಕ್ಕೆ ಒತ್ತಿ ಹೇಳಿದ್ದಾರೆ.
Published by:Ashwini Prabhu
First published: