Tirupati: 48 ಗಂಟೆ ನಿಂತರೂ ಸಿಗುವುದಿಲ್ಲ ತಿಮ್ಮಪ್ಪನ ದರ್ಶನ! ಇನ್ನೂ 2-3 ದಿನ ಈ ಕಡೆ ಬಂದ್ರೆ ಗೋವಿಂದಾ ಗೋವಿಂದ

ಭಕ್ತರು ದೇವರ ದರ್ಶನ ಮಾಡಲು ಸುಮಾರು 48 ಗಂಟೆಯಷ್ಟು ಕಾಯಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಇನ್ನು 2-3 ದಿನ ಮಟ್ಟಿಗೆ ತಿರುಪತಿ ಕಡೆಗೆ ಆಗಮಿಸಬೇಡಿ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಭಕ್ತಾದಿಗಳಲ್ಲಿ ಮನವಿ ಮಾಡಿಕೊಂಡಿದೆ.

ತಿರುಪತಿ ವೆಂಕಟೇಶ್ವರ ಸನ್ನಿಧಿ

ತಿರುಪತಿ ವೆಂಕಟೇಶ್ವರ ಸನ್ನಿಧಿ

  • Share this:
ಹೈದರಾಬಾದ್: ಸುಪ್ರಸಿದ್ಧ ಧಾರ್ಮಿಕ ಸ್ಥಳ ತಿರುಪತಿಯ (Tirupati) ತಿರುಮಲ ವೆಂಕಟೇಶ್ವರ ಸ್ವಾಮಿ (Tirumala Venkateshwara Swamy) ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ವಿಪರೀತ ಏರಿಕೆಯಾಗಿದೆ. ಭಕ್ತರ (Devotees) ದಟ್ಟಣೆಯಿಂದಾಗಿ ದೇವರ ದರ್ಶನಕ್ಕಾಗಿ 48 ಗಂಟೆಗೂ ಹೆಚ್ಚು ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶನಿವಾರ 89,318 ಭಕ್ತರಿಗಷ್ಟೆ ದರ್ಶನ ಭಾಗ್ಯ ದೊರೆತಿದ್ದು, ಬೆಟ್ಟದಲ್ಲಿ 30 ಸಾವಿರಕ್ಕೂ ಹೆಚ್ಚು ಭಕ್ತರು ತಮ್ಮ ಸರದಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಕ್ತರು ದೇಗುಕ್ಕೆ ಭೇಟಿ ಕೊಡುವ ದಿನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ (Temple Governing Council) ಮನವಿ ಮಾಡಿಕೊಂಡಿದೆ.  

2-3 ದಿನ ದೇವರ ದರ್ಶನಕ್ಕೆ ಬರಬೇಡಿ

ವೆಂಕಟೇಶ್ವರನ ಭಕ್ತಿ ಕ್ಷೇತ್ರವಾದ ತಿರುಮಲ ದಲ್ಲಿ ಕಂಡು ಕೇಳರಿಯಷ್ಟು ಭಕ್ತಸಂದಣಿ ಶನಿವಾರ ಹಾಗೂ ಭಾನುವಾರ ಉಂಟಾಗಿದೆ. ದರ್ಶನಕ್ಕೆ ನಿಂತ ಭಕ್ತರು ದೇವರ ದರ್ಶನ ಮಾಡಲು ಸುಮಾರು 48 ಗಂಟೆಯಷ್ಟು ಕಾಯಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಇನ್ನು 2-3 ದಿನ ಮಟ್ಟಿಗೆ ತಿರುಪತಿ ಕಡೆಗೆ ಆಗಮಿಸಬೇಡಿ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಭಕ್ತಾದಿಗಳಲ್ಲಿ ಕೋರಿದೆ.

ಭಾರೀ ಸಂಖ್ಯೆಯಲ್ಲಿ ಭಕ್ತರ ಆಗಮನ

ಆಂಧ್ರ ಹಾಗೂ ಸುತ್ತಲಿನ ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಮಕ್ಕಳ ಪರೀಕ್ಷೆಗಳು ಮುಗಿದಿವೆ. ಅಲ್ಲದೆ, ಕೆಲವು ತರಗತಿಗಳ ಮಕ್ಕಳಿಗೆ ಜೂನ್ ಮೊದಲ ವಾರದಿಂದ ಶಾಲೆ ಕಾಲೇಜುಗಳು ಆರಂಭವಾಗಲಿವೆ. ಅಲ್ಲದೆ, ಈ ಸಲ ಯಾವುದೇ ಕೊರೋನಾ ನಿರ್ಬಂಧಗಳು ಇಲ್ಲ. ಹೀಗಾಗಿ ಈ ಶನಿವಾರ ಹಾಗೂ ಭಾನುವಾರ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ದರ್ಶನಕ್ಕೆ  ಭಕ್ತರು ಆಗಮಿಸಿದ್ದಾರೆ.

ಇದನ್ನೂ ಓದಿ: ತಿರುಪತಿಯಲ್ಲಿ ಶ್ರೀ ಬಾಲಾಜಿ, ವಿಜಯವಾಡದಲ್ಲಿ NTR​; ಹೊಸ ಜಿಲ್ಲೆಗಳ ರಚನೆಗೆ ಮುಂದಾದ Andhra

ತಿರುಪತಿಯಲ್ಲಿ ವಿಐಪಿ ದರ್ಶನ ರದ್ದು

ತಿರುಪತಿ ತಿರುಮಲ ವೆಂಕಟೇಶ್ವರನ ದೇಗುಲಕ್ಕೆ ಹಿಂದೆಂದೂ ಇಲ್ಲದಷ್ಟು ಭಕ್ತರು ಹರಿದು ಬಂದಿದ್ದು, ಜೂ.1ರವರೆಗೂ ವಿಐಪಿ ದರ್ಶನ ರದ್ದು ಪಡಿಸಿದೆ. ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿನಿತ್ಯ ನೂಕು ನುಗ್ಗಲು ಇದ್ದೇ ಇರುತ್ತದೆ. ಆದರೆ ಈಗ ದೇವರ ದರ್ಶನಕ್ಕೆ 48 ಗಂಟೆಗಳಿಗೂ ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಗಂಟೆಗೆ 4,500 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿದೆ. ಜನಸಂದಣಿ ಹೆಚ್ಚಾದ ಹಿನ್ನೆಲೆ ತಿರುಪತಿಯಲ್ಲಿ ವಿಐಪಿ ದರ್ಶನವನ್ನು ರದ್ದು ಪಡಿಸಲಾಗಿದೆ.

ಗಂಟೆಗೆ 8 ಸಾವಿರ ಭಕ್ತರು ಕ್ಯೂ ನಿಲ್ಲುತ್ತಿದ್ದಾರೆ

ತಿರುಪತಿಯಲ್ಲಿ ವೆಂಕಟೇಶ್ವರನನ್ನು ಕಣ್ಣುಂಬಿಕೊಳ್ಳಲು ಈಗ ಪ್ರತಿ ಗಂಟೆಗೆ 8 ಸಾವಿರ ಭಕ್ತರು ಸರದಿಯಲ್ಲಿ ಸೇರುತ್ತಿದ್ದಾರೆ. ಇಲ್ಲಿ ಹೆಚ್ಚು ಭಕ್ತರು ನೆರೆಯುವ ವೈಕುಂಠ ಏಕಾದಶಿ, ಗರುಡ ಸೇವಾ ದಿನಗಳಿಗಿಂತಲೂ ಈಗ ಅಧಿಕ ಸಂಖ್ಯೆ ಭಕ್ತರು ಜಮಾವಣೆಗೊಂಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ನಿರ್ವಹಿಸಲು ಆಗದಷ್ಟು ಜನ ಸೇರಿದ್ದಾರೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಅನೇಕ ಭಕ್ತರು ತಿರುಪತಿ ಯಾತ್ರೆಯನ್ನು ಮುಂದೂಡಿದ್ದರು. ಇದೀಗ ದೇಶದಲ್ಲಿ ಕೊರೊನಾ ಭೀತಿ ಕಡಿಮೆಯಾದ ಹಿನ್ನೆಲೆ  ಮಕ್ಕಳ ಜೊತೆ ಭಕ್ತಾದಿಗಳು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಜನ ಕಾಯತೊಡಗಿದ್ದಾರೆ.

ಇದನ್ನೂ ಓದಿ: TTD: ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಬರೋಬ್ಬರಿ 9.2ಕೋಟಿ ರೂ ದಾನ ಮಾಡಿದ ಮಹಿಳೆ; ಕಾರಣ ಇದು!

ಬೇಸಿಗೆ ರಜೆ ಅಂತ್ಯ ಹಿನ್ನೆಲೆ ಹೆಚ್ಚಿದೆ ಭಕ್ತರ ಸಂಖ್ಯೆ

2 ವರ್ಷ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಏಕಾಏಕಿ ಎಲ್ಲಾ ದಿಕ್ಕುಗಳಿಂದಲೂ ಜನ ಸೇರತೊಡಗಿದ್ದಾರೆ. ಜೊತೆಗೆ ಬೇಸಿಗೆ ರಜೆ ಮುಕ್ತಾಯವಾಗುವಂಥ ಸಮಯ ಇದು. ಅಷ್ಟಲ್ಲದೆ, ವಾರಾಂತ್ಯದ ರಜೆ ಬೇರೆ ಇದ್ದ ಕಾರಣ ತಿರುಪತಿಗೆ ಭಕ್ತರ ದಂಡೇ ಹರಿದು ಬಂದಿದೆ. ಬಂದ ಭಕ್ತರಿಗೆ ದರ್ಶನಾವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅವರು ತಮ ಭೇಟಿಯ ದಿನಗಳನ್ನು ಮುಂದೂಡಬೇಕು ಎಂದು ದೇವಸ್ಥಾನದ ಅಧಿಕಾರಿಗಳು ಮನವಿ ಮಾಡಿದ್ದಾರೆ.
Published by:Pavana HS
First published: