Lanka Protest: ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ದೋಚಿದ ಪ್ರತಿಭಟನಾಕಾರರು!

ಪ್ರತಿಭಟನಾಕಾರರು ಪತ್ತೆಯಾದ ಕರೆನ್ಸಿ ನೋಟುಗಳನ್ನು ಎಣಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಭವನಕ್ಕೆ ನುಗ್ಗಿರುವ ಪ್ರತಿಭಟನಾಕಾರರು

ಭವನಕ್ಕೆ ನುಗ್ಗಿರುವ ಪ್ರತಿಭಟನಾಕಾರರು

  • Share this:
ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ (President Gotabaya Rajapaksa) ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು (Anti Government protesters) ಅವರ ಭವನದಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಶ್ರೀಲಂಕಾದ ಮಾಧ್ಯಮ ವರದಿ ಮಾಡಿದೆ. ಪ್ರತಿಭಟನಾಕಾರರು ಪತ್ತೆಯಾದ ಕರೆನ್ಸಿ ನೋಟುಗಳನ್ನು ಎಣಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಶಪಡಿಸಿಕೊಂಡ ಹಣವನ್ನು ಭದ್ರತಾ ಘಟಕಗಳಿಗೆ ಹಸ್ತಾಂತರಿಸಲಾಗುವುದು ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ. ಕೆಲ ತಿಂಗಳುಗಳಿಂದ ದ್ವೀಪ ರಾಷ್ಟ್ರ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಈ ಸಂಬಂಧ ರಾಜಪಕ್ಸೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ನೂರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಶನಿವಾರ ಕೊಲಂಬೊದ ಹೈ-ಸೆಕ್ಯುರಿಟಿ ಫೋರ್ಟ್ ಪ್ರದೇಶದಲ್ಲಿನ ಬ್ಯಾರಿಕೇಡ್‌ಗಳನ್ನು ಮುರಿದು ರಾಜಪಕ್ಸೆ ಅವರ ನಿವಾಸಕ್ಕೆ ನುಗ್ಗಿದರು. ಪ್ರತಿಭಟನಾಕಾರರ ಮತ್ತೊಂದು ಗುಂಪು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ನುಗ್ಗಿ ಬೆಂಕಿ ಹಚ್ಚಿದೆ.

ಬಿಗಡಾಯಿಸಿದ ರಾಜಕೀಯ ಬಿಕ್ಕಟ್ಟು

ಶನಿವಾರ ಸಂಜೆ ನಡೆದ ನಾಯಕರ ಸರ್ವಪಕ್ಷ ಸಭೆಯ ನಂತರ ರಾಜೀನಾಮೆ ನೀಡುವಂತೆ ಅಬೇವರ್ಧನ ಅವರಿಗೆ ಪತ್ರ ಬರೆದ ನಂತರ ಅಧ್ಯಕ್ಷ ರಾಜಪಕ್ಸೆ ಅವರು ರಾಜೀನಾಮೆ ನೀಡುವ ನಿರ್ಧಾರವನ್ನು ಸ್ಪೀಕರ್‌ಗೆ ತಿಳಿಸಿದರು. ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಇಬ್ಬರೂ ಅನುಪಸ್ಥಿತಿಯಲ್ಲಿ ಸ್ಪೀಕರ್ ಹಂಗಾಮಿ ಅಧ್ಯಕ್ಷರಾಗುತ್ತಾರೆ. ನಂತರ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಂಸದರ ನಡುವೆ ಚುನಾವಣೆ ನಡೆಯಬೇಕು. ಪ್ರಧಾನಿ ವಿಕ್ರಮಸಿಂಘೆ ಕೂಡ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಸ್ಪೀಕರ್​ ಜೊತೆ ಮಾತ್ರ ಸಂಪರ್ಕ

ಸದ್ಯ ಅಧ್ಯಕ್ಷರು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರತಿಭಟನಾಕಾರರು ನಗರಕ್ಕೆ ನುಗ್ಗಿದಾಗಿನಿಂದ ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರೊಂದಿಗೆ ಮಾತ್ರ ಸಂಪರ್ಕದಲ್ಲಿದ್ದರು. ಅಧ್ಯಕ್ಷರು ಬುಧವಾರ ರಾಜೀನಾಮೆ ನೀಡುತ್ತಾರೆ ಎಂದು ಶನಿವಾರ ತಡರಾತ್ರಿ ಘೋಷಿಸಲಾಗಿದೆ. ಮೇ ತಿಂಗಳಲ್ಲಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಹಿರಿಯ ಸಹೋದರ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಬೃಹತ್ ಸರ್ಕಾರ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಯಿತು.

ಇದನ್ನೂ ಓದಿ: Sri Lanka Crisis: ಪ್ರೆಸಿಡೆಂಟ್ ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್​ನಲ್ಲಿ ಈಜಾಡಿದ ಶ್ರೀಲಂಕಾ ಜನ

ರಾಜಪಕ್ಸೆ ಕುಟುಂಬಕ್ಕೆ ಹಿನ್ನಡೆ

ರಾಜಪಕ್ಸೆ ಸಹೋದರರಾದ ಮಹಿಂದಾ ಮತ್ತು ಗೋಟಾಬಯ, ಎಲ್‌ಟಿಟಿಇ ವಿರುದ್ಧದ ಅಂತರ್ಯುದ್ಧವನ್ನು ಗೆದ್ದಿದ್ದಕ್ಕಾಗಿ ಶ್ರೀಲಂಕಾದಲ್ಲಿ ಅನೇಕರು ವೀರರೆಂದು ಶ್ಲಾಘಿಸಿದ್ದರು. ಆದರೆ ಈಗ ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಬುಧವಾರದಂದು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ನಿರೀಕ್ಷಿತ ನಿರ್ಗಮನ ಮತ್ತು ಮೇ ತಿಂಗಳಲ್ಲಿ ಮಹಿಂದ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವುದು ಒಂದು ದಶಕಕ್ಕೂ ಹೆಚ್ಚು ಕಾಲ ಶ್ರೀಲಂಕಾ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ಪ್ರಬಲ ಕುಟುಂಬಕ್ಕೆ ದೊಡ್ಡ ರಾಜಕೀಯ ಹಿನ್ನಡೆಯಾಗಿದೆ.

ಆರ್ಥಿಕ ಕೆಟ್ಟ ಪರಿಸ್ಥಿತಿಯಲ್ಲಿ ಲಂಕಾ

22 ಮಿಲಿಯನ್ ಜನರಿರುವ ದೇಶವಾದ ಶ್ರೀಲಂಕಾವು ಆರ್ಥಿಕ ಪ್ರಕ್ಷುಬ್ಧತೆಯ ಹಿಡಿತದಲ್ಲಿದೆ. ಏಳು ದಶಕಗಳಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ತಲುಪಿದೆ. ವಿದೇಶಿ ವಿನಿಮಯದ ತೀವ್ರ ಕೊರತೆಯಿಂದ ದುರ್ಬಲಗೊಂಡಿದೆ. ಇದರಿಂದ ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಅಗತ್ಯ ಆಮದುಗಳಿಗೆ ಪಾವತಿಸಲು ಹೆಣಗಾಡುತ್ತಿದೆ. ವಿದೇಶಿ ಸಾಲದ ಡೀಫಾಲ್ಟ್‌ಗೆ ಕಾರಣವಾದ ತೀವ್ರವಾದ ವಿದೇಶಿ ಕರೆನ್ಸಿ ಬಿಕ್ಕಟ್ಟಿನೊಂದಿಗೆ ದೇಶವು ಏಪ್ರಿಲ್‌ನಲ್ಲಿ 2026 ರ ವೇಳೆಗೆ ಬಾಕಿ ಇರುವ ಸುಮಾರು USD 25 ಶತಕೋಟಿಯಲ್ಲಿ ಈ ವರ್ಷಕ್ಕೆ ಸುಮಾರು USD 7 ಶತಕೋಟಿ ವಿದೇಶಿ ಸಾಲ ಮರುಪಾವತಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಶ್ರೀಲಂಕಾದ ಒಟ್ಟು ವಿದೇಶಿ ಸಾಲವು $51 ಬಿಲಿಯನ್ ಆಗಿದೆ.
Published by:Kavya V
First published: