ಪ್ರಾಣಿಗಳೊಟ್ಟಿಗಿನ ಅನುಬಂಧ, ಪ್ರೀತಿ ನಿಜಕ್ಕೂ ವಿಶೇಷವಾಗಿರುತ್ತದೆ. ಅವುಗಳ ಕರುಣೆ, ವಾತ್ಸಲ್ಯ ಮರೆಯಲಾಗದ್ದು. ಪ್ರಾಣಿ ಮತ್ತು ಮನುಷ್ಯರ ನಡುವಿನ ಪ್ರೀತಿ ಎಷ್ಟು ಅಗಾಧವಾಗಿರುತ್ತದೆ ಎಂಬುದಕ್ಕೆ ಸಾಕ್ಷಿಯಂತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೂದು ಬಣ್ಣದ ಮಂಗಗಳ ಜಾತಿಗೆ ಸೇರಿದ ಲಂಗೂರ್ ಮಂಚದ ಮೇಲೆ ಮಲಗಿದ್ದ ವಯಸ್ಸಾದ ಮಹಿಳೆಯನ್ನು ತಬ್ಬಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದು ವೃದ್ಧೆಯನ್ನು ಮುದ್ದಿಸುವ ರೀತಿ ಎಲ್ಲರಲ್ಲೂ ಕಣ್ಣೀರು ತರಿಸಿದೆ. ಈ ವಿಡಿಯೋವನ್ನು ರೆಡ್ಡಿಟ್ ಸಬ್ ಗ್ರೂಪ್ ಬಿಡುಗಡೆ ಮಾಡಿದ್ದು, ಹಾಸಿಗೆಯಲ್ಲಿ ಮಲಗಿರುವ ವೃದ್ಧೆ ತಮ್ಮನ್ನು ನೋಡಲು ಬಂದ ಲಂಗೂರ್ ಅನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದಾರೆ.
ವಯಸ್ಸಾದ ಮಹಿಳೆ ನಿಯಮಿತವಾಗಿ ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿದ್ದರು. ಈ ವೃದ್ಧೆ ಅನಾರೋಗ್ಯಕ್ಕೆ ಒಳಗಾದ ನಂತರ ಅವುಗಳಿಗೆ ಆಹಾರ ನೀಡಲು ಸಾಧ್ಯವಾಗಲಿಲ್ಲ. ಆ ಪ್ರಾಣಿಗಳಲ್ಲಿ ಒಂದಾದ ಲಂಗೂರ್ ಕೆಲವು ದಿನಗಳವರೆಗೆ ಆಕೆ ಕಾಣದಿರುವ ಬಗ್ಗೆ ಚಿಂತೆಗೀಡಾಗಿ, ನಂತರ ಆಕೆಯ ಆರೋಗ್ಯ ಹೇಗಿದೆ ಎಂದು ವಿಚಾರಿಸಲು ಮುಂದಾಯಿತು. ಆಗ ಅವರಿಬ್ಬರ ನಡುವಿನ ಬಾಂಧವ್ಯ ಹೇಳುವ ಆ ಮುದ್ದಾಟ ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಕೇವಲ ರೆಡ್ಡಿಟ್‍ನಲ್ಲಿ ಮಾತ್ರ ವೈರಲ್ ಆಗಲಿಲ್ಲ. ಎಲ್ಲೆಡೆ ಜನರ ಮನಸ್ಸನ್ನು ಗೆದ್ದಿದೆ. ಜೊತೆಗೆ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಬಾಂಧವ್ಯ ಹಾಗೂ ಒಡನಾಟದ ಕುರಿತು ಚರ್ಚೆಯಾಗುತ್ತಿದೆ.
ಕೆಲವರು ಮನುಷ್ಯ ಮತ್ತು ಮಂಗಗಳ ಆತ್ಮೀಯ ಒಡನಾಟ ದೇವಾಲಯಗಳಲ್ಲಿ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಮನುಷ್ಯರು ಕಾಡಿನಲ್ಲಿ ವಾಸವಿರುವ ಪ್ರಾಣಿಗಳ ಅಥವಾ ಪರಭಕ್ಷಕ ಪ್ರಾಣಿಗಳನ್ನು ಸಾಕಾಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಇದೇ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರೈಲ್ವೆ ನಿಲ್ದಾಣದಲ್ಲಿ ಮಂಗನೊಂದು ನೀರು ಕುಡಿಯಲು ರೈಲ್ವೆ ನಿಲ್ದಾಣದಲ್ಲಿರುವ ನಲ್ಲಿಗಳ ಬಳಿ ಅಲೆದಾಡುತ್ತಿರುತ್ತದೆ. ಆಗ ಅಲ್ಲಿಗೆ ಬಂದ 40 ರ ಆಸುಪಾಸಿನ ಮಹಿಳೆಯೊಬ್ಬಳು ನಲ್ಲಿಯನ್ನು ತಿರುಗಿಸಿ ಮಂಗನಿಗೆ ನೀರು ಕುಡಿಯುವಂತೆ ಹೇಳುತ್ತಾಳೆ. ಬಹಳ ಬಾಯಾರಿದ್ದ ಮಂಗವು ಮಹಿಳೆ ಕರೆದ ತಕ್ಷಣ ಓಡಿ ಬಂದು ನೀರು ಕುಡಿಯುತ್ತದೆ. ನಂತರ ನೀರು ಕುಡಿಯಲು ನಿಲ್ಲಿಸಿದಾಗ ಆಕೆಯೇ ಬೊಗಸೆಯಲ್ಲಿ ತೆಗೆದುಕೊಂಡು ಕುಡಿಸಲು ನೋಡುತ್ತಾಳೆ. ಸಾಧ್ಯವಾಗದಿದ್ದಾಗ ಮತ್ತೆ ಬಂದು ನೀರು ಕುಡಿಯುವಂತೆ ಹೇಳುತ್ತಾಳೆ. ಆಗ ಪುನಃ ನಲ್ಲಿಯಲ್ಲಿ ನೀರು ಕುಡಿಯುತ್ತದೆ. ಆಗ ಸ್ವಲ್ಪ ಸಮಯದ ಮೇಲೆ ಮಹಿಳೆಯ ಹೆಗಲ ಮೇಲೆ ಕಾಲು ಹಾಕಿ ಮುದ್ದಿಸಲು ನೋಡುತ್ತದೆ. ಈ ವಿಡಿಯೋವನ್ನು ಸಹ ನೆಟ್ಟಿಗರು ಮೆಚ್ಚಿದ್ದರು.
ಇದನ್ನೂ ಓದಿ: Happy Birthday Loose Mada Yogi: ಲಂಕೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಲೂಸ್ ಮಾದ ಯೋಗಿ
ಈ ಘಟನೆ ಪಶ್ಚಿಮ ಬಂಗಾಳದ ಚಿತ್ತಾರಗಂಜ್ ರೈಲ್ವೆ ನಿಲ್ದಾಣದಲ್ಲಿ ನಡೆದಿತ್ತು. ಈ ವಿಡಿಯೋವನ್ನು ದೀಪಕ್ ಕುಮಾರ್ ಸಿಂಗ್ ಎಂಬುವರು ಸೆರೆಹಿಡಿದಿದ್ದರು.
ನೀರು ಕುಡಿತೀಯಾ? ಇನ್ನು ಸ್ವಲ್ಪ ಬೇಕಾ? ಬಾ ಕುಡಿ ಎಂದು ಮಹಿಳೆ ಕೇಳುವಂತೆ ಕೆಲವೊಮ್ಮೆ ತಿಂಡಿ ತಿನ್ನುವ ವಿಷಯದಲ್ಲಿ ನನ್ನ ಅಮ್ಮನೂ ಹೀಗೆ ಹೇಳುತ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದರು. ಪ್ರಾಣಿಗಳ ಪ್ರೀತಿಯಲ್ಲಿ ಸ್ವಾರ್ಥವಿರುವುದಿಲ್ಲ. ಅವು ಮನುಷ್ಯರ ರೀತಿಯಲ್ಲ. ಯಾರಿಂದಲೂ ಏನನ್ನೂ ಬಯಸದೇ ಪ್ರೀತಿಯನ್ನು ಹಂಚುತ್ತಲೇ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ