• Home
 • »
 • News
 • »
 • national-international
 • »
 • ಸಿಎಂ ಜಗನ್​ ಮೋಹನ್​ ರೆಡ್ಡಿ ಆಗಮನಕ್ಕೂ ಮುನ್ನ ವಿಜಯವಾಡದ ಕನಕದುರ್ಗಾ ದೇವಾಲಯದಲ್ಲಿ ಭೂ ಕುಸಿತ

ಸಿಎಂ ಜಗನ್​ ಮೋಹನ್​ ರೆಡ್ಡಿ ಆಗಮನಕ್ಕೂ ಮುನ್ನ ವಿಜಯವಾಡದ ಕನಕದುರ್ಗಾ ದೇವಾಲಯದಲ್ಲಿ ಭೂ ಕುಸಿತ

ಭೂಕುಸಿತದಿಂದ ಆದ ಅನಾಹುತ

ಭೂಕುಸಿತದಿಂದ ಆದ ಅನಾಹುತ

ಆಂಧ್ರಪ್ರದೇಶ ಸಿಎಂ ವೈಎಸ್​ ಜಗನ್​ ಮೋಹನ್​ ರೆಡ್ಡಿ ದೇವಸ್ಥಾನಕ್ಕೆ ಆಗಮಿಸುವ ಕೆಲ ಹೊತ್ತಿಗೆ ಮುಂಚೆ ಈ ಘಟನೆ ಸಂಭವಿಸಿದೆ. 

 • Share this:

  ವಿಜಯವಾಡ(ಅ.21): ಇಲ್ಲಿನ ಪ್ರಖ್ಯಾತ ಕನಕದುರ್ಗಾ ದೇವಾಲಯದಲ್ಲಿ ಭೂ ಕುಸಿತ ಸಂಭವಿಸಿದೆ. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಕೆಲ ಭಕ್ತರು ಅವಶೇಷಗಳ ಅಡಿ ಸಿಲುಕಿದ್ದಾರೆ. ಆಂಧ್ರಪ್ರದೇಶ ಸಿಎಂ ವೈಎಸ್​ ಜಗನ್​ ಮೋಹನ್​ ರೆಡ್ಡಿ ದೇವಸ್ಥಾನಕ್ಕೆ ಆಗಮಿಸುವ ಕೆಲ ಹೊತ್ತಿಗೆ ಮುಂಚೆ ಈ ಘಟನೆ ಸಂಭವಿಸಿದೆ. ಬೆಟ್ಟದ ಮೇಲಿರುವ ಈ ದೇವಾಲಯ ಹೆಚ್ಚು ಜನಜನಿತವಾಗಿದೆ. ದಸರಾ ಸಂದರ್ಭದಲ್ಲಿ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆ ಪುನಸ್ಕಾರಕ್ಕಾಗಿ ದೇಶದಾದ್ಯಂತ ಭಕ್ತರು ಆಗಮಿಸುತ್ತಾರೆ. ನಿರಂತರ ಮಳೆಯ ಪರಿಣಾಮದಿಂದ ಬೆಟ್ಟದಿಂದ ದೊಡ್ಡ ಬಂಡೆ ಉರುಳಿದ ಪರಿಣಾಮ ಈ ಭೂ ಕುಸಿತ ಸಂಭವಿಸಿದೆ. ಇದರಿಂದ ದೇವಾಲಯದ ಆವರಣದಲ್ಲಿದ್ದ ಕಬ್ಬಿಣದ ಶೆಡ್​ ನೆಲಸಮವಾಗಿದೆ. ಈ ಶೆಡ್​ ಅಡಿ ಭಕ್ತಾದಿಗಳು ಸಿಲುಕಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.


  ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್​ 19 ಸುರಕ್ಷಾ ನಿಯಮದೊಂದಿಗೆ ನವರಾತ್ರಿ ಹಿನ್ನಲೆ ದೇಗುಲವನ್ನು ತೆರೆಯಲಾಗಿದ್ದು, ಭಕ್ತಾದಿಗಳು ವಿಶೇಷ ಪೂಜೆಗೆ ಆಗಮಿಸಿದ್ದರು.  ನವರಾತ್ರಿ ಹಿನ್ನಲೆ ದೇವರಿಗೆ ಪಟ್ಟು ವಸ್ತ್ರ (ರೇಷ್ಮೆ ಬಟ್ಟ) ನೀಡಲು ಮುಖ್ಯಮಂತ್ರಿ ಜಗನ್​ ಇಂದು ಸಂಜೆ 4.45ಕ್ಕೆ ದೇವಸ್ಥಾನಕ್ಕೆ ಆಗಮಿಸಲಿದ್ದರು. ಈ ಹಿನ್ನಲೆ ದೇವಸ್ಥಾನದಲ್ಲಿ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿತ್ತು.


  ಇದನ್ನು ಓದಿ: ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋಟಿ ಕೋಟಿ ದೇಣಿಗೆ ನೀಡಿದ ಟಾಲಿವುಡ್​ ನಟರು..!


  ದೇವಸ್ಥಾನದ ಸಂಪ್ರದಾಯದ ಪ್ರಕಾರ ನವರಾತ್ರಿ ಸಮಯದಲ್ಲಿ ಮೂಲ ನಕ್ಷತ್ರದ ದಿನದಿಂದು ರಾಜ್ಯದ ಮುಖ್ಯಮಂತ್ರಿಗಳು ದೇವರಿಗೆ ಪಟ್ಟು ವಸ್ತ್ರ ದಾನ ಮಾಡುವ ಪ್ರತೀತಿ ಇದೆ. ಇದು ಎರಡನೇ ಬಾರಿ ಜಗನ್​ ಮೋಹನ್​ ರೆಡ್ಡಿ ದೇವರಿಗೆ ಈ ಸೇವೆ ನೀಡಲು ಮುಂದಾಗಿದ್ದರು.


  ಸ್ಥಳಕ್ಕೆ ಡಿಸಿ ಎಎಂಡಿ ಇಮ್ತಿಯಾಜ್​ ಮತ್ತು ವಿಜಯವಾಡ ಕಮಿಷನರ್​ ಬಿ ಶ್ರೀನಿವಾಸಲು ಆಗಮಿಸಿ ಪರಿಶೀಲನೆ ನಡೆಸಿದರು. ನಾಗರೀಕ ಪೂರೈಕೆ ಸಚಿವ ಕೆ ಶ್ರೀವೆಂಕಟೇಶ್ವರ ರಾವ್​ ಮತ್ತು ಗನ್ನವರಂ ಶಾಸಕ ವಿ ವಂಶಿ ರಕ್ಷಣಾ ಕಾರ್ಯ ಕುರಿತು ಪರಿಶೀಲಿಸಿದರು.

  Published by:Seema R
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು