ಇತ್ತೀಚೆಗಷ್ಟೇ ಬಿಜೆಪಿ(BJP)ಯ ಗೆಲುವನ್ನು ಸಂಭ್ರಮಿಸಿ ಕಾರಣಕ್ಕೆ ಉತ್ತರ ಪ್ರದೇಶ(Uttara Pradesh)ದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಿದಂತಹ ಘಟನೆ ನಡೆದಿತ್ತು, ಈಗ ಇದೇ ರೀತಿಯ ಇನ್ನೊಂದು ಘಟನೆಯ ಸೂಚನೆ ಸಿಕ್ಕಿದೆ. ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra modi) ಫೋಟೋ ಇಟ್ಟುಕೊಂಡಿರುವುದಕ್ಕೆ ವ್ಯಕ್ತಿಯೊಬ್ಬರನ್ನು ಮನೆಯ ಮಾಲೀಕ ಮನೆ ಖಾಲಿ ಮಾಡುವಂತೆ ಬೆದರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಇಂದೋರ್ನ ನಿವಾಸಿಯೊಬ್ಬರು ಮಂಗಳವಾರ 'ಜಾನ್ಸುನ್ವೈ' ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಹೊಂದಿದ್ದಕ್ಕಾಗಿ ಮನೆಯನ್ನು ಖಾಲಿ ಮಾಡುವಂತೆ ತನ್ನ ಮನೆಯ ಮಾಲೀಕ ಬೆದರಿಸಿದ್ದಾಗಿ ದೂರು ನೀಡಿದ್ದಾರೆ.
ಮೋದಿ ಅವರಿಂದ ಸ್ಫೂರ್ಥಿ ಪಡೆದ ಯೂಸುಫ್ ಖಾನ್
ಇಂದೋರ್ನ ಪಿರ್ ಗಲಿ ನಿವಾಸಿ ಯೂಸುಫ್ ಖಾನ್, ನಾನು ಪ್ರಧಾನಿಯಿಂದ ಸ್ಫೂರ್ತಿ ಪಡೆದಿದ್ದೇನೆ ಮತ್ತು ಮನೆಯಲ್ಲಿ ಅವರ ಫೋಟೋ ಇದೆ ಎಂದು ಹೇಳಿದರು.
ಮನೆ ಮಾಲೀಕರಿಂದ ಹೆಚ್ಚಿದ ಒತ್ತಡ
ಯೂಸುಫ್ ಖಾನ್ ಅವರು ತಮ್ಮ ಮನೆ ಮಾಲೀಕರಾದ ಯಾಕೂಬ್ ಮನ್ಸೂರಿ, ಸುಲ್ತಾನ್ ಮನ್ಸೂರಿ, ಷರೀಫ್ ಮನ್ಸೂರಿ ಅವರಿಂದ ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.
ಇದನ್ನೂ ಓದಿ: PM Museum: ಏಪ್ರಿಲ್ 14ಕ್ಕೆ ಪ್ರಧಾನ ಮಂತ್ರಿ ಸಂಗ್ರಹಾಲಯ ಉದ್ಘಾಟನೆ; ಇಲ್ಲಿದೆ ಇದರ ವಿಶೇಷತೆ
“ನಾನು ಪ್ರಧಾನಿಯನ್ನು ತುಂಬಾ ಗೌರವಿಸುತ್ತೇನೆ. ಅವರ ಭಾಷಣಗಳನ್ನು ಅನುಸರಿಸುತ್ತೇನೆ. ಅವರ ಚಿತ್ರ ನನ್ನ ಮನೆಯಲ್ಲಿದೆ. ಆದರೆ ಜಮೀನುದಾರರು ಅದನ್ನು ತೆಗೆದುಹಾಕುವಂತೆ ನನ್ನನ್ನು ಕೇಳಿದರು. ಅವರು ನನ್ನನ್ನು ಹೊಡೆದು ಮನೆಯನ್ನು ಖಾಲಿ ಮಾಡುವಂತೆ ಒತ್ತಾಯಿಸುತ್ತಾರೆ ಎಂದು ಅವರು ಹೇಳಿದರು.
ಸಂಘದ ಸಿದ್ಧಾಂತದಿಂದ ಪ್ರಭಾವಿತ
ತಾನು "ಸಂಘದ ಸಿದ್ಧಾಂತ" ದೊಂದಿಗೆ ಹೊಂದಿಕೊಂಡಿದ್ದೇನೆ ಮತ್ತು ಸಂಬಂಧಿತ ಲೇಖನಗಳನ್ನು ಓದುತ್ತೇನೆ ಎಂದು ಖಾನ್ ಹೇಳಿದರು.
ಇದನ್ನೂ ಓದಿ: Evening Digest: ಮಾ31ಕ್ಕೆ ರಾಜ್ಯಕ್ಕೆ ರಾಹುಲ್ ಗಾಂಧಿ; ಕುಕ್ಕೆಗೆ ಪವನ್ ಕಲ್ಯಾಣ್ ಭೇಟಿ: ಈ ದಿನದ ಸುದ್ದಿಗಳು
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡುವಂತಿಲ್ಲ
ದೂರನ್ನು ಉಲ್ಲೇಖಿಸಿದ ಹೆಚ್ಚುವರಿ ಡಿಸಿಪಿ ಮನಿಶಾ ಪಾಠಕ್ ಸೋನಿ, ಪ್ರತಿಯೊಬ್ಬ ನಾಗರಿಕರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಮತ್ತು ಯೂಸುಫ್ ಖಾನ್ ಅವರ ಆಯ್ಕೆಯ ಚಿತ್ರಗಳನ್ನು ಮನೆಯಲ್ಲಿ ಇಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಸಂಭ್ರಮಿಸಿದ್ದಕ್ಕಾಗಿ ಮುಸ್ಲಿಂ ಯುವಕನ ಕೊಲೆ ಮಾಡಿರುವ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕುಶಿನಗರದಲ್ಲಿ ಭಾರತೀಯ ಜನತಾ ಪಕ್ಷದ ಪ್ರಚಾರಕ್ಕಾಗಿ ಮುಸ್ಲಿಂ ವ್ಯಕ್ತಿಯ ಹತ್ಯೆಯ ತನಿಖೆಗೆ ಆದೇಶಿಸಿದ್ದಾರೆ. ಆ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
BJP ಪರ ಪ್ರಚಾರ ಮಾಡಿ ಕೊಲೆಯಾದ ವ್ಯಕ್ತಿ
ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ವಿಜಯೋತ್ಸವ ಆಚರಿಸಿದ್ದಕ್ಕಾಗಿ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ 25 ವರ್ಷದ ಮುಸ್ಲಿಂ ವ್ಯಕ್ತಿ ಬಾಬರ್ ಅಲಿ ಭಾನುವಾರದಂದು ತನ್ನ ನೆರೆಹೊರೆಯವರಿಂದ ಥಳಿಸಲ್ಪಟ್ಟ ನಂತರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 20 ರಂದು ಕಥರ್ಗರ್ಹಿಯಲ್ಲಿ ಅವರನ್ನು ಥಳಿಸಲಾಯಿತು. ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದರು. ಭಾನುವಾರ ಅವರ ಮೃತದೇಹವನ್ನು ಅವರ ಗ್ರಾಮಕ್ಕೆ ಕೊಂಡೊಯ್ಯಿದಾಗ, ಅವರ ಕುಟುಂಬವು ಅಂತ್ಯಕ್ರಿಯೆಯನ್ನು ಮಾಡಲು ನಿರಾಕರಿಸಿತು. ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ