Pakistan Goat Market: IITಯಂತೆ ಶಿಕ್ಷಣ ಸಂಸ್ಥೆ ಕಟ್ಟೋಕೆ ಹೊರಟ ಪಾಕ್, ಆಗಿದ್ದು ಮಾತ್ರ ಮೇಕೆ ಮಾರ್ಕೆಟ್

ಪಾಕಿಸ್ತಾನದಲ್ಲಿ ಮಹತ್ವಾಕಾಂಕ್ಷಿ ಶಿಕ್ಷಣ ಯೋಜನೆ ನೆಲಕಚ್ಚಿರುವ ತಾಜಾ ಉದಾಹರಣೆಯೊಂದು ಈಗ ಎಲ್ಲೆಡೆ ಸುದ್ದಿಯಾಗಿ ಪಾಕ್​​ ತೀವ್ರ ಮುಜುಗರ ಎದುರಿಸುವಂತಾಗಿದೆ. ಐಐಟಿಯಂತಹ ಶಿಕ್ಷಣ ನಿರ್ಮಿಸಲು ಹೊರಟ ಪಾಕ್​ನಲ್ಲಿ ಅದೇ ಜಾಗ ಈಗ ಆಡಿನ ಮಾರ್ಕೆಟ್ ಆಗಿ ಬದಲಾಗಿದೆ.

ದನ ಹಾಗೂ ಆಡಿನ ಮಾರ್ಕೆಟ್ ಆಗಿ ಬದಲಾಗಿರುವ ಸ್ಥಳ

ದನ ಹಾಗೂ ಆಡಿನ ಮಾರ್ಕೆಟ್ ಆಗಿ ಬದಲಾಗಿರುವ ಸ್ಥಳ

  • Share this:
ಇಸ್ಲಮಾಬಾದ್(ಜು.19): ಪಾಕಿಸ್ತಾನ ಹೇಳುವುದು ಒಂದು, ಆದರೆ ಮಾಡುವುದೆಲ್ಲ ಎಡವಟ್ಟುಗಳು. ಇದನ್ನು ಆಗಾಗ ಸಾಬೀತುಪಡಿಸುತ್ತಲೇ ಇರುತ್ತದೆ ಪಾಕಿಸ್ತಾನ (Pakistan). ಈಗ ಪಾಕಿಸ್ತಾನದ ಮಹತ್ಪಾಕಾಂಕ್ಷಿ ಯೋಜನೆಯೊಂದು (Project) ಎಂಥಾ ಅವಸ್ಥೆ ತಲುಪಿದೆ ಎನ್ನುವುದು ಎಲ್ಲಾ ಕಡೆಯಲ್ಲೂ ಸುದ್ದಿಯಾಗಿದೆ. ಭಾರತದಲ್ಲಿ ಐಐಟಿ(IIT)ಗಳಿರುವಂತೆಯೇ ಅದೇ ಗುಣಮಟ್ಟದಲ್ಲಿ ಪಾಕಿಸ್ತಾನದಲ್ಲಿಯೂ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ರೂಪಿಸಲು ಯೋಜನೆ ಮಾಡಲಾಗಿತ್ತು. ಈ ಯೋಜನೆಯ ಭಾಗವಾಗಿ ಸಂಸ್ಥೆಗಾಗಿ ಒಂದಷ್ಟು ಜಾಗವನ್ನು ಮೀಸಲಿಡಲಾಗಿತ್ತು. ಆದರೆ ಯೋಜನೆ ನೆಲಕಚ್ಚಿಹೋಯ್ತು. ಶಿಕ್ಷಣ ಸಂಸ್ಥೆಗಾಗಿ ಮೀಸಲಿಟ್ಟಿದ್ದ ಜಾಗವಂತೂ ದೊಡ್ಡ ಗೊಬ್ಬರದ ರಾಶಿಯಾಗಿಬಿಟ್ಟಿದೆ.

ಪಾಕಿಸ್ತಾನದ ಉನ್ನತ ಶಿಕ್ಷಣ ಸುಧಾರಣೆಗಳ ಭೀಕರ ಪರಿಸ್ಥಿತಿ ಈಗ ಜಗತ್ತೇ ನೋಡಿ ನಗುವಂತಾಗಿದೆ. ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮತ್ತು ಪಂಜಾಬ್ ಮಾಹಿತಿ ತಂತ್ರಜ್ಞಾನ ಮಂಡಳಿಯ (ಪಿಐಟಿಬಿ) ಮಾಜಿ ಅಧ್ಯಕ್ಷ ಡಾ. ಉಮರ್ ಸೈಫ್ ಅವರು ಅಲ್ಲಿನ ಘಟನೆಗಳನ್ನು ಬೆಳಕಿಗೆ ತಂದಿದ್ದಾರೆ.

ಆಡು, ದನ ಮಾರುವ ಮಾರುಕಟ್ಟೆ

ಘಟನೆಯೊಂದನ್ನು ಹೈಲೈಟ್ ಮಾಡಿದ ಸೈಫ್, 2013 ರಲ್ಲಿ ಪಾಕಿಸ್ತಾನದಲ್ಲಿ ಶಿಕ್ಷಣ ಸಂಸ್ಥೆಯ ನಿರ್ಮಾಣಕ್ಕಾಗಿ ಭೂಮಿಯನ್ನು ಮೀಸಲಿಡಲಾಗಿತ್ತು. ಅದು ಪಾಕಿಸ್ತಾನದಲ್ಲಿ ಐಐಟಿಗೆ ಸಮನಾಗಿರುತ್ತದೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಒಂಬತ್ತು ವರ್ಷಗಳ ನಂತರ, ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಯಾಗಿ ಅಭಿವೃದ್ಧಿ ಹೊಂದಬೇಕಿದ್ದ ಸಂಸ್ಥೆಯು ದನಗಳ ಮಾರುಕಟ್ಟೆ ಅಥವಾ ಬಕ್ರ ಮಂಡಿ (ಆಡುಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಮಾರುಕಟ್ಟೆ) ಆಗಿ ಮಾರ್ಪಟ್ಟಿದೆ.

ಎಂಐಟಿ ಹೋಗಿ ಮಾರ್ಕೆಟ್ ಸಿದ್ಧ

“2013 ರಲ್ಲಿ, ನಾವು ಪಾಕಿಸ್ತಾನಕ್ಕಾಗಿ MIT ನಿರ್ಮಿಸಲು ಹೊರಟಿದ್ದೇವೆ. ಇದು ಭಾರತದಲ್ಲಿ ಐಐಟಿಗೆ ಸಮನಾಗುವ ಎಲ್ಲಾ ಅಂಶಗಳನ್ನು ಹೊಂದಿತ್ತು. ಇಂದು, ಅದರ ಕ್ಯಾಂಪಸ್‌ಗಾಗಿ ಗುರುತಿಸಲಾದ ಸೈಟ್ ಅನ್ನು ಬಕ್ರ ಮಂಡಿಯಾಗಿ (ಆಡಿನ ಮಾರುಕಟ್ಟೆ) ಪರಿವರ್ತಿಸಲಾಗಿದೆ," ಎಂದು ಅವರು ಬರೆದಿದ್ದಾರೆ.





ಅವರು ಇನ್ಸ್ಟಿಟ್ಯೂಟ್ ನಿರ್ಮಿಸಲು ಮಂಜೂರು ಮಾಡಿದ ಭೂಮಿಯ ಫೊಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಚಿತ್ರಗಳಲ್ಲಿ ಈ ಪ್ರದೇಶವು ಈಗ ಮಾರುಕಟ್ಟೆ ಸ್ಥಳವಾಗಿ ಮಾರ್ಪಟ್ಟಿರುವುದನ್ನು ಕಾಣಬಹುದು. ಪ್ರಾಣಿಗಳು ಅದರ ಸುತ್ತಲೂ ಅಡ್ಡಾಡುವುದನ್ನು ಕಾಣಬಹುದು.

ಇದನ್ನೂ ಓದಿ: Explained: ಮಂಕಿಪಾಕ್ಸ್ ಬರದಂತೆ ತಡೆಯೋದು ಹೇಗೆ? ಬಂದರೆ ಏನು ಮಾಡಬೇಕು?

ಯುಎನ್‌ಡಿಪಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿರುವ ಸೈಫ್, ಮುಖ್ಯ ಕ್ಯಾಂಪಸ್‌ಗಾಗಿ ಭೂಮಿಯನ್ನು ಹೊಂದಿದ್ದರೂ, ತಂತ್ರಜ್ಞಾನ ಸಂಸ್ಥೆ ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹೇಳಿದ್ದಾರೆ. ಸೈಫ್ ಪ್ರಕಾರ, ಸಂಸ್ಥೆಯು ಪ್ರತಿಷ್ಠಿತ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಡಿಮೆ ಆವೃತ್ತಿಯಾಗಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಗೆ ಸಮನಾಗಿದೆ.

ಶಿಕ್ಷಣ ಸಂಸ್ಥೆಗಾಗಿ ಮೀಸಲಿಟ್ಟಿದ್ದ ಸ್ಥಳ


ಎಲ್ಲವೂ ನಡೆದರೂ ಅನುದಾನವೇ ಸಿಗಲಿಲ್ಲ

2011 ರಲ್ಲಿ, ಪಾಕಿಸ್ತಾನದ ಆಗಿನ ಪಂಜಾಬ್ ಮುಖ್ಯಮಂತ್ರಿ ಮುಹಮ್ಮದ್ ಶಹಬಾಜ್ ಷರೀಫ್ ಅವರು ಪಂಜಾಬ್ ಮಾಹಿತಿ ತಂತ್ರಜ್ಞಾನ ಮಂಡಳಿಯನ್ನು ಮುನ್ನಡೆಸುವಂತೆ ಮತ್ತು ಪಂಜಾಬ್‌ನಲ್ಲಿ ಉನ್ನತ ಶ್ರೇಣಿಯ ಐಟಿ ಸಂಸ್ಥೆಯನ್ನು ಸ್ಥಾಪಿಸುವಂತೆ ಒತ್ತಾಯಿಸಿದರು ಎಂದು ಸೈಫ್ ಅವರು ದಿ ಎಕ್ಸ್‌ಪ್ರೆಸ್ ಎಕ್ಸ್‌ಪ್ರೆಸ್‌ಗೆ ಬರೆದ ಲೇಖನದಲ್ಲಿ ನೆನಪಿಸಿಕೊಂಡರು. ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾಲಯವನ್ನು (ITU) 2013 ರಲ್ಲಿ ಸ್ಥಾಪಿಸಲಾಯಿತು. ಸೈಫ್ ಅದರ ಸಂಸ್ಥಾಪಕ ಉಪಕುಲಪತಿಯಾದರು.

ಇದನ್ನೂ ಒದಿ: Prajwal Revanna: ಆನೆ ದಂತವೇ ಹಾಟ್ ಟಾಪಿಕ್! ಮನೇಕಾ ಗಾಂಧಿಗೆ ಪ್ರಜ್ವಲ್ ರೇವಣ್ಣ ಸವಾಲು

ಶಿಕ್ಷಣ ಸಂಸ್ಥೆಗಳಿಗೆ ಸಿಗುತ್ತಿಲ್ಲ ಅನುದಾನ

ಯೋಜನೆಗೆ ಕೊಟ್ಟ ನಿಧಿಯಲ್ಲಿನ ಕಡಿತದಿಂದಾಗಿ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳು ಮುಚ್ಚುವ ಬೆದರಿಕೆಯನ್ನು ಎದುರಿಸುತ್ತಿವೆ ಎಂದು ಪಾಕಿಸ್ತಾನದ ವರದಿಗಳು ಸೂಚಿಸುತ್ತವೆ. ಪಾಕಿಸ್ತಾನದ 141 ಸಾರ್ವಜನಿಕ ವಲಯದ ವಿಶ್ವವಿದ್ಯಾನಿಲಯಗಳು ಪಾಕಿಸ್ತಾನ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನದಲ್ಲಿ ತೀವ್ರ ಕಡಿತ ಮಾಡುತ್ತಿವೆ.
Published by:Divya D
First published: