ಬಹಕೋಟಿ ಮೇವು ಹಗರಣ: ಸಿಬಿಐ ಕೋರ್ಟ್​ ಆದೇಶದಂತೆ ಶರಣಾದ ಲಾಲೂ ಮತ್ತೆ ಜೈಲಿಗೆ..!

ಮೇವು ಹಗರಣದ 2 ಮತ್ತು 3ನೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಯಾದವ್ ಸದ್ಯ ರಾಂಚಿಯ ಬಿಸ್ರಾ ಮುಂಡಾ ಜೈಲಿಗೆ ಮತ್ತೆ ಮರಳಿದ್ದಾರೆ.


Updated:August 30, 2018, 12:53 PM IST
ಬಹಕೋಟಿ ಮೇವು ಹಗರಣ: ಸಿಬಿಐ ಕೋರ್ಟ್​ ಆದೇಶದಂತೆ ಶರಣಾದ ಲಾಲೂ ಮತ್ತೆ ಜೈಲಿಗೆ..!
ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಲಾಲೂಗೆ ಜೈಲು

Updated: August 30, 2018, 12:53 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.30): ಬಹುಕೋಟಿ ಮೇವು ಹಗರಣದಲ್ಲಿ ಜೈಲುಪಾಲಾಗಿದ್ದ ಆರ್​ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್, ಜಾಮೀನು ಅವಧಿ ಮುಗಿಯುವ ಮುನ್ನವೇ ಸಿಬಿಐ ಕೋರ್ಟ್​ ಆದೇಶಂದತೆ ಪೊಲೀಸರಿಗೆ ಶರಣಾಗಿದ್ಧಾರೆ. ಮತ್ತೆ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್‌ರನ್ನು ಬಿರ್ಸಾ ಮುಂಡ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗುತ್ತದೆ.

ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್‌ಗೆ ಅನಾರೋಗ್ಯದ ಕಾರಣಕ್ಕೆ ರಾಂಚಿ ಕೋರ್ಟ್‌ ಆರು ವಾರಗಳ ವೈದ್ಯಕೀಯ ಜಾಮೀನು ನೀಡಿತ್ತು. ನಂತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವ ಕಾರಣ ಅವರನ್ನು ರಾಜೇಂದ್ರ ವೈದ್ಯಕೀಯ ಶಿಕ್ಷಣ ಸಂಸ್ಥೆ (ರಿಮ್ಸ್‌)ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

ಸದ್ಯ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು ಸಿಬಿಐ ಕೋರ್ಟ್​ ಆದೇಶದಂತೆ ಮತ್ತೆ ಪೊಲೀಸರ ಬಂಧನಕ್ಕೆ ವಾಪಸ್ಸಾಗಿದ್ಧಾರೆ. ಅಲ್ಲದೇ ಇದಕ್ಕೂ ಮೊದಲು ತನ್ನ ಹಿರಿಯ ಪುತ್ರ ಸಚಿವ ತೇಜ್ ಪ್ರತಾಪ್ ಯಾದವ್ ವಿವಾಹದಲ್ಲಿ ಪಾಲ್ಗೊಳ್ಳಲು ಕೋರ್ಟ್​​ ಐದು ದಿನಗಳ ಪರೋಲ್ ನೀಡಿತ್ತು. ಮೇ 12ರಂದು ನಡೆದ ಮದುವೆಯಲ್ಲಿಯೂ ಲಾಲೂ ಭಾಗಿಯಾಗಿದ್ದರು.

ಬಳಿಕ ಕೋರ್ಟ್​​ ಆಗಸ್ಟ್​ 30ನೇ ತಾರೀಖಿನೊಳಗೆ ಮತ್ತೆ ಶರಣಾಗಬೇಕು ಎಂದು ಆದೇಶಿಸಿತು. ಇದೀಗ ಲಾಲೂ ಕೋರ್ಟ್​ ಸೂಚನೆಯಂತೆ ಜೈಲಿಗೆ ವಾಪಾಸ್ಸಾಗಿದ್ಧಾರೆ. 2 ದಶಕಗಳ ಹಿಂದೆ ದಿಯೋಗಢ್ ಖಜಾನೆಯಿಂದ 3.13 ಕೋಟಿ ರೂ. ಅಕ್ರಮವಾಗಿ ಡ್ರಾ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ಧಾರೆ ಲಾಲೂ ಪ್ರಸಾದ್​ ಯಾದವ್​.

ಮೇವು ಹಗರಣದ 2 ಮತ್ತು 3ನೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಯಾದವ್ ಸದ್ಯ ರಾಂಚಿಯ ಬಿಸ್ರಾ ಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ 23ರಿಂದ ಮೇವು ಹಗರಣದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್, 21 ವರ್ಷಗಳ ಹಿಂದೆ ದಿಯೋಘಢ್ ಖಜಾನೆಯಿಂದ ಅಕ್ರಮವಾಗಿ 89.27 ಕೋಟಿ ಹಣ ಪಡೆದ ಅಪರಾಧದಡಿ ಲಾಲೂಗೆ ಶಿಕ್ಷೆ ವಿಧಿಸಿತ್ತು.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ