• Home
 • »
 • News
 • »
 • national-international
 • »
 • Fodder Scam Case: ಮೇವು ಹಗರಣ ಐದನೇ ಪ್ರಕರಣ; ಲಾಲೂ ಪ್ರಸಾದ್ ಯಾದವ್​​ಗೆ ​ ಐದು ವರ್ಷ ಶಿಕ್ಷೆ

Fodder Scam Case: ಮೇವು ಹಗರಣ ಐದನೇ ಪ್ರಕರಣ; ಲಾಲೂ ಪ್ರಸಾದ್ ಯಾದವ್​​ಗೆ ​ ಐದು ವರ್ಷ ಶಿಕ್ಷೆ

ಲಾಲು ಪ್ರಸಾದ್​ ಯಾದವ್​

ಲಾಲು ಪ್ರಸಾದ್​ ಯಾದವ್​

ಐದು ವರ್ಷ ಜೈಲು ಶಿಕ್ಷೆ ಹಾಗೂ 60 ಲಕ್ಷ ದಂಡವನ್ನ ವಿಧಿಸಿದ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.

 • Share this:

  ಬಹುಕೋಟಿ ಮೇವು ಹಗರಣಕ್ಕೆ (Fodder Scam Case) ಸಂಬಂಧಿಸಿದ ಐದನೇ ಪ್ರಕರಣದಲ್ಲಿ ಆರ್​​​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್​ಗೆ (Lalu Prasad Yadav ) ಐದು ವರ್ಷ ಜೈಲು ಶಿಕ್ಷೆ ಹಾಗೂ 60 ಲಕ್ಷ ದಂಡವನ್ನ ವಿಧಿಸಿದ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಡೊರಾಂಡಾ ಖಜಾನೆಯಿಂದ ಅಕ್ರಮವಾಗಿ ಹಣ ಹಿಂತೆಗೆದುಕೊಂಡಿದ್ದ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥರನ್ನು ದೋಷಿಯಾಗಿಸಿ ನ್ಯಾಯಾಲಯ ( Special CBI court)  ಕಳೆದ ವಾರ ತೀರ್ಪು ನೀಡಿತು. ಪ್ರಕರಣ ಸಂಬಂಧ ಇಂದು ಶಿಕ್ಷೆ ಪ್ರಕಟಗೊಳಿಸಲಾಗಿದೆ.


  ಇಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ


  ಸದ್ಯ ಲಾಲೂ ಪ್ರಸಾದ್ ಯಾದವ್​ ಅನಾರೋಗ್ಯದ ಹಿನ್ನಲೆ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


  ಐದನೇ ಪ್ರಕರಣದಲ್ಲಿ ಉಳಿದ 34 ಆರೋಪಿಗಳಿಗೆ ಗರಿಷ್ಠ ಮೂರು ವರ್ಷಗಳ ಶಿಕ್ಷೆ ಮತ್ತು 20,000 ರೂ.ನಿಂದ ಗರಿಷ್ಠ ದಂಡ 2 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಲಾಲೂ ಸೇರಿದಂತೆ ಉಳಿದ ಆರೋಪಿಗಳ ಶಿಕ್ಷೆ ಪ್ರಮಾಣವನ್ನು ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ನ್ಯಾಯಾಲಯ ತಿಳಿಸಿದೆ.


  ಜಾಮೀನಿಗೆ ಹೈ ಕೋರ್ಟ್​ನಲ್ಲಿ ಮನವಿ 
  ಪ್ರಸ್ತುತ ಪ್ರಕರಣದಲ್ಲಿ ಲಾಲು ಪ್ರಸಾದ್ ಅವರು ಈಗಾಗಲೇ ಮೂರು ವರ್ಷ ಹತ್ತೊಂಬತ್ತು ದಿನಗಳ ನ್ಯಾಯಾಂಗ ಬಂಧನ ಶಿಕ್ಷೆ ಅನುಭವಿಸಿದ್ದಾರೆ. ಈ ಹಿನ್ನಲೆ ಈ ಕುರಿತು ಮಾತನಾಡಿದ ಅವರ ವಕೀಲರಲ್ಲಿ ಒಬ್ಬರಾದ ಅನಂತ್ ಕುಮಾರ್ ವಿಜ್, ನ್ಯಾಯಾಧೀಶರು ಐದು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದ್ದಾರೆ. ಅದರಲ್ಲಿ ಅವರು ಈಗಾಗಲೇ ಮೂರು ವರ್ಷ ಹತ್ತೊಂಬತ್ತು ದಿನಗಳನ್ನು ಅನುಭವಿಸಿದ್ದಾರೆ. ಅವರು ಈಗಾಗಲೇ ಅರ್ಧದಷ್ಟು ಜೈಲು ಶಿಕ್ಷೆಯನ್ನು ಅನುಭವಿಸಿರುವುದರಿಂದ ಜಾಮೀನು ನೀಡುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.


  ಇದನ್ನು ಓದಿ: ಹಿಜಾಬ್​ ಬಳಿಕ ಶಿವಮೊಗ್ಗ ಹಿಂದೂ ಸಂಘಟನೆ ಕಾರ್ಯಕರ್ತನ ಹತ್ಯೆ ಕುರಿತು Kamal Haasan ಪ್ರತಿಕ್ರಿಯೆ


  ಇನ್ನೂ ಒಂದು ಪ್ರಕರಣ ಬಾಕಿ


  ಲಾಲೂ ಪ್ರಸಾದ್​ ಯಾದವ್​ ಈಗಾಗಲೇ ನಾಲ್ಕು ಪ್ರಕರಣದಲ್ಲಿ ದೋಷಿಯಾಗಿದ್ದಾರೆ. ಪಾಟ್​ಬಾದ ಸಿಬಿಐನಲ್ಲಿ ಬಂಕಾ-ಭಾಗಲ್ಪುರ್ ಖಜಾನೆಯಿಂದ ಅಕ್ರಮವಾಗಿ ಹಣ ಹಿಂತೆಗೆದುಕೊಂಡ ಪ್ರಕರಣವೊಂದು ಬಾಕಿ ಉಳಿದಿದೆ.


  ಇದನ್ನು ಓದಿ: Amit Shah Interview: "ಯೋಗಿ ಸರ್ಕಾರಕ್ಕೆ ಹಿಂದೂ-ಮುಸ್ಲಿಂ ಎಲ್ಲರ ಒಳಿತೂ ಮುಖ್ಯ" ಅಮಿತ್ ಶಾ ಸ್ಪಷ್ಟನೆ


  ಲಾಲೂ ಮುಖ್ಯಮಂತ್ರಿಯಾಗಿದ್ದಾಗ ನಡೆದ ಅಕ್ರಮ
  1991 ಮತ್ತು 1996 ರ ನಡುವೆ ಲಾಲೂ ಪ್ರಸಾದ್​ ಯಾದವ್ ಮುಖ್ಯ ಮಂತ್ರಿಯಾಗಿದ್ದಾಗ ಬಿಹಾರದ ಪಶುಸಂಗೋಪನೆ ಇಲಾಖೆಯಿಂದ ಮೇವಿಗಾಗಿ ಮೀಸಲಿಟ್ಟಿದ್ದ ಹಣವನ್ನು ಅಕ್ರಮವಾಗಿ ತೆಗೆದುಕೊಂಡಿದ್ದರು.  ಈ ಹಗರಣವು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ಲಾಲು ಯಾದವ್ ರಾಜೀನಾಮೆಗೆ ಕಾರಣವಾಗಿತು. ಈ ಪ್ರಕರಣದಲ್ಲಿ ಈಗಾಗಲೇ  3.5 ವರ್ಷಗಳ ಶಿಕ್ಷೆಯ ಭಾಗವಾಗಿ ಕಾಲ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದಾರೆ. ಅಲ್ಲದೇ, ಲಾಲು ಯಾದವ್ ಅವರು ಹಿಂದಿನ ಎಲ್ಲಾ ನಾಲ್ಕು ಅಪರಾಧಗಳನ್ನು ಪ್ರಶ್ನಿಸಿದ್ದಾರೆ.
  ಪ್ರಕರಣ ಸಂಬಂಧ 98 ಜನರು ಹಾಜರಾಗಿದ್ದರು, ಅವರಲ್ಲಿ 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಉಳಿದವರಲ್ಲಿ ಮಾಜಿ ಸಂಸದ ಜಗದೀಶ್ ಶರ್ಮಾ ಮತ್ತು ಅಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಧ್ರುವ ಭಗತ್ ಸೇರಿದಂತೆ 35 ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.


  ಈಗಾಗಲೇ ಲಾಲೂಗೆ ಜಾಮೀನು ನಿರಾಕರಣೆ
  ಲಾಲೂ ಪ್ರಸಾದ್​ ಯಾದವ್ ಮೂರು ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಈ ನಡುವೆ ಚೈಬಾಸಾ ಖಜಾನೆ ಪ್ರಕರಣದಲ್ಲಿ 2017ರ ಡಿಸೆಂಬರ್ 2017 ರಿಂದ ಶಿಕ್ಷೆ ಅನುಭವಿಸುತ್ತಿದ್ದು, ಅವರ ಬಹುತೇಕ ಶಿಕ್ಷೆಯನ್ನು ಜಾರ್ಖಂಡ್‌ನ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅನುಭವಿಸಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ದೆಹಲಿಗೆ ಕರೆತರಲಾಗಿತ್ತು. ತಮ್ಮ ಶಿಕ್ಷೆಯನ್ನು ಅರ್ಧ ಪೂರೈಸಿದ್ದು, ತಮಗೆ ಜಾಮೀನು ನೀಡಬೇಕು ಎಂಬ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

  Published by:Seema R
  First published: