• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Lalu Prasad Yadav: ‘ಟೇಕ್‌ ಕೇರ್‌ ಮೈ ಪಾಪ..’ ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ಲಾಲು ಯಾದವ್‌ ಬಗ್ಗೆ ಮಗಳ ಭಾವುಕ ಪತ್ರ

Lalu Prasad Yadav: ‘ಟೇಕ್‌ ಕೇರ್‌ ಮೈ ಪಾಪ..’ ಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿದ ಲಾಲು ಯಾದವ್‌ ಬಗ್ಗೆ ಮಗಳ ಭಾವುಕ ಪತ್ರ

ಲಾಲು ಪ್ರಸಾದ್‌ ಯಾದವ್ ಮತ್ತು ಅವರ ಮಗಳು ರೋಹಿಣಿ ಆಚಾರ್ಯ

ಲಾಲು ಪ್ರಸಾದ್‌ ಯಾದವ್ ಮತ್ತು ಅವರ ಮಗಳು ರೋಹಿಣಿ ಆಚಾರ್ಯ

ಲಾಲು ಪ್ರಸಾದ್ ಯಾದವ್ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಂಗಾಪುರದ ಪ್ರಖ್ಯಾತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯರು ಅವರಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಲಾಲು ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರೇ ತಮ್ಮ ತಂದೆಗೆ ಕಿಡ್ನಿ ದಾನ ಮಾಡಿದ್ದರಿಂದ ಇಡೀ ದೇಶವೇ ರೋಹಿಣಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಮುಂದೆ ಓದಿ ...
  • Share this:

ಪಾಟ್ನಾ: ಕಳೆದ ಡಿಸೆಂಬರ್‌ನಲ್ಲಿ ಸಿಂಗಾಪುರದಲ್ಲಿ (Singapore) ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ (Kidney transplant surgery)ಒಳಗಾಗಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ಇದೀಗ ಭಾರತಕ್ಕೆ ಮರಳಿದ್ದಾರೆ. ಲಾಲು ಪ್ರಸಾದ್‌ ಯಾದವ್ ಅವರಿಗೆ ಅವರ ಪುತ್ರಿ ರೋಹಿಣಿ ಆಚಾರ್ಯ (Rohini Acharya) ಕಿಡ್ನಿ ದಾನ ಮಾಡಿದ್ದರು. ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ಭಾರತಕ್ಕೆ ಮರಳಿರುವ ತಂದೆ ಲಾಲು ಪ್ರಸಾದ್ ಯಾದವ್ ಅವರ ಬಗ್ಗೆ ಭಾವುಕ ಪೋಸ್ಟ್ ಹಾಕಿರುವ ರೋಹಿಣಿ ಆಚಾರ್ಯ, ‘ಭಾರತಕ್ಕೆ ಬರುತ್ತಿರುವ ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ವಿನಂತಿ ಮಾಡಿದ್ದಾರೆ.


ಇದನ್ನೂ ಓದಿ: Tejashwi Yadav: ಬಿಹಾರ ಡಿಸಿಎಂ ತೇಜಸ್ವಿ ಯಾದವ್‌ಗೆ ಬಿಗ್ ಶಾಕ್, ಜಾಮೀನು ರದ್ದುಗೊಳಿಸುವಂತೆ ಸಿಬಿಐ ಆಗ್ರಹ!


ತಮ್ಮ ಪೋಸ್ಟ್‌ನಲ್ಲಿ ಮನಸ್ಸಿನ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿರುವ ರೋಹಿಣಿ ಆಚಾರ್ಯ, ‘ಒಂದು ಮುಖ್ಯವಾದ ವಿಷಯ ಹೇಳಬೇಕಾಗಿತ್ತು. ಅದು ನಮ್ಮ ನಾಯಕ ಲಾಲು ಪ್ರಸಾದ್ ಯಾದವ್ ಅವರ ಬಗ್ಗೆ. ಅಪ್ಪ ಫೆಬ್ರವರಿ 11ರಂದು ಸಿಂಗಾಪುರದಿಂದ ಭಾರತಕ್ಕೆ ತೆರಳಲಿದ್ದಾರೆ. ಮಗಳಾಗಿ ನನ್ನ ಕರ್ತವ್ಯವನ್ನು ನಾನ ಮಾಡುತ್ತಿದ್ದೇನೆ. ನನ್ನ ತಂದೆಯನ್ನು ಗುಣಮುಖರನ್ನಾಗಿಸಿದ ಬಳಿಕ ನಾನು ಅವರನ್ನು ನಿಮ್ಮ ಜೊತೆ ಕಳುಹಿಸುತ್ತಿದ್ದೇನೆ. ಈಗ ನೀವೇ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.


ದೇಶವೇ ಮನ ಗೆದ್ದಿದ್ದ ಲಾಲು ಪುತ್ರಿ ರೋಹಿಣಿ


ಲಾಲು ಪ್ರಸಾದ್ ಯಾದವ್ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಂಗಾಪುರದ ಪ್ರಖ್ಯಾತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯರು ಅವರಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಲಾಲು ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರೇ ತಮ್ಮ ತಂದೆಗೆ ಕಿಡ್ನಿ ದಾನ ಮಾಡಿದ್ದರಿಂದ ಇಡೀ ದೇಶವೇ ರೋಹಿಣಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇದ್ದರೆ ನಿಮ್ಮಂತಹ ಮಗಳು ಇರಬೇಕು ಎಂದು ಬಿಜೆಪಿ ನಾಯಕರ ಸಹಿತ ಸಾವಿರಾರು ಮಂದಿ ಹೇಳಿಕೊಂಡಿದ್ದರು.


ಇದನ್ನೂ ಓದಿ: Lalu Prasad Yadav: ಲಾಲು ಪ್ರಸಾದ್‌ ಯಾದವ್‌ಗೆ ಮಗಳಿಂದಲೇ ಕಿಡ್ನಿ ದಾನ: ಬಿಜೆಪಿ ನಾಯಕರ ಶ್ಲಾಘನೆ


ಲಾಲು ಪ್ರಸಾದ್ ಯಾದವ್ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಅವರ ಪುತ್ರ, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಟ್ವೀಟ್ ಮಾಡಿ, ತಮ್ಮ ತಂದೆಯ ಮೂತ್ರಪಿಂಡ ಕಸಿ ಚಿಕಿತ್ಸೆ ಯಶಸ್ಚಿಯಾಗಿದೆ. ಅವರನ್ನು ಈಗ ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ ಸ್ಥಳಾಂತರ ಮಾಡಲಾಗಿಎದ. ನನ್ನ ಅಕ್ಕ ರೋಹಿಣಿ ಆಚಾರ್ಯ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಇಬ್ಬರೂ ಕೂಡ ಅರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲಾಲು ಪ್ರಸಾದ್ ಅವರ ಆರೋಗ್ಯದ ಬಗ್ಗೆ ತೇಜಸ್ವಿ ಯಾದವ್ ಅವರಲ್ಲಿ ಕರೆ ಮಾಡಿ ವಿಚಾರಿಸಿದ್ದರು.


ವೈದ್ಯರ ಸಲಹೆ ಮೇರೆಗೆ ನಿರ್ಧಾರ


74 ವರ್ಷದ ಪ್ರಾಯದ ಲಾಲು ಪ್ರಸಾದ್ ಯಾದವ್ ಅವರು ಕೆಲ ವರ್ಷಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಮೂತ್ರಪಿಂಡದ ಕಸಿ ಮಾಡುವಂತೆ ಸಲಹೆ ನೀಡಿದ್ದರು. ಲಾಲು ಯಾದವ್ ಅವರ ಕುಟುಂಬದಿಂದಲೇ ಯಾರಾದರೂ ಕಿಡ್ನಿ ದಾನ ಮಾಡುವಂತೆ ವೈದ್ಯರು ಸೂಚಿಸಿದ್ದರು. ಆಗ ಲಾಲು ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಸ್ವತಃ ಮುಂದೆ ಬಂದು ತಾನೇ ಕಿಡ್ನಿ ದಾನ ಮಾಡೋದಾಗಿ ಹೇಳಿದ್ದರು. ಆ ಬಳಿಕ ಕಿಡ್ನಿ ದಾನ ಪ್ರಕ್ರಿಯೆಯನ್ನು ಮುಂದುವರಿಸಲಾಗಿತ್ತು.


ಕಿಡ್ನಿ ಶಸ್ತ್ರ ಚಿಕಿತ್ಸೆಗೆ ಸಿಂಗಾಪುರವನ್ನು ಆಯ್ಕೆ ಮಾಡಿಕೊಂಡ ರೋಹಿಣಿ ಆಚಾರ್ಯ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸಮರೇಶ್ ಸಿಂಗ್ ಅವರನ್ನು ವಿವಾಹವಾಗಿದ್ದರು, ಸದ್ಯ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ರೋಹಿಣಿ ದಂಪತಿಗೆ ಇಬ್ಬರು ಪುತ್ರರು ಹಾಗೂ ಒಬ್ಬಳು ಮಗಳು ಇದ್ದಾಳೆ.

Published by:Avinash K
First published: