ಪಾಟ್ನಾ (ನ. 25): ಬಿಹಾರದಲ್ಲಿ ಜೆಡಿಯು- ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದಿದೆ. ಬಿಹಾರದ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಎನ್ಡಿಎ ಪರವಾಗಿ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಹಾಗೂ ಮಹಾಘಟಬಂಧನದ ಪರವಾಗಿ ಆರ್ಜೆಡಿಯ ಅವಧ್ ಬಿಹಾರಿ ಚೌಧರಿ ನಾಮಪತ್ರ ಸಲ್ಲಿಸಿದ್ದಾರೆ. ಬರೋಬ್ಬರಿ 50 ವರ್ಷಗಳ ಬಳಿಕ ಬಿಹಾರದಲ್ಲಿ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಬಿಹಾರ ಸ್ಪೀಕರ್ ಚುನಾವಣೆಗೆ ಕೇವಲ ಕೆಲವೇ ಗಂಟೆಗಳು ಉಳಿದಿರುವಾಗ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರ ಆಡಿಯೋ ಕ್ಲಿಪ್ ಒಂದನ್ನು ರಿಲೀಸ್ ಮಾಡಿದೆ. ಲಾಲೂ ಪ್ರಸಾದ್ ಯಾದವ್ ಬಿಜೆಪಿಯ ಶಾಸಕರಿಗೆ ಆಮಿಷವೊಡ್ಡಿ, ಸ್ಪೀಕರ್ ಚುನಾವಣೆಯ ದಿನ ಹಾಜರಾಗದಂತೆ ಕೋರುತ್ತಿರುವ ಆಡಿಯೋ ಕ್ಲಿಪ್ ಇದಾಗಿದೆ.
ಜೈಲಿನಿಂದಲೇ ಲಾಲೂ ಪ್ರಸಾದ್ ಯಾದವ್ ಎನ್ಡಿಎ ಶಾಸಕರೊಬ್ಬರಿಗೆ ಫೋನ್ ಮಾಡಿದ್ದು, ಕೊರೋನಾ ನೆಪವೊಡ್ಡಿ ಸ್ಪೀಕರ್ ಚುನಾವಣೆಯ ದಿನ ಹಾಜರಾಗದಂತೆ ಆಮಿಷವೊಡ್ಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪದ ಜೊತೆಗೆ ಜೈಲಿನಿಂದ ಲಾಲೂ ಪ್ರಸಾದ್ ಫೋನ್ನಲ್ಲಿ ಮಾತನಾಡಿರುವ ಆಡಿಯೋ ಕ್ಲಿಪ್ ಅನ್ನು ಕೂಡ ಬಿಡುಗಡೆ ಮಾಡಿದೆ.
लालू यादव ने दिखाई अपनी असलियत
लालू प्रसाद यादव द्वारा NDA के विधायक को बिहार विधान सभा अध्यक्ष के लिए होने वाले चुनाव में महागठबंधन के पक्ष में मतदान करने हेतु प्रलोभन देते हुए। pic.twitter.com/LS9968q7pl
— Sushil Kumar Modi (@SushilModi) November 25, 2020
243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅಧಿವೇಶನ ನವೆಂಬರ್ 27ರಿಂದ ಶುರುವಾಗಲಿದೆ. ಮೊದಲ ದಿನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್ಡಿಎ ಮೈತ್ರಿಕೂಟ 125 ಹಾಗೂ ಆರ್ಜೆಡಿ ನೇತೃತ್ವದ ಮಹಾಘಟಬಂಧನ 110 ಶಾಸಕರನ್ನು ಹೊಂದಿದೆ. ಇತರರು 8 ಸ್ಥಾನಗಳನ್ನು ಪಡೆದಿದ್ದಾರೆ. ಇದೀಗ ವಿಧಾನಸಭೆ ಸ್ಪೀಕರ್ ಯಾರಾಗಲಿದ್ದಾರೆ ಎಂಬುದು ಇಂದು ಸಂಜೆಯ ವೇಳೆಗೆ ಗೊತ್ತಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ