• Home
  • »
  • News
  • »
  • national-international
  • »
  • Lalu Prasad Yadav: ಲಾಲುಗೆ ಮಗಳಿಂದಲೇ ಕಿಡ್ನಿ ದಾನ; ಅಪ್ಪನ ಜೀವ ಉಳಿಸೋಕೆ ಸೈ ಎಂದ ಪುತ್ರಿ

Lalu Prasad Yadav: ಲಾಲುಗೆ ಮಗಳಿಂದಲೇ ಕಿಡ್ನಿ ದಾನ; ಅಪ್ಪನ ಜೀವ ಉಳಿಸೋಕೆ ಸೈ ಎಂದ ಪುತ್ರಿ

ಲಾಲು ಪ್ರಸಾದ್ ಯಾದವ್ ಮತ್ತು ಮಗಳು ರೋಹಿಣಿ

ಲಾಲು ಪ್ರಸಾದ್ ಯಾದವ್ ಮತ್ತು ಮಗಳು ರೋಹಿಣಿ

ಮಗಳು ರೋಹಿಣಿ ತಮ್ಮ ಜೀವ ಉಳಿಸಲು ಕಿಡ್ನಿ ದಾನ ಮಾಡುವುದು ಲಾಲು ಪ್ರಸಾದ್ ಯಾದವ್​ಗೆ ಮೊದಲು ಇಷ್ಟ ಇರಲಿಲ್ಲ.

  • Share this:

ಪಾಟ್ನಾ: ಕಳೆದ ಕೆಲ ವರ್ಷಗಳಿಂದ ಮೂತ್ರಪಿಂಡದ ಕಾಯಿಲೆ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರಿಗೆ ಅವರ ಪುತ್ರಿಯೇ ಕಿಡ್ನಿ ದಾನ ಮಾಡಲು ಮುಂದಾಗಿದ್ದಾರೆ. ಮಗಳು ರೋಹಿಣಿ (Rohini Aacharya) ತಮ್ಮ ಜೀವ ಉಳಿಸಲು ಕಿಡ್ನಿ ದಾನ ಮಾಡುವುದು ಲಾಲು ಪ್ರಸಾದ್ ಯಾದವ್​ಗೆ (Lalu Prasad Yadav Health Update) ಮೊದಲು ಇಷ್ಟ ಇರಲಿಲ್ಲ. ಆದರೆ ಸ್ವತಃ ಮಗಳು ಮತ್ತು ಕುಟುಂಬದ ಒತ್ತಾಯದ ನಂತರ ಮಗಳಿಂದ ಕಿಡ್ನಿ ದಾನ ಪಡೆಯಲು ಅವರು ಒಪ್ಪಿದ್ದಾರೆ ಎಂದು ಹೇಳಲಾಗಿದೆ.


ನವೆಂಬರ್ 20-24 ರ ನಡುವೆ ಲಾಲು ಅವರು ಮತ್ತೆ ಸಿಂಗಾಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಸಮಯದಲ್ಲಿ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ.


ಬಿಹಾರದಲ್ಲಿ ನೆಲೆಸಿರುವ ಲಾಲು ಮಗಳು
ಸಿಂಗಾಪುರದಲ್ಲಿ ನೆಲೆಸಿರುವ ಲಾಲು ಪ್ರಸಾದ್ ಯಾದವ್ ಅವರ ಎರಡನೇ ಪುತ್ರಿ ರೋಹಿಣಿ ತಮ್ಮ ತಂದೆಯ ಮೂತ್ರಪಿಂಡದ ಕಾಯಿಲೆಯ ಬಗ್ಗೆ ತುಂಬಾ ಚಿಂತಿತರಾಗಿದ್ದರು. ಮೂತ್ರಪಿಂಡ ಕಸಿ ಸಲಹೆ ನೀಡಿದ ವೈದ್ಯರ ತಂಡವನ್ನು ಸಂಪರ್ಕಿಸಲು ಲಾಲು ಸಿಂಗಾಪುರಕ್ಕೆ ಭೇಟಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


ಕಿಡ್ನಿ ಸಮಸ್ಯೆಯಿಂದ ಕಳೆದ ಹಲವು ವರ್ಷಗಳಿಂದ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್ ಯಾದವ್ ಅವರಿಗೆ ಎಐಐಎಂಎಸ್‌ನ ವೈದ್ಯರು ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಿರಲಿಲ್ಲ. ಆದರೆ ಸಿಂಗಾಪುರ ಭೇಟಿ ವೇಳೆ ಅಲ್ಲಿನ ವೈದ್ಯರು ಕಿಡ್ನಿ ಕಸಿ ಮಾಡುವಂತೆ ಸಲಹೆ ನೀಡಿದರು.


ಇದನ್ನೂ ಓದಿ: Gujarat Election: ಗುಜರಾತ್ ಚುನಾವಣೆಗೆ ಲಗ್ಗೆಯಿಟ್ಟ ಹೊಸ ಪಕ್ಷ; ಹಿಂದುತ್ವವೇ ಟಾರ್ಗೆಟ್


ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ತುಂಬಾ ಸಕ್ರಿಯ
ಲಾಲ್ ಪ್ರಸಾದ್ ಯಾದವ್ ಅವರ 2ನೇ ಮಗಳು ರೋಹಿಣಿ ಅವರು ಸಿಂಗಾಪುರದಲ್ಲಿ ನೆಲೆಸಿದ್ದರೂ, ಬಿಹಾರದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ತಮ್ಮ ರಾಜಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ವಿರೋಧಿಗಳ ಕುರಿತು ಟೀಕಿಸಲು ಸಾಮಾಜಿಕ ವೇದಿಕೆಯಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.


ಟ್ವೀಟ್  ಮೂಲಕ ಗಮನಸೆಳೆದಿದ್ದ ರೋಹಿಣಿ
ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ವಿಘಟನೆ ಮತ್ತು ರಾಜಕೀಯ ಬೆಳವಣಿಗೆಗಳ ನಡುವೆ ಮಹಾಮೈತ್ರಿಕೂಟ ಸರ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿರುವಾಗ ಲಾಲು ಪ್ರಸಾದ್ ಪುತ್ರಿ ರೋಹಿಣಿ ಸುದ್ದಿಯಾಗಿದ್ದರು. ಈ ವೇಳೆ ಲಾಲು ಯಾದವ್ ಪುತ್ರಿ ರೋಹಿಣಿ ಆಚಾರ್ಯ ಟ್ವೀಟ್ ಮಾಡಿ ತನ್ನ ತಂದೆಯನ್ನು ಕಿಂಗ್ ಮೇಕರ್ ಎಂದು ಬಣ್ಣಿಸಿದ್ದರು.


ರೋಹಿಣಿ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ, 'ಆಕಾಶಕ್ಕಿಂತಲೂ ಹೆತ್ತರ ಅವರ ನಂಬಿಕೆ, ಜನಸಾಮಾನ್ಯರೇ ದೇವರೆಂಬ ನಂಬಿಕೆ ಅವರದ್ದು' ಎಂದು ಬರೆದಿದ್ದರು. ಇದರೊಂದಿಗೆ ಲಾಲು ಪ್ರಸಾದ್ ಯಾದವ್ ಅವರ ಫೋಟೋ ಹಾಕಿದ್ದು, ಅದರ ಮೇಲೆ ಕಿಂಗ್ ಮೇಕರ್ ಎಂದು ಬರೆದಿದ್ದಾರೆ. ಮಧ್ಯಾಹ್ನ 2:41 ಕ್ಕೆ ಮಾಡಿದ ಈ ಟ್ವೀಟ್ ಸುದ್ದಿ ಭಾರೀ ಲೈಕ್ಸ್​ ಪಡೆದಿದೆ, ಅದನ್ನು 160 ಜನರು ರಿಟ್ವೀಟ್ ಮಾಡಿದ್ದರು.


ಇದನ್ನೂ ಓದಿ: Gujarat Elections: ಗುಜರಾತ್​ ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿಯ ಇಬ್ಬರು ಘಟಾನುಘಟಿ ನಾಯಕರು!


ರಾಜಕೀಯ ಬೆಳವಣಿಗೆಗಳನ್ನು ನೋಡಿ ಅದರಲ್ಲಿ ತಂದೆ ಲಾಲು ಯಾದವ್ ಅವರ ಸಕ್ರಿಯ ಪಾತ್ರವನ್ನು ನೋಡಿ ರೋಹಿಣಿ ಆಚಾರ್ಯ ಅವರನ್ನು ಕಿಂಗ್ ಮೇಕರ್ ಎಂದು ಕರೆದಿದ್ದರು. ಲಾಲು ಪ್ರಸಾದ್ ಯಾದವ್ ಅವರು ತಮ್ಮ ಕಾಲದಲ್ಲಿ ಬಿಹಾರ ರಾಜಕೀಯದಲ್ಲಿ ಹುಟ್ಟುಹಾಕಿದ್ದ ಹೊಸ ಟ್ರೆಂಡ್‌ಗೆ ಬಿಹಾರದಲ್ಲಿ ಕಿಂಗ್‌ಮೇಕರ್ ಆಗಿ ಕಾಣಿಸಿಕೊಂಡಿದ್ದರು.

Published by:ಗುರುಗಣೇಶ ಡಬ್ಗುಳಿ
First published: