-ನ್ಯೂಸ್ 18
ರಾಂಚಿ(ಮಾ.19): ಬಹುಕೋಟಿ ರೂಪಾಯಿ ಮೇವು ಹಗರಣದ 4ನೇ ಪ್ರಕರಣದಲ್ಲೂ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ದೋಷಿಯೆಂದು ರಾಂಚಿಯ ಕೋರ್ಟ್ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರನ್ನ ಖುಲಾಸೆಗೊಳಿಸಲಾಗಿದೆ.
2 ದಶಕಗಳ ಹಿಂದೆ ದಿಯೋಗಢ್ ಖಜಾನೆಯಿಂದ 3.13 ಕೋಟಿ ರೂ. ಅಕ್ರಮವಾಗಿ ಡ್ರಾ ಮಾಡಿದ ಪ್ರಕರಣ ಇದಾಗಿದೆ. ಮೇವು ಹಗರಣದ 2 ಮತ್ತು 3ನೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಯಾದವ್ ಸದ್ಯ ರಾಂಚಿಯ ಬಿಸ್ರಾ ಮುಂಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ 23ರಿಂದ ಮೇವು ಹಗರಣದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್, 21 ವರ್ಷಗಳ ಹಿಮದೆ ದಿಯೋಘಢ್ ಖಜಾನೆಯಿಂದ ಅಕ್ರಮವಾಗಿ 89.27 ಕೋಟಿ ಹಣ ಪಡೆದ ಅಪರಾಧದಡಿ ಲಾಲೂಗೆ ಶಿಕ್ಷೆ ವಿಧಿಸಿತ್ತು.
ಸದ್ಯ, ಮೇವು ಹಗರಣದ 3 ಪ್ರಕರಣಗಳಲ್ಲಿ ಲಾಲೂ ಪ್ರಸಾದ್ ಯಾದವ್ಗೆ ಶಿಕ್ಷೆಯಾಗಿದ್ದು, ಡೊರಾಂಡಾ ಖಜಾನೆಯಿಂದ 139 ಕೋಟಿ ರೂ. ಡ್ರಾ ಮಾಡಿದ ಪ್ರಕರಣ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಜೆಡಿ, ಪ್ರಧಾನಮಂತ್ರಿ ಮೋದಿ, ಸಿಎಂ ನಿತೀಶ್ ಕುಮಾರ್ ನಮ್ಮನ್ನ ಹಣಿಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ