• Home
 • »
 • News
 • »
 • national-international
 • »
 • ತೇಜಸ್ವಿ ಯಾದವ್​- ಚಿರಾಗ್ ಪಾಸ್ವಾನ್ ಮೈತ್ರಿಗೆ ಗ್ರೀನ್​ ಸಿಗ್ನಲ್​ ಕೊಟ್ಟ ಲಾಲು ಪ್ರಸಾದ್ ಯಾದವ್

ತೇಜಸ್ವಿ ಯಾದವ್​- ಚಿರಾಗ್ ಪಾಸ್ವಾನ್ ಮೈತ್ರಿಗೆ ಗ್ರೀನ್​ ಸಿಗ್ನಲ್​ ಕೊಟ್ಟ ಲಾಲು ಪ್ರಸಾದ್ ಯಾದವ್

ಲಾಲು ಪ್ರಸಾದ್​ ಯಾದವ್​

ಲಾಲು ಪ್ರಸಾದ್​ ಯಾದವ್​

ಸೋಮವಾರ, ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಅಖಿಲೇಶ್ ಯಾದವ್ ಅವರನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನವದೆಹಲಿಯಲ್ಲಿ ಭೇಟಿಯಾಗಿದ್ದರು.

 • Share this:

  ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಶರದ್ ಯಾದವ್ ಅವರನ್ನು ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಮಂಗಳವಾರ ಭೇಟಿ ಮಾಡಿದರು ಮತ್ತು ಇಬ್ಬರೂ ನಾಯಕರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಆರ್‌ಜೆಡಿ ನಾಯಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶರದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತು ಅವರಂತಹ ಸಮಾಜವಾದಿ ನಾಯಕರ ಅನುಪಸ್ಥಿತಿಯು ಸಂಸತ್ತಿನಲ್ಲಿ ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸಲು ಕಾರಣವಾಗಿದೆ, ಎಂದು ಹೇಳಿದರು.


  ಬಿಹಾರದಲ್ಲಿ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ತಮ್ಮ ಮಗ ತೇಜಸ್ವಿ ಯಾದವ್ ನಡುವಿನ ಮೈತ್ರಿಯ ಪರವಾಗಿದ್ದೇನೆ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್  ನುಡಿದರು.


  ಚಿರಾಗ್ ಪಾಸ್ವಾನ್‌ ತನ್ನ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ನೇತೃತ್ವದಲ್ಲಿ ಪಕ್ಷದ ಐದು ಸಂಸದರು ಬಂಡಾಯವನ್ನು ಎದುರಿಸುತ್ತಿದ್ದರೂ ಕೂಡ ಚಿರಾಗ್ ಎಲ್‌ಜೆಪಿಯ ನಾಯಕರಾಗಿ ಮುಂದುವರಿದಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ.


  ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿರುದ್ಧ ಕಿಡಿ ಕಾರಿರುವ ಲಾಲು ಪ್ರಸಾದ್ ಯಾದವ್, ’ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಮೋಸ ಮಾಡಿ ತಮ್ಮ ಪಕ್ಷವನ್ನು 10-15 ಮತಗಳಿಂದ ಸೋಲಿಸಿದರು” ಎಂದು ಆರೋಪಿಸಿದ್ದಾರೆ.


  ಆರ್‌ಜೆಡಿ ಮುಖ್ಯಸ್ಥರೊಂದಿಗೆ ಪಕ್ಷದ ಸಂಸದರಾದ ಪ್ರೇಮ್ ಚಂದ್ ಗುಪ್ತಾ ಮತ್ತು ಮಿಸಾ ಭಾರತಿ ಇದ್ದರು.  ಈ ಮಧ್ಯೆ ನಡೆದ ಎಲ್ಲಾ ರಾಜಕೀಯ ಬೆಳವಣಿಗೆಯಿಂದ ಹತಾಶೆಗೊಂಡಿರುವ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮಂಗಳವಾರ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಅವರಿಂದ ಪಡೆದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು, ನಂತರ ಅವರ ನಿಧನರಾದ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರೊಂದಿಗೆ "ಸೌಹಾರ್ದಯುತ ಸಂಬಂಧ" ವನ್ನು ನೆನಪಿಸಿಕೊಂಡರು.
   ಹಿಂದಿನ ಅವಿಭಜಿತ ಎಲ್‌ಜೆಪಿಯ ಮುಖ್ಯಸ್ಥ, ಚಿರಾಗ್ ಆರ್‌ಜೆಡಿಯ ಉದಯೋನ್ಮುಖ ತಾರೆಯಾಗಿ ಹೊರಹೊಮ್ಮಿದ ಅವರ ಪುತ್ರ ತೇಜಶ್ವಿ ಯಾದವ್ ಜೊತೆ ಸೇರಿಕೊಳ್ಳಬೇಕೆಂಬ ಪ್ರಸಾದ್ ಅವರ ಸಲಹೆಯ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದರು.

  ಲಾಲೂ ಜೀ ಅವರು ನನ್ನ ತಂದೆ ಮತ್ತು ರಾಜಕೀಯ ಮಾರ್ಗದರ್ಶಕ ರಾಮ್ ವಿಲಾಸ್ ಪಾಸ್ವಾನ್ ಅವರೊಂದಿಗೆ ಮಧುರ ಸಂಬಂಧವನ್ನು ಹೊಂದಿದ್ದರು. ನನ್ನ ನಾಯಕತ್ವದ ಮೇಲೆ ವಿಶ್ವಾಸ ಹಾಗೂ ನಂಬಿಕೆ ಇಟ್ಟಿರುವುದಕ್ಕೆ ನಾನು  ಧನ್ಯವಾದ ಹೇಳುತ್ತೇನೆ. ಆದರೆ, ನನ್ನ ಪ್ರಸ್ತುತ ಆದ್ಯತೆಯು ರಾಜ್ಯದಾದ್ಯಂತ ನಡೆಯುತ್ತಿರುವ ಆಶೀರ್ವಾದ ಯಾತ್ರೆ "ಎಂದು ಚಿರಾಗ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈ ವರ್ಷದ ಆರಂಭದಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ದೆಹಲಿಯಲ್ಲಿದ್ದ ಪ್ರಸಾದ್ ಅವರು ಮಾಡಿದ ಟೀಕೆಗಳಿಗೆ ಅವರು ಪ್ರತಿಕ್ರಿಯಿಸಿದರು.


  ಎಲ್‌ಜೆಪಿಯಲ್ಲಿನ ಬಿಕ್ಕಟ್ಟು ವಾಸ್ತವವಾಗಿ ಚಿರಾಗ್ ಹಿರಿಯ ಸಮಾಜವಾದಿ ನಾಯಕ ಶರದ್ ಯಾದವ್ ಅವರನ್ನು ಭೇಟಿಯಾದ ನಂತರ ಉಂಟಾಯಿತು ಎಂದು ಹೇಳಲಾಗುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿಯಂತ್ರಣದಲ್ಲಿದ್ದ ಮಾಜಿ ಅಧ್ಯಕ್ಷ ಶರದ್ ಯಾದವ್  ಈಗ ಬೇರೆಯದೆ ಹಾದಿ ಹಿಡಿದಿದ್ದಾರೆ.


  ಸೋಮವಾರ, ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಅಖಿಲೇಶ್ ಯಾದವ್ ಅವರನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನವದೆಹಲಿಯಲ್ಲಿ ಭೇಟಿಯಾಗಿದ್ದರು.


  ಇದನ್ನೂ ಓದಿ: ಮಗುವಿನ ಪ್ರಾಣ ಉಳಿಸಲು 16 ಕೋಟಿ ಮೌಲ್ಯದ ಚುಚ್ಚುಮದ್ದನ್ನು ಉಚಿತವಾಗಿ ನೀಡಿದ ಯುಎಸ್ ಕಂಪೆನಿ

  ಇದರ ಜೊತೆಗೆ ಪೆಗಾಸಸ್ ಗೂಢಚರ್ಯೆ ಹಗರಣದ ತನಿಖೆಗೂ ಕರೆ ನೀಡಿರುವ ಲಾಲು ಪ್ರಸಾದ್ ಯಾದವ್, ಪ್ರಕರಣದ ತನಿಖೆ ನಡೆಸಿ ಸಂಬಂಧಪಟ್ಟವರ ಹೆಸರುಗಳನ್ನು ಪ್ರಕಟಿಸಬೇಕು ಎಂದಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


  Published by:HR Ramesh
  First published: