ಲಕ್ನೋ: ದೆಹಲಿಯಲ್ಲಿ ಇತ್ತೀಚೆಗೆ ಮುಲಾಯಂ ಸಿಂಗ್ ಮತ್ತು ಲಾಲೂ ಯಾದವ್ ಅವರ ಭೇಟಿಯ ನಂತರ, 2022 ರ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಹೊಸ ಬೆಳವಣಿಗೆಗಳ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಚುನಾವಣಾ ತಜ್ಞರು ಈ ಭೇಟಿಯ ನಂತರದ ಬೆಳವಣಿಗೆಯನ್ನು ತಿರಸ್ಕರಿಸಿದ್ದಾರೆ, ಈ ಭೇಟಿಯು ವೈಯಕ್ತಿಕ ವಿಷಯಕ್ಕೆ ಮಾತ್ರ ಆಗಿದ್ದೇ ಹೊರತು ಯಾವುದೇ ರಾಜಕೀಯ ಇಲ್ಲಿ ಇರಲಿಲ್ಲ, ಅಲ್ಲದೇ ಇಬ್ಬರೂ ಅನುಭವಿ ನಾಯಕರು ತಮ್ಮ, ತಮ್ಮ ಕುಟುಂಬಗಳ ಬಗ್ಗೆ ಒಂದಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಲಾಲೂ ಪ್ರಸಾದ್ ಯಾದವ್ ಸೋಮವಾರ ಇಬ್ಬರು ನಾಯಕರು ಒಟ್ಟಿಗೆ ಇರುವ ಪೋಟೋವನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದ ಲಾಲೂ, ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಸೇರಿದಂತೆ ಇತರೇ ಪಕ್ಷಗಳ ನಾಯಕರನ್ನು ದೆಹಲಿಯಲ್ಲಿ ಮುಲಾಯಂ ಮತ್ತು ಅಖಿಲೇಶ್ ಅವರನ್ನು ಭೇಟಿ ಮಾಡುವ ಕೆಲವು ದಿನಗಳ ಮೊದಲು ಭೇಟಿಯಾಗಿದ್ದರು. ಈ ಭೇಟಿಯ ಪರಿಣಾಮವಾಗಿ, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಮರ್ಶಕ ಪರ್ವೇಜ್ ಅಹ್ಮದ್ ನ್ಯೂಸ್ 18 ಬಳಿ ಮಾತನಾಡಿ, “ಲಾಲು ಮತ್ತು ಮುಲಾಯಂ ಇಬ್ಬರೂ ತಮ್ಮದೇ ಆದ ಕಾನೂನುಗಳನ್ನು ರೂಪಿಸಿಕೊಂಡಿದ್ದಾರೆ. ಇಬ್ಬರೂ ಹಿರಿಯ ನಾಯಕರು ಮತ್ತು ಅವರ ಕಾಲದಲ್ಲಿ ರಾಜಕೀಯವಾಗಿ ತಮ್ಮದೇ ಆದ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಈಗ ಕಾಲ ಬದಲಾಗಿದೆ, ವಿಶೇಷವಾಗಿ ಸಮಾಜವಾದಿ ಪಕ್ಷದ ವಿಷಯಕ್ಕೆ ಬಂದಾಗ. ಪಕ್ಷವು ಸಾಕಷ್ಟು ಮುಂದುವರೆದು ಬೇರೆಯದೆ ರೂಪ ತಾಳಿದೆ ಮತ್ತು ಈಗ ಅದರ ಅಧಿಕಾರವು ಅಖಿಲೇಶ್ ಯಾದವ್ ಅವರ ಕೈಗೆ ಸಿಕ್ಕಿದೆ, ಅಖಿಲೇಶ್ ಅವರ ರಾಜಕೀಯ ತಂತ್ರ ಹಾಗೂ ಕೆಲಸ ಅವರ ತಂದೆಗಿಂತ ಹೆಚ್ಚು ಭಿನ್ನವಾಗಿದೆ.
2022 ರಲ್ಲಿ ನಡೆಯಲಿರುವ ಯುಪಿ ಚುನಾವಣೆಯ ಮೇಲೆ ಲಾಲೂ ಮತ್ತು ಮುಲಾಯಂ ನಡುವಿನ ಭೇಟಿಯು ಯಾವುದೇ ರಾಜಕೀಯ ಅಚ್ಚರಿಗೆ ಕಾರಣವಾಗುವುದಿಲ್ಲ ಹಾಗೂ ಯಾವುದೇ ಪ್ರಭಾವ ಬೀರುವುದಿಲ್ಲ. ಒಂದು ದಶಕಕ್ಕೂ ಹೆಚ್ಚು ಕಾಲ ಲಾಲು ಕಾಂಗ್ರೆಸ್‌ಗೆ ನಿಷ್ಠರಾಗಿದ್ದರು. ಆದರೆ ಸಮಾಜವಾದಿ ಪಕ್ಷವು ಹಲವಾರು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ನಂತರ ಮುರಿದುಕೊಂಡಿದೆ. ಸಮಾಜವಾದಿ ಪಕ್ಷ ಅಥವಾ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ನೀರನ್ನು ಪರೀಕ್ಷಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಮತ್ತು ಮೈತ್ರಿ ಎನ್ನುವುದು ಸಮಾಜವಾದಿ ಪಕ್ಷಕ್ಕೆ ಇದುವರೆಗೂ ಒಳ್ಳೆ ಫಲಿತಾಂಶ ಕೊಟ್ಟಿಲ್ಲ ಆದ ಕಾರಣ, ಅವರು ಮತ್ತೆ ಒಂದಾಗುವುದಿಲ್ಲ "ಎಂದು ಪರ್ವೇಜ್ ಅಹ್ಮದ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ