ಅಪ್ಪ ಅಶ್ಲೀಲ ವಿಡಿಯೋ ತೋರಿಸಿದ್ರು, ಹೋಟೆಲ್​ನಲ್ಲಿ ರೇಪ್ ಮಾಡಿದ್ರು: 17 ವರ್ಷದ ಬಾಲಕಿ ಹೇಳಿಕೆ

Lalitpur Rape Case- ಪಾಪಿ ತಂದೆಯೊಬ್ಬ ತನ್ನ ಸ್ವಂತ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿ, ಇತರರ ಜೊತೆಯೂ ಬಲವಂತವಾಗಿ ಲೈಂಗಿಕ ಸಂಬಂಧ ಹೊಂದುವಂತೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಲಕ್ನೋ: ಉತ್ತರ ಪ್ರದೇಶದ ಲಲಿತಪುರ (Lalitpur) ಜಿಲ್ಲೆಯ 11ನೇ ಕ್ಲಾಸ್ ಓದುತ್ತಿರುವ 17 ವರ್ಷದ ಅಪ್ರಾಪ್ತೆ (17 Year old Student) ಮೇಲೆ ಆಕೆಯ ತಂದೆ ಮತ್ತು ಎಸ್‍ಪಿ- ಬಿಎಸ್‍ಪಿ (SP And BSP Leaders) ನಾಯಕರು ಅತ್ಯಾಚಾರ (Rape) ನಡೆಸಿರುವ ಆರೋಪಗಳು ಕೇಳಿ ಬಂದಿವೆ. ಮೂವರು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಸಂತ್ರಸ್ತೆ ಹೇಳಿಕೆಯನ್ನಾಧರಿಸಿ ಅತ್ಯಾಚಾರ, ಸಂಚು ರಚನೆ ಸೇರಿದಂತೆ ಹಲವು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ವರದಿಯಾಗುತ್ತಿದ್ದಂತೆ ಲಲಿತಪುರ ಜಿಲ್ಲೆಯಲ್ಲಿ ಒಂದು ರೀತಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

  ಆರೋಪಗಳೆಲ್ಲ ಆಧಾರರಹಿತ ಎಂದ ಮುಖಂಡ:

  ಇತ್ತ ಪ್ರಕರಣ ದಾಖಲಾಗುತ್ತಿದಂತೆ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳೆಲ್ಲ ಆಧಾರರಹಿತ ಎಂದು ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತಿಲಕ್ ಯಾದವ್ (Tilak Yadav) ಸ್ಪಷ್ಟನೆ ನೀಡಿದ್ದಾರೆ. ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ತಿಲಕ್ ಯಾದವ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಯದಿದ್ರೆ ನಡು ರಸ್ತೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದಕ್ಕೆ ಜಿಲ್ಲಾಡಳಿತವೇ ಕಾರಣವಾಗಲಿದೆ ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ.

  ವಿದ್ಯಾರ್ಥಿನಿಯ ಆರೋಪವೇನು?:

  11ನೇ ಕ್ಲಾಸ್ ಓದುತ್ತಿರುವ ವಿದ್ಯಾರ್ಥಿನಿ ಪೊಲೀಸರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. ಆರನೇ ತರಗತಿ ಓದುತ್ತಿರುವ ವೇಳೆಯಿಂದಲೇ ತಂದೆ (Father) ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತಿಲಕ್ ಯಾವದ್ ಅವರಿಂದಲೂ ತಂದೆ ಅತ್ಯಾಚಾರ ಮಾಡಿಸಿದ್ದಾನೆ. ಇಷ್ಟು ಮಾತ್ರವಲ್ಲದೇ ತಿಲಕ್ ಯಾದವ್ ಅವರ ಮೂವರು ಕಿರಿಯ ಸೋದರರು ಕೂಡ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವಿದ್ಯಾರ್ಥಿನಿ ತನ್ನ ದೂರಿನಲ್ಲಿ ತಿಳಿಸಿದ್ಧಾರೆ.

  ಪೋರ್ನ್ ವಿಡಿಯೋ ತೋರಿಸಿದರು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದರು:

  ಆರನೇ ಕ್ಲಾಸ್ ನಲ್ಲಿದ್ದಾಗ ಒಮ್ಮೆ ತಂದೆ ಜೊತೆ ಸಂಜೆ ಹೊರಗೆ ಹೋಗಿದ್ದೆ. ಈ ವೇಳೆ ತಂದೆ ಮೊಬೈಲ್ ನಲ್ಲಿ ಪೋರ್ನ್ ವಿಡಿಯೋ ತೋರಿಸಲು ಪ್ರಯತ್ನಿಸಿದರು. ವಿಡಿಯೋ ನೋಡಲು ನಾನು ವಿರೋಧಿಸಿದ್ದಕ್ಕೆ ನನ್ನನ್ನು ನಿಂದಿಸಿದರು. ಈ ಘಟನೆಯ ಮರುದಿನವೇ ಹೊಸ ಬಟ್ಟೆ ತಂದು ಬೈಕ್ ಕಲಿಸುವ ನೆಪದಲ್ಲಿ ಹೊರಗೆ ಕರೆದುಕೊಂಡು ಹೋದರು. ನಿರ್ಜನ ಪ್ರದೇಶದ ತೋಟಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿ, ಮನೆಯಲ್ಲಿ ವಿಷಯ ತಿಳಿಸಿದ್ರೆ ಅಮ್ಮ ಮತ್ತು ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಅಪ್ಪನ ಬೆದರಿಕೆ ಮಾತುಗಳಿಂದ ನಾನು ತುಂಬಾ ಹೆದರಿದ್ದೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

  ಇದನ್ನೂ ಓದಿ: Lakhimpur Kheri violence: ಸರ್ಕಾರದ ಮೌನದ ಬಗ್ಗೆ ಅಮೆರಿಕದಲ್ಲಿ ಉತ್ತರಿಸಿದ Nirmala Sitharaman

  ಮೂರ್ಛೆ ತಪ್ಪಿಸಿ ಹೋಟೆಲ್‍ಗೆ ಕರೆದೊಯ್ದುರು:

  ತೋಟದ ಘಟನೆ ಬಳಿಕ ನನ್ನ ಮೇಲೆ ತಂದೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಒಂದು ಶಾಲೆ ಬಳಿ ಬಂದ ತಂದೆ ನಶೆ ಪದಾರ್ಥ ಸೇರಿದ ಪಾನಿಪುರಿ ತಿನ್ನಿಸಿ ಹೋಟೆಲ್​ಗೆ ಕರೆದುಕೊಂಡು ಹೋದರು. ಹೋಟೆಲ್ ನಲ್ಲಿ ಓರ್ವ ನನ್ನ ಮೇಲೆ ಅತ್ಯಾಚಾರ ಎಸಗಿದನು. ನನಗೆ ಜ್ಞಾನ ಬಂದಾಗ ಒಬ್ಬಳೇ ಆದ ಅನ್ನೋ ಭಾವ ಮೂಡಿತ್ತು. ಮನೆಗೆ ತಲುಪಿದ ಕೂಡಲೇ ಇನ್ನು ಮುಂದೆ ನೀನು ಹೀಗೆ ಮಾಡಬೇಕು. ಇಲ್ಲವಾದ್ರೆ ನಿನ್ನ ತಾಯಿಯನ್ನು ಕೊಲ್ಲುತ್ತೇನೆ ಎಂದು ತಂದೆ ಮತ್ತೆ ಬೆದರಿಕೆ ಹಾಕಿದರು. ಈ ಘಟನೆ ಬಳಿಕ ಹೋಟೆಲ್​ನಲ್ಲಿ ನನ್ನ ಮೇಲೆ ನಿರಂತರವಾಗಿ ನಡೆಯಲಾರಂಭಿಸಿದವು. ನನ್ನ ತಂದೆಯ ಸ್ನೇಹಿತರಲ್ಲಿ ತಿಲಕ್ ಯಾದವ್ ಸಹ ಒಬ್ಬರು. ಇವರ ಜೊತೆ ಅವರ ಸೋದರರಾದ ಮಹೇಂದ್ರ ಯಾದವ್, ರಾಜೂ ಯಾದವ್, ಅರವಿಂದ್ ಯಾದವ್ ಸಹ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

  ದೂರಿನಲ್ಲಿ 25 ಜನರ ಹೆಸರು;

  ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಮಾತ್ರವಲ್ಲದೇ ಬಿಎಸ್​ಪಿ ಜಿಲ್ಲಾಧ್ಯಕ್ಷ, ಓರ್ವ ಇಂಜಿನೀಯರ್, ಅನೇಕ ಸಮಾಜವಾದಿ ಮುಖಂಡರು, ಸಂಬಂಧಿಕರು, ಮೂವರು ಅಪರಿಚಿತರು ಸೇರಿದಂತೆ ಒಟ್ಟು 25 ಜನರ ವಿರುದ್ಧ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾಳೆ. ವಿದ್ಯಾರ್ಥಿನಿ ಹೇಳಿಕೆಯಾಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೊಂದು ಗಂಭೀರ ಆರೋಪಗಳುಳ್ಳ ಪ್ರಕರಣವಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: