news18-kannada Updated:November 25, 2020, 7:31 PM IST
ಲಕ್ಷ್ಮಿ ವಿಲಾಸ್ ಬ್ಯಾಂಕ್.
ನವ ದೆಹಲಿ (ನವೆಂಬರ್ 25); ಬ್ಯಾಂಕ್ಗಳ ವಿಲೀನಗಳಿಗೆ ಮುಂದಾಗಿ ಈಗಾಗಲೇ ದೇಶದ ಅನೇಕ ಬ್ಯಾಂಕ್ಗಳನ್ನು ವಿಲೀನಗೊಳಿಸಿರುವ ಕೇಂದ್ರ ಸರ್ಕಾರ ಇಂದು ಲಕ್ಷ್ಮಿ ವಿಲಾಸ್ ಬ್ಯಾಂಕ್ ಅನ್ನು ಅಧಿಕೃತವಾಗಿ ಸಿಂಗಾಪುರ ಮೂಲದ ಡಿಬಿಎಸ್ ಬ್ಯಾಂಕ್ ಜೊತೆಗೆ ವಿಲೀನಕ್ಕೆ ಒಳಪಡಿಸಿದೆ. ಲಕ್ಷ್ಮಿ ವಿಲಾಸ್ ಬ್ಯಾಂಕ್ ಅನ್ನು ಡಿಬಿಎಸ್ ಬ್ಯಾಂಕಿನ ಸಂಪೂರ್ಣ ಸ್ವಾಮ್ಯಕ್ಕೆ ಒಳಪಡಿಸಲು ಬುಧವಾರ (ನವೆಂಬರ್. 25) ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಎಲ್ಲಾ ಸಚಿವರುಗಳು ಒಮ್ಮತದಿಂದ ಒಪ್ಪಿಗೆ ಸೂಚಿಸಿದ ನಂತರ ಬ್ಯಾಂಕ್ ವಿಲೀನದ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ. ಅಸಲಿಗೆ ಕಳೆದ ಹಲವು ದಿನಗಳಿಂದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಅನ್ನು ಡಿಬಿಎಸ್ ಜೊತೆ್ಗೆ ವಿಲೀನಗೊಳಿಸುವ ಕುರಿತ ಮಾತುಗಳು ಕೇಳಿ ಬರುತ್ತಿತ್ತು. ಆದರೆ, ಇಂದು ಕೊನೆಗೂ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಈ ಎರಡೂ ಬ್ಯಾಂಕ್ಗಳನ್ನು ವಿಲೀನಗೊಳಿಸಲಾಗಿದೆ. ಆದರೆ ಬ್ಯಾಂಕುಗಳ ವಿಲೀನವಾಗುವುದರಿಂದ ಠೇವಣಿದಾರರು ತಮ್ಮ ಠೇವಣಿ ಹಿಂಪಡೆಯುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಅಲ್ಲದೆ, ಠೇವಣಿ ಕುರಿತು ಯಾವುದೇ ಚಿಂತೆಯ ಅಗತ್ಯ ಇಲ್ಲ” ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದ್ದಾರೆ.
ಬ್ಯಾಂಕುಗಳ ವಿಲೀನದ ಯೋಜನೆಯ ಭಾಗವಾಗಿ, ಡಿಬಿಎಸ್ ಇಂಡಿಯಾ ಹೊಸ ಬಂಡವಾಳವಾಗಿ ಲಕ್ಷ್ಮಿ ವಿಲಾಸ್ ಬ್ಯಾಂಕ್ಗೆ 2,500 ಕೋಟಿ ರೂಪಾಯಿಯನ್ನು ಭರಿಸಲಿದೆ.
ತಮಿಳುನಾಡು ಮೂಲದ ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿ, ಒಂದು ತಿಂಗಳವರೆಗೆ ಹಣ ವಿತ್ ಡ್ರಾ ಮಿತಿಯನ್ನು 25,000ಕ್ಕೆ ನಿಗದಿಪಡಿಸಿತ್ತು. ಬ್ಯಾಂಕ್ನ ಆರ್ಥಿಕ ಪರಿಸ್ಥಿತಿ ನಿರಂತರವಾಗಿ ಕುಸಿತ ಕಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.
ಈ ನಿರ್ಬಂಧ ನವೆಂಬರ್ 17 ರಿಂದ ಡಿಸೆಂಬರ್ 16 ರವರೆಗೆ ಜಾರಿಗೆ ತರಲಾಗಿದ್ದು, ಈ ಆದೇಶವನ್ನು ಎಬಿಐ ಕಾಯ್ದೆಯ ಸೆಕ್ಷನ್ 45 ರ ಅಡಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿತ್ತು.
ಇದನ್ನೂ ಓದಿ : ಐಎಂಎ ವಂಚನೆ ಪ್ರಕರಣ: ಮೂರು ದಿನ ಸಿಬಿಐ ಪೊಲೀಸರ ವಶಕ್ಕೆ ರೋಷನ್ ಬೇಗ್
2019 ರ ಸೆಪ್ಟೆಂಬರ್ನಲ್ಲಿ ಎಲ್ವಿಬಿಯನ್ನು ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ ಅಡಿಯಲ್ಲಿ ಇರಿಸಲಾಗಿತ್ತು.ಕೆಟ್ಟ ಸಾಲಗಳು ಮತ್ತು ನಿಬಂಧನೆಗಳ ಏರಿಕೆಯಿಂದಾಗಿ ಸೆಪ್ಟೆಂಬರ್ 2020ಕ್ಕೆ ತನ್ನ ನಿವ್ವಳ ನಷ್ಟ 397 ಕೋಟಿ ರೂಪಾಯಿಗೆ ವಿಸ್ತರಿಸಿದೆ ಎಂದು ಬ್ಯಾಂಕ್ ತಿಳಿಸಿತ್ತು. ತಮಿಳುನಾಡಿನ ಕರೂರು ಮೂಲದ ಲಕ್ಷ್ಮೀ ವಿಲಾಸ ಬ್ಯಾಂಕ್ 1926ರಲ್ಲಿ ಸ್ಥಾಪನೆಯಾಗಿತ್ತು.
ಸೆಪ್ಟೆಂಬರ್ 27 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಮೀತಾ ಮಖಾನ್ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ಬ್ಯಾಂಕ್ ಮುನ್ನಡೆಸಲು ರಚನೆ ಮಾಡಿತ್ತು. ಕೆನರಾ ಬ್ಯಾಂಕ್ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್. ಮನೋಹರನ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
Published by:
MAshok Kumar
First published:
November 25, 2020, 7:31 PM IST