HOME » NEWS » National-international » LAKSHADWEEP FILMMAKER FACES SEDITION FIR FOR BIO WEAPON REMARK MAK

ಕೇಂದ್ರದಿಂದ ಲಕ್ಷದ್ವೀಪದ ಮೇಲೆ ಜೈವಿಕ ಅಸ್ತ್ರ ಬಳಕೆ ಎಂದು ಆರೋಪಿಸಿದ್ದ ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ

ಆಯೆಷಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಕೇಂದ್ರ ಸರ್ಕಾರ ದೇಶದ್ರೋಹ ಎಂಬ ಪದವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

news18-kannada
Updated:June 11, 2021, 7:34 PM IST
ಕೇಂದ್ರದಿಂದ ಲಕ್ಷದ್ವೀಪದ ಮೇಲೆ ಜೈವಿಕ ಅಸ್ತ್ರ ಬಳಕೆ ಎಂದು ಆರೋಪಿಸಿದ್ದ ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ
ನಿರ್ಮಾಪಕಿ ಐಶಾ ಸುಲ್ತಾನ್.
  • Share this:
ನವ ದೆಹಲಿ (ಜೂನ್ 11); ಇಡೀ ಭಾರತ ಕೊರೋನಾ ಮೊದಲ ಮತ್ತು ಎರಡನೇ ಅಲೆಗೆ ತತ್ತರಿಸಿದ್ದ ಸಂದರ್ಭದಲ್ಲೂ ಕಳೆದ ಡಿಸೆಂಬರ್​ ವರೆಗೆ ನೆರೆಯ ಕೇಂದ್ರಾಡ ಳಿತ ಪ್ರದೇಶ ಲಕ್ಷದ್ವೀಪದಲ್ಲಿ ಒಂದೇ ಒಂದು ಕೊರೋನಾ ಸೋಂಕು ಪ್ರಕರಣಗಳೂ ದಾಖಲಾಗಿರಲಿಲ್ಲ. ಆದರೆ, ಲಕ್ಷದ್ವೀಪಕ್ಕೆ ಹೊಸ ಆಡಳಿತ ಅಧಿಕಾರಿಯಾಗಿ ನೇಮಕವಾಗಿದ್ದ ಪ್ರಫುಲ್ ಪಟೇಲ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಸೋಗಿನಲ್ಲಿ ಎಲ್ಲಾ ಪ್ರವಾಸಿಗಳನ್ನು ದ್ವೀಪಕ್ಕೆ ಸ್ವಾಗತಿಸಿದ್ದರು. ಪರಿಣಾಮ ಕಳೆದ ಜನವರಿಯಿಂದ ಲಕ್ಷದ್ವೀಪದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 40ಕ್ಕೂ ಹೆಚ್ಚು ಜನ ಈವರೆಗೆ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ಷದ್ವೀಪದಲ್ಲಿ ಕೇಂದ್ರ ಸರ್ಕಾರದ ಕೊರೋನಾ ನಿರ್ವಹಣೆ ಯನ್ನು ಟೀಕಿಸಿದ್ದ ಚಲನ ಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನ್, "ಕೇಂದ್ರವು ಲಕ್ಷದ್ವೀಪದ ಮೇಲೆ ಜೈವಿಕ ಶಸ್ತ್ರಾಸ್ತ್ರ ವನ್ನು ಬಳಸಿದೆ" ಆರೋಪಿಸಿದ್ದರು. ಆದರೆ, ಈ ಹೇಳಿಕೆಗೆ ಇದೀಗ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಕೊರೋನಾ ಸೋಮಕಿನ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಬಿಜೆಪಿ ಮುಖಂಡರ ದೂರಿನ ಅನ್ವಯ ನಿರ್ಮಾಪಕಿ ಆಯೆಷಾ ಸುಲ್ತಾನಾ ವಿರುದ್ಧ ಲಕ್ಷದ್ವೀಪ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.

ನಿರ್ಮಾಪಕಿ ಆಯೆಷಾ ಸುಲ್ತಾನಾ, ಪ್ರಾದೇಶಿಕ ಚಾನೆಲ್‌ನಲ್ಲಿ ಸುದ್ದಿ ಚರ್ಚೆಯ ಸಂದರ್ಭದಲ್ಲಿ, ಕೊರೋನಾ ನಿಯಂತ್ರಣಕ್ಕೆ ಪ್ರಫುಲ್ ಪಟೇಲ್ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಟೀಕಿಸಿದ್ದರು. ಕೇಂದ್ರವು ಲಕ್ಷದ್ವೀಪದ ವಿರುದ್ಧ "ಜೈವಿಕ ಶಸ್ತ್ರಾಸ್ತ್ರ" ವನ್ನು ಬಳಸಿದೆ ಎಂದು ಆರೋಪಿಸಿದ್ದರು.

"ಲಕ್ಷದ್ವೀಪದಲ್ಲಿ ಕೊರೊನಾ ಪ್ರಕರಣಗಳು ಶೂನ್ಯವಾಗಿದ್ದವು. ಈಗ ಪ್ರತಿದಿನ 100 ಪ್ರಕರಣಗಳನ್ನು ವರದಿ ಮಾಡುತ್ತಿದೆ. ಕೇಂದ್ರ ಸರ್ಕಾರವು 'ಜೈವಿಕ ಶಸ್ತ್ರಾಸ್ತ್ರ' ಬಳಸುತ್ತಿದೆ ಎಂದು ನಾನು ಇದನ್ನು ಸ್ಪಷ್ಟವಾಗಿ ಹೇಳಬಲ್ಲೆ" ಎಂದು ಅವರು ಮಲಯಾಳಂನಲ್ಲಿ ಹೇಳಿದ್ದರು.
ಆಯೆಷಾ ಹೇಳಿಕೆಯಿಂದಾಗಿ ಬಿಜೆಪಿ ಕಾರ್ಯಕರ್ತರು ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಬಿಜೆಪಿಯ ಲಕ್ಷದ್ವೀಪ ಮುಖ್ಯಸ್ಥ ಸಿ.ಅಬ್ದುಲ್ ಖಾದರ್ ಹಾಜಿ ದೇಹ ವಿರೋಧಿ ಹೇಳಿಕೆಗಳಿಂದ ಕೇಂದ್ರ ಸರ್ಕಾರಕ್ಕೆ ಕಳಂಕ ತಂದಿದ್ದಾರೆ” ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Explainer: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರುತ್ತಲೇ ಇದೆ ಇದಕ್ಕೆ ಕಾರಣವೇನು ಗೊತ್ತೇ..?

ನಿರ್ಮಾಪಕಿ ಆಯೆಷಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಮತ್ತು 153 ಬಿ (ದ್ವೇಷಪೂರಿತ ಭಾಷಣ) ಅಡಿಯಲ್ಲಿ ಕವರತ್ತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಪ್ರಕರಣ ದಾಖಲಾಗಿರುವ ಬಗ್ಗೆ ಚಿತ್ರನಿರ್ಮಾಪಕಿ ಆಯೆಷಾ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿಕೊಂಡಿದ್ದಾರೆ. "ಅವರು ನನ್ನ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದಾರೆ, ಆದರೆ, ಸತ್ಯವು ಗೆಲ್ಲುತ್ತದೆ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಲಕ್ಷದ್ವೀಪದ ಬಿಜೆಪಿ ಕಾರ್ಯಕರ್ತರೊಬ್ಬರು ಪ್ರಕರಣ ದಾಖಲಿಸಿದ್ದಾರೆ. ನಾನು ಹುಟ್ಟಿದ ಭೂಮಿಗಾಗಿ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ನಾವು ಯಾರಿಗೂ ಹೆದರುವುದಿಲ್ಲ. ನನ್ನ ಧ್ವನಿ ಈಗ ಮತ್ತಷ್ಟು ಜೋರಾಗಿರುತ್ತದೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ: Black Fungus| ಬ್ಲಾಕ್​ ಫಂಗಸ್​ಗೆ ಕಳೆದ 3 ವಾರಗಳಲ್ಲಿ 2,100 ಜನ ಬಲಿ; 31,000 ಕೇಸ್, ಶೇ.150ಕ್ಕಿಂತ ಹೆಚ್ಚಾಗಿದೆ ಪ್ರಕರಣಗಳ ಸಂಖ್ಯೆ

ಆಯೆಷಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಕೇಂದ್ರ ಸರ್ಕಾರ "ದೇಶದ್ರೋಹ" ಎಂಬ ಪದವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
Youtube Video

ಲಕ್ಷದ್ವೀಪದಲ್ಲಿ ಸರ್ಕಾರ ಜಾರಿಗೆ ತರಲು ಹೊರಟಿರುವ 3 ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ವಿರೋಧಿಸಿ ಲಕ್ಷದ್ವೀಪ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವಿಭಿನ್ನ ಪ್ರತಿಭಟನೆಗಳಿಗೆ ಲಕ್ಷದ್ವೀಪ ಸಾಕ್ಷಿಯಾಗುತ್ತಿದೆ.
Published by: MAshok Kumar
First published: June 11, 2021, 7:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories