Lakhimpur Violence- ಅಣ್ಣ ಬಿಟ್ಟುಬಿಡಿ, ತಮ್ಮಂದಿರಾ ಹೊಡೀಬೇಡಿ… ಕರಗದ ಪ್ರತಿಭಟನಾಕಾರರ ಹೃದಯ

Viral Video- ನನ್ನನ್ನು ಬಿಡುವಂತೆ ಎರಡೂ ಕೈಗಳನ್ನ ಜೋಡಿಸಿ ಪ್ರಾರ್ಥಿಸುತ್ತಿದ್ದ ಚಾಲಕನ ಆರ್ತನಾದ ಉದ್ರಿಕ್ತ ಜನರ ಹೃದಯಕ್ಕೆ ನಾಟಲಿಲ್ಲ. ಆ ವ್ಯಕ್ತಿಯನ್ನ ಹೊಡೆದೂ ಹೊಡೆದೂ ಸಾಯಿಸಿದರು. ಲಖೀಮಪುರ್ ಖೇರಿಯಲ್ಲಿ ಸಂಭವಿಸಿದ ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

ಲಖೀಮ್​ಪುರ್​ನಲ್ಲಿನ ರೈತರು

ಲಖೀಮ್​ಪುರ್​ನಲ್ಲಿನ ರೈತರು

  • News18
  • Last Updated :
  • Share this:
    ಲಕ್ನೋ: ಲಖಿಂಪುರ ಖೇರಿ (Lakhimpur Kheri) ಯಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ( Union Minister of State (MoS) for Home Ajay Mishra's son) ಅವರ ಕಾರು ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ಹೃದಯವಿದ್ರಾವಕ ವಿಡಿಯೋ ಹೊರ ಬಂದಿದೆ. ಅಣ್ಣ, ತಮ್ಮ ಹೊಡಿಬೇಡಿ ಅಂತ ಅಂಗಲಾಚಿದ್ರೂ ಕೆರಳಿದ್ದ ಪ್ರತಿಭಟನಾಕಾರರ ಗುಂಪು ಕೋಲುಗಳಿಂದ ಹೊಡೆದಿರುವ ದೃಶ್ಯಗಳು ವಿಡಿಯೋದಲ್ಲಿವೆ. ಚಾಲಕ ತನ್ನನ್ನ ಬಿಡುವಂತೆ ಎರಡು ಕೈಗಳನ್ನು ಜೋಡಿಸಿ ಅಸಹಾಯಕನಾಗಿ ಕೂಗುತ್ತಿದ್ದರೂ ಮೂರ್ನಾಲ್ಕು ಜನರ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಇದೇ ವಿಡಿಯೋದಲ್ಲಿ ಜನರು ಜೋರು ಜೋರಾಗಿ ಹೊಡಿರಿ ಎಂದು ಕೂಗುತ್ತಿರೋದನ್ನು ಕೇಳಬಹುದು. ಕೆಲವರು ಕೋಲುಗಳು ಹಿಡಿದು ಓಡುತ್ತಿರುವ ದೃಶ್ಯ, ವಾಹನಕ್ಕೆ ಬೆಂಕಿ ತಗುಲಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.

    ಪ್ರಾಣ ಭಿಕ್ಷೆ ಕೇಳುತ್ತಿದ್ದ ಚಾಲಕ:

    ಚಾಲಕನ ತಲೆಯಿಂದ ನೆತ್ತರು ಹರಿಯುತ್ತಿತ್ತು. ಆತ ಭಯಗೊಂಡಿದ್ದನು. ಆತನ ಮುಖ ಮತ್ತು ಕಣ್ಣುಗಳಲ್ಲಿ ಸಾವಿನ ಭಯ ಕಾಣಿಸುತ್ತಿತ್ತು. ತನ್ನೆದರು ನಿಂತಿದ್ದ ಜನರನ್ನ ಒಮ್ಮೆ ಬಲಕ್ಕೆ, ಮತ್ತೊಮ್ಮೆ ಎಡಕ್ಕೆ ನೋಡುತ್ತಿದ್ದನು. ಭಯದಿಂದ ಇಡೀ ದೇಹ ಕಂಪಿಸುತ್ತಿತ್ತು. ಅಣ್ಣಂದಿರಾ, ತಮ್ಮಂದಿರಾ ಹೊಡಿಬೇಡಿ ಎರಡೂ ಕರಗಳನ್ನು ಜೋಡಿಸಿ ಜೀವದ ಭಿಕ್ಷೆ ಕೇಳುತ್ತಿದ್ದನು. ಆದ್ರೆ ಈ ಯಾವ ಮಾತುಗಳು ಮುಂದೆ ನಿಂತಿರುವ ಜನರ ಕಠೋರ ಕರ್ಣಗಳನ್ನು ತಲುಪಲೇ ಇಲ್ಲ. ಒಂದಾದ ನಂತರ ಮತ್ತೊಂದು ಎಂಬಂತೆ ಸಾಲು ಸಾಲು ಏಟುಗಳು ಬೀಳುತ್ತಲೇ ಆಶಿಶ್ ಮಿಶ್ರಾ ಚಾಲಕ ಸಾವನ್ನಪ್ಪಿದ್ದಾನೆ.

    ಸಚಿವರ ಪುತ್ರನ ಕೊಲೆ ಪ್ರಕರಣ ದಾಖಲು:

    ಭಾನುವಾರ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ಆಶೀಶ್ ನನ್ನು ವಶಕ್ಮೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆಗ ಒಳಪಡಿಸಿದ್ದಾರೆ. ಪ್ರತಿಭಟನಾಕಾರರ ಮೇಲೆ ಆಶೀಶ್ ಮಿಶ್ರಾನೇ ವಾಹನ ಚಲಾಯಿಸಿರುವ ಆರೋಪ ಕೇಳಿ ಬಂದಿದೆ. ಪ್ರಕರಣದ ಕುರಿತು ಮಾಹಿತಿ ನೀಡಿರುವ ಐಜಿ ಶ್ರೇಣಿಯ ಲಕ್ಷ್ಮಿ ಸಿಂಗ್, ದೂರಿನ ಆಧಾರದ ಮೇಲೆ ಆಶೀಶ್ ಮಿಶ್ರಾ ಸೇರಿದಂತೆ 15-20 ಅಪರಿಚಿತರ ವಿರುದ್ಧ ಸೆಕ್ಷನ್ 1417, 148, 149, 302, 130ಬಿ ಮತ್ತು 304ಎ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: Indore Sex Racket: 5 ವರ್ಷದಲ್ಲಿ 75 ಮದುವೆ, 200 ಯುವತಿಯರ ಸಾಗಾಟ: ದೇಶವನ್ನೇ ಬೆಚ್ಚಿ ಬೀಳಿಸಿದ ಕೇಸ್

    ಏನಿದು ಘಟನೆ?

    ಕೃಷಿ ಕಾನೂನು ಬಗ್ಗೆ ಅಜಯ್ ಮಿಶ್ರಾ ಹೇಳಿಕೆ ಖಂಡಿಸಿಮ ಲಖಿಂಪುರದಲ್ಲಿ ಕಪ್ಪು ಧ್ವಜ ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ಬದಲಾಗಿತ್ತು. ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು, ಘಟನಾ ಸ್ಥಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಜಾಗ್ರಮ ಕ್ರಮವಾಗಿ ಲಖಿಂಪುರಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನ ಬಂದ್ ಮಾಡಲಾಗಿದೆ. ಲಖಿಂಪುರ ಪ್ರವೇಶಕ್ಕೆ ಮುಂದಾಗಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನ ಗೃಹ ಬಂಧನದಲ್ಲಿರಿಸಲಾಗಿದೆ. ಗೆಸ್ಟ್ ಹೌಸ್ ನಲ್ಲಿ ಪ್ರಿಯಾಂಕಾ ಗಾಂಧಿ ಕಸ ಗುಡಿಸುತ್ತಿರುವ ಚಿತ್ರ ವೈರಲ್ ಆಗಿದೆ. ಪ್ರಿಯಾಂಕಾ ಅವರ ಗೃಹಬಂಧನವನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದೆ. ಸದ್ಯ ಲಖಿಂಪುರ ಖೇರಿ ಹಿಂಸಾಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಉತ್ತರ ಪ್ರದೇಶ ಸರ್ಕಾರ ಮೃತ ಕುಟುಂಬಸ್ಥರಿಗೆ ಪರಿಹಾರ ಘೋಷಣೆ ಮಾಡಿದೆ.
    Published by:Vijayasarthy SN
    First published: