Lakhimpur Kheri violence: 6 ಮಂದಿ ಶಂಕಿತರ ಫೋಟೋ ಬಿಡುಗಡೆ ಮಾಡಿದ SIT

Lakhimpur Kheri violence: ಹಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಎಸ್ಐಟಿ ಸಂಗ್ರಹಿಸಿದ್ದು, ಇದೀಗ ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿ, ಅವರ ಬಗ್ಗೆ ಗೊತ್ತಿದರೆ ಮಾಹಿತಿ ನೀಡುವಂತೆ ಜನರಿಗೆ ಎಸ್​ಐಟಿ ಟೀಂ ಮನವಿ ಮಾಡಿಕೊಂಡಿದೆ.

SIT ಬಿಡುಗಡೆಗೊಳಿಸಿರುವ ಶಂಕಿತರ ಚಿತ್ರ

SIT ಬಿಡುಗಡೆಗೊಳಿಸಿರುವ ಶಂಕಿತರ ಚಿತ್ರ

  • Share this:
SIT releases six photos : ಉತ್ತರ ಪ್ರದೇಶ(Uttar Pradesh) ದ ಲಿಖಿಂಪುರ ಖೇರಿ (Lakhimpur Kheri) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್​ಐಟಿ(SIT) ಟೀಂ ಆರು ಮಂದಿ ಶಂಕಿತ ಆರೋಪಿಗಳ ಫೋಟೋ(Photo)ಗಳನ್ನ ರಿಲೀಸ್​ ಮಾಡಿದೆ. ಅಕ್ಟೋಬರ್​ 3ರಂದು ರೈತರ ಮೇಲೆ ಎಸ್​​ಯುವಿ(SUV) ವಾಹನ(Vehicle) ಹರಿದು ನಾಲ್ಕು ಮಂದಿ ಮೃತಪಟ್ಟಿದ್ದರು. ಬೆಂಕಿ ಹೊತ್ತಿಸಲಾದ ಅದೇ ಎಸ್​​ಯುವಿ ವಾಹನದ ಬಳಿ ನಿಂತಿರುವ ಆರು ಜನರ ಚಿತ್ರ ಈಗ ಬಿಡುಗಡೆಯಾಗಿದೆ. ಈ ಘಟನೆಗೆ ಸಂಬಂಧಿಸದಂತೆ ಮಾಹಿತಿ ನೀಡುವವರ ವಿವರ ಬಹಿರಂಗ ಪಡಿಸುವುದಿಲ್ಲ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನ(Prize) ನೀಡಲಾಗುತ್ತೆ ಎಂದು ಎಸ್​​ಐಟಿ(SIT) ಹೇಳಿದೆ. ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆಗಾಗಿ ಯುಪಿ ಸಿಎಂ ಯೋಗಿ ಆದಿತ್ಯಾನಾಥ್(Yogi Adityanath)​ ಸರ್ಕಾರ ಎಸ್​​ಐಟಿ ತಂಡವನ್ನು ರಚಿಸಿತ್ತು.

ಶಂಕಿತರ ಮಾಹಿತಿ ನೀಡುವಂತೆ SIT ಮನವಿ

ಬಿಜೆಪಿ ಕಾರ್ಯಕರ್ತರನ್ನು ಥಳಿಸಿರುವ ಘಟನೆಗೆ ಸಂಬಂಧಿಸಿದ ಹಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಎಸ್ಐಟಿ ಸಂಗ್ರಹಿಸಿದ್ದು, ಇದೀಗ ಶಂಕಿತರ ಫೋಟೋಗಳನ್ನು ಬಿಡುಗಡೆ ಮಾಡಿ, ಅವರ ಬಗ್ಗೆ ಏನಾದರು ಗೊತ್ತಿದರೆ ನೀಡುವಂತೆ ಜನರಿಗೆ ಎಸ್​ಐಟಿ ಟೀಂ ಮನವಿ ಮಾಡಿಕೊಂಡಿದೆ. ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ ಘಟನೆ ಸಂಬಂಧ ವಿಚಾರಣೆಗಾಗಿ ಎಸ್​ಐಟಿ ಈಗಾಗಲೇ ಸುಮಾರು ನಲವತ್ತಕ್ಕೂ ಹೆಚ್ಚು ರೈತರಿಗೆ ನೋಟಿಸ್​ ನೀಡಿದೆ. ಇನ್ನೂ ಈಗಾಗಲೇ ಕೆಲ ಶಂಕಿತರನ್ನು ಕರೆಸಿ, ವಿಚಾರಣೆ ನಡೆಸಿದೆ.

ಇದನ್ನು ಓದಿ : ಲಖೀಂಪುರ್​ ಹತ್ಯಾಕಾಂಡ; 10 ದಿನಗಳ ಬಳಿಕ ಘಟನಾ ಸ್ಥಳಕ್ಕೆ ಬಿಜೆಪಿ ಸಚಿವ, ಮೃತ ರೈತ ಕುಟುಂಬಗಳ ಭೇಟಿಗೆ ನಿರಾಕರಣೆ!

ಇಂದು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ

ಲಖಿಂಪುರ ಖೇರಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಈ ಘಟನೆಯಲ್ಲಿ ನಾಲ್ವರು ಕೃಷಿಕರು, ವಾಹನ ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಪತ್ರಕರ್ತ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. 8 ಮಂದಿಯನ್ನು ಬರ್ಬರವಾಗಿ ಹತ್ಯೆ ನಡೆಸಿದ ಕುರಿತಂತೆ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆಅಕ್ಟೋಬರ್​ 8ರಂದು, ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್​​, ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಇಂದು ಮತ್ತೆ ಈ ವಿಚಾರಣೆಯನ್ನ ಈ ಪೀಠ ಕೈಗೆತ್ತಿಕೊಳ್ಳಲಿದೆ.

ಇದುವರೆಗೂ 8 ಜನರ ಬಂಧನ

ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಸೇರಿದಂತೆ ಇದುವರೆಗೂ ಎಂಟು ಜನರನ್ನು ಬಂಧಿಸಲಾಗಿದೆ. ಘಟನೆ ಕುರಿತು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಇಬ್ಬರು ವಕೀಲರು ಪತ್ರ ಬರೆದಿದ್ದರು. ಘಟನೆ ಕುರಿತು ಸಿಬಿಐ ಸೇರಿದಂತೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎರಡೂ ಕಡೆಯ ವಕೀಲರು ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದ ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನ ನಡೆಸುತ್ತಿದೆ.

ಇದನ್ನು ಓದಿ : ಲಖೀಂಪುರ್​ ರೈತ ಹತ್ಯಾಕಾಂಡ; ಆಶೀಶ್ ಮಿಶ್ರಾಗೆ ಜಾಮೀನು ನಿರಾಕರಣೆ, ಮತ್ತಿಬ್ಬರ ಬಂಧನ

ಕೇಂದ್ರದ ನೂತನ ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ವಿರುದ್ಧ ಪ್ರತಿಭಟಿಸುವಾಗ ಅ.3ರಂದು ಅವರ ಮೇಲೆ ವಾಹನವನ್ನು ಹರಿಸಲಾಗಿದ್ದು, ನಾಲ್ವರು ರೈತರು ಮೃತಪಟ್ಟಿದ್ದರು. ಬಳಿಕ ಕೋಪೋದ್ರಿಕ್ತ ಪ್ರತಿಭಟನಕಾರರು ಹಲ್ಲೆ ನಡೆಸಿದ್ದರಿಂದ ನಾಲ್ಕು ಮಂದಿ ಸಾವಿಗೀಡಾಗಿದ್ದರು. ಇಂದು ಈ ವಿಚಾರಣೆಯನ್ನ ಸುಪ್ರೀಂ ಕೋರ್ಟ್​ ಕೈಗೆತ್ತಿಕೊಳ್ಳಲಿದ್ದು, ಯಾವ ವಿಚಾರಗಳ ಬಗ್ಗೆ ವಾದ - ವಿವಾದಗಳು ನಡೆಯಲಿದೆ ಎಂದು ಕುತೂಹಲ ಮೂಡಿಸಿದೆ. ಎಲ್ಲರ ಚಿತ್ತ, ಇದೀಗ ಸುಪ್ರೀಂ ಕೋರ್ಟ್​ನತ್ತ ನೆಟ್ಟಿದೆ.
Published by:Vasudeva M
First published: