Lakhimpur Kheri Violence: ಆಶಿಶ್ ಮಿಶ್ರಾ ಅರೆಸ್ಟ್ ಆಗಿದ್ದೇಕೆ? SIT ಕೈಗೆ ಸಿಕ್ಕಿರೋ CCTV Footageನಲ್ಲಿ ಏನಿದೆ?

Ashih Mishra Arrest: ಪೊಲೀಸರು ಹಿಂಸಾಚಾರ ನಡೆದ ಘಟನಾ ಸ್ಥಳದ ಮಾರ್ಗದ ಮಧ್ಯೆದಲ್ಲಿರುವ ಕೆಲ ಅಂಗಡಿಗಳ ಮುಂಭಾಗದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಆಶಿಶ್ ಮಿಶ್ರಾ ಇರೋ ದೃಶ್ಯಗಳು ಸೆರೆಯಾಗಿವೆ ಎಂದು ವರದಿಯಾಗಿದೆ.

ಲಖೀಂಪುರ ಹಿಂಸಾಚಾರ

ಲಖೀಂಪುರ ಹಿಂಸಾಚಾರ

 • Share this:
  ಲಕ್ನೋ: ಲಖೀಂಪುರ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆಗೆ ಹಾಜರಾಗಿದ್ದ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ( Ajay Mishra's son) ಪುತ್ರ ಆಶಿಶ್ ಮಿಶ್ರಾ(AShish Mishra)ನನ್ನು ಶನಿವಾರ ತಡರಾತ್ರಿ ಎಸ್‍ಐಟಿ (SIT) ವಶಕ್ಕೆ ಪಡೆದುಕೊಂಡಿತ್ತು. ಇಂದು ನ್ಯಾಯಾಲಯ ಆರೋಪಿಯನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಆರೋಪಿ ಪ್ರಕರಣದ ತನಿಖೆಗೆ ಸಹಕರಿಸುತ್ತಿಲ್ಲ. ಕೇವಲ 12 ಗಂಟೆ ಮಾತ್ರ ವಿಚಾರಣೆ ನಡೆಸಲಾಗಿದ್ದು, ಆರೋಪಿ ಪ್ರಶ್ನೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಹೆಚ್ಚಿನ ವಿಚಾರಣೆ ಹಿನ್ನೆಲೆ 14 ದಿನ ತಮ್ಮ ಕಸ್ಟಡಿಗೆ ನೀಡಬೇಕೆಂದು ಎಸ್‍ಐಟಿ ಪರ ವಕೀಲರು ಮನವಿ ಮಾಡಿಕೊಂಡಿದ್ದರು.

  ಪೊಲೀಸರಿಗೆ ಸಿಕ್ಕಿದೆ ಸಿಸಿಟಿವಿ ಬ್ರಹ್ಮಾಸ್ತ್ರ

  ಅಕ್ಟೋಬರ್ 3ರಂದು ಲಖೀಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಜೀಪ್ ಹತ್ತಿಸಲಾಗಿತ್ತು. ಕ್ಷಣಾರ್ಧದಲ್ಲೇ ಪ್ರತಿಭಟನೆ ಹಿಂಸೆಯ ರೂಪ ಪಡೆದುಕೊಂಡಿತ್ತು. ಉದ್ರಿಕ್ತ ಪ್ರತಿಭಟನಾಕಾರರು ಜೀಪ್ ಚಾಲಕನನ್ನು ಕೋಲುಗಳಿಂದ ಹೊಡೆದು ಕೊಂದಿದ್ದರು. ಘಟನೆಯಲ್ಲಿ ಮೂವರು ರೈತರು ಸೇರಿಂತೆ ಏಳು ಜನರು ಸಾವನ್ನಪ್ಪಿದ್ದರು. ಕೇಂದ್ರ ಸಚಿವರಿಗೆ ಕಪ್ಪು ಧ್ವಜ ಪ್ರದರ್ಶಿಸಿದ್ದಕ್ಕೆ ರೈತರ ಮೇಲೆ ವಾಹನ ಚಲಾಯಿಸಲಾಗಿದೆ. ವಾಹನದಲ್ಲಿ ಆಶಿಶ್ ಮಿಶ್ರಾ ಇದ್ದರು. ಘಟನೆ ಬಳಿಕ ಪೊಲೀಸರು ಆಶಿಶ್ ಮಿಶ್ರಾವರನ್ನ ರಕ್ಷಿಸಿ ಕರೆದುಕೊಂಡು ಹೋದರು ಎಂಬ ಆರೋಪಗಳನ್ನು ಮಾಡಿದ್ದರು. ಆದ್ರೆ ಸಚಿವರು ಮಾತ್ರ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದರು.

  ಇದನ್ನೂ ಓದಿ: Lakhimpur Kheri Violence- ಕೇಂದ್ರ ಸಚಿವರ ಮಗ ಆಶಿಶ್ 3 ದಿನ ಪೊಲೀಸ್ ಕಸ್ಟಡಿಗೆ

  ಕೇಂದ್ರ ಸಚಿವ ಅಜಯ್ ಮಿಶ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಆಶಿಶ್ ಮಿಶ್ರಾ ಬಂಧನವಾಗಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದಾರೆ. ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಸಿ ಸಚಿವರ ಮನೆಗೆ ನೋಟಿಸ್ ಅಂಟಿಸಿತ್ತು. ಆದ್ರೆ ಶುಕ್ರವಾರ ಗೈರಾಗಿದ್ದ ಆಶಿಶ್ ಮಿಶ್ರಾ ಶನಿವಾರ ಪೊಲೀಸರ ಮುಂದೆ ಹಾಜರಾಗಿದ್ದ ವೇಳೆ ಬಂಧಿಸಲಾಗಿತ್ತು. ಪೊಲೀಸರಿಗೆ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆಶಿಶ್ ಮಿಶ್ರಾ ಇದ್ದಾರೆ ಎನ್ನಲಾಗಿದೆ.

  ಬಿಳಿ ಶರ್ಟ್ ಧರಿಸಿರುವ 'ಆ' ವ್ಯಕ್ತಿ?

  ಪೊಲೀಸರು ಹಿಂಸಾಚಾರ ನಡೆದ ಘಟನಾ ಸ್ಥಳದ ಮಾರ್ಗದ ಮಧ್ಯೆದಲ್ಲಿರುವ ಕೆಲ ಅಂಗಡಿಗಳ ಮುಂಭಾಗದ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಆಶಿಶ್ ಮಿಶ್ರಾ ಇರೋ ದೃಶ್ಯಗಳು ಸೆರೆಯಾಗಿವೆ ಎಂದು ವರದಿಯಾಗಿದೆ. ಚಾಲಕನ ಸಮೀಪದಲ್ಲಿ ಬಿಳಿ ಶರ್ಟ್ ಧರಿಸಿರುವ ವ್ಯಕ್ತಿಯನ್ನು ಆಶಿಶ್ ಮಿಶ್ರಾ ಎಂದು ಹೇಳಲಾಗುತ್ತಿದೆ. ಆದ್ರೆ ಈ ಸಂಬಂಧ ಯಾವುದೇ ವಿಡಿಯೋಗಳನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಈ ಮೊದಲು ರೈತರ ಮೇಲೆ ಜೀಪ್ ಹತ್ತಿಸುತ್ತಿರುವ, ಚಾಲಕನನ್ನು ಥಳಿಸುತ್ತಿರುವ ಮತ್ತು ಜೀಪ್ ನಿಂದ ಓರ್ವ ಓಡಿ ಹೋಗುತ್ತಿರುವ ವಿಡಿಯೋ ತುಣುಕುಗಳು ವೈರಲ್ ಆಗಿದ್ದವು.

  ರೈತರಿಗೆ ಬದುಕುವ ಹಕ್ಕಿಲ್ಲವೇ?

  ಲಖೀಂಪುರ ಹಿಂಸಾಚಾರ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ಸರ್ಕಾರ ರೈತರನ್ನು ಎಷ್ಟು ಹತ್ಯೆ ಮಾಡುತ್ತಿದೆ? ಅವರಿಗೂ ಬದುಕುವ ಹಕ್ಕು ಸಹ ಇಲ್ಲವೇ? ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ರೆ ಗುಂಡು ಹೊಡಿತೀರಾ? ವಾಹನ ಹತ್ತಿಸಿ ಅವರನ್ನ ತುಳಿಯುತ್ತೀರಾ? ಇದು ರೈತರ ದೇಶ. ಬಿಜೆಪಿಯ ಕ್ರೂರ ಸಿದ್ಧಾಂತ ನಕಲಿಯಲ್ಲ. ರೈತರ ಧ್ವನಿಗೆ ತಾಕತ್ತು ನೀಡುವ ಮೂಲಕ ಕಿಸಾನ್ ಸತ್ಯಾಗ್ರಹವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದರು.

  ವರದಿ: ಮೊಹ್ಮದ್​ ರಫೀಕ್​ ಕೆ 
  Published by:Kavya V
  First published: