Lakhimpur Kheri Violence Video: ಅಜಯ್ ಮಿಶ್ರಾ ಪುತ್ರ ಓಡಿ ಹೋದ ಎನ್ನಲಾದ ವಿಡಿಯೋ ವೈರಲ್; ಇಲ್ಲಿದೆ ಸತ್ಯ

ಕೆಲ ಪ್ರತ್ಯಕ್ಷದರ್ಶಿಗಳು ಎನ್ನಲಾದ ಕೆಲವರು ಘಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಸಚಿವರ ಪುತ್ರ ವಾಹನದಿಂದ ಇಳಿದು ಓಡಿ ಹೋದರು. ಪೊಲೀಸರು ಸಚಿವರ ಮಗನನ್ನ ಸುರಕ್ಷವಾಗಿ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು ಎಂದು ಹೇಳಿದ್ದಾರೆ.

ಸಚಿವರ ಮಗ ಮತ್ತು ವಿಡಿಯೋ ದೃಶ್ಯ

ಸಚಿವರ ಮಗ ಮತ್ತು ವಿಡಿಯೋ ದೃಶ್ಯ

 • Share this:
  ಲಕ್ನೋ (ಸೆ. 5): ಉತ್ತರ ಪ್ರದೇಶದ ಲಖೀಂಪುರ ಖೇರಿಯ ಹಿಂಸಾಚಾರದ ವಿಡಿಯೋಗಳು ( Lakhimpur Kheri Violence Video) ವೈರಲ್ ಆಗುತ್ತಿವೆ. ಇಂದು ಬೆಳಗ್ಗೆ ಎರಡು ವಿಡಿಯೋಗಳು ವೈರಲ್ ಆಗಿದ್ದವು. ಒಂದು ರೈತರ ಮೇಲೆ ವಾಹನ ಚಲಾಯಿಸುತ್ತಿರೋದು, ಮತ್ತೊಂದು ಓರ್ವ ವ್ಯಕ್ತಿ ಜೀಪ್ ನಿಂದ ಓಡಿ ಹೋಗುತ್ತಿರುವ ದೃಶ್ಯ. ಎರಡನೇ ವಿಡಿಯೋದಲ್ಲಿ ಓಡಿ ಹೋಗುತ್ತಿರುವ ವ್ಯಕ್ತಿಯೇ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ (Union Minister of State (MoS) for Home Ajay Mishra's son) ಎಂದು ಹೇಳಿ ವೈರಲ್ ಮಾಡಲಾಗುತ್ತಿದೆ. ಆದ್ರೆ ಓಡಿ ಹೋಗುತ್ತಿರುವ ವ್ಯಕ್ತಿ ಆಶೀಶ್ ಮಿಶ್ರಾ ಅಲ್ಲವೆಂದು ಸ್ಥಳೀಯ ಪತ್ರಿಕೆಯೊಂದು ಸ್ಪಷ್ಟಪಡಿಸಿದೆ. ಸಚಿವರು ಸಹ ಘಟನೆ ನಡೆದ ವೇಳೆ ಪುತ್ರ ಅಲ್ಲಿರಲಿಲ್ಲ ಎಂದು ಹೇಳುತ್ತಿದ್ದಾರೆ. ಇತ್ತ ರೈತರ ಮೇಲೆ ಚಲಾಯಿಸಿದ ವಾಹನದಲ್ಲಿ ಸಚಿವರ ಪುತ್ರ ಇದ್ದರೆಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಪ್ರಕರಣ ಸಹ ದಾಖಲು ಮಾಡಲಾಗಿದೆ.

  ವಿಡಿಯೋದಲ್ಲಿ ಓಡಿ ಹೋಗಿದ್ಯಾರು?:
  ಕೆಲ ಪ್ರತ್ಯಕ್ಷದರ್ಶಿಗಳು ಎನ್ನಲಾದ ಕೆಲವರು ಘಟನೆ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಸಚಿವರ ಪುತ್ರ ವಾಹನದಿಂದ ಇಳಿದು ಓಡಿ ಹೋದರು. ಪೊಲೀಸರು ಸಚಿವರ ಮಗನನ್ನ ಸುರಕ್ಷವಾಗಿ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು ಎಂದು ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಓಡಿ ಹೋದ ವ್ಯಕ್ತಿ ಮತ್ತು ಸಚಿವರ ಪುತ್ರನನ್ನು ಹೋಲಿಕೆ ಮಾಡಿದ್ರೆ ಇಬ್ಬರು ಬೇರೆ ಬೇರೆ ಅನ್ನೋದು ತಿಳಿಯುತ್ತದೆ. ಎರಡು ಸೆಕೆಂಡ್ ನ ವಿಡಿಯೋದಲ್ಲಿ ನೀಲಿ ಬಣ್ಣದ ಕುರ್ತಾ ಮತ್ತು ಬಿಳಿ ಬಣ್ಣದ ಪೈಜಾಮಾ ಧರಿಸಿರುವ ಓರ್ವ ಜೀಪ್ ನಿಂದ ಇಳಿದು ಹೋಗುತ್ತಿರೋದನ್ನು ಕಾಣಬಹುದಾಗಿದೆ.

  ಆಶಿಶ್ ಮಿಶ್ರಾ (Ashish Mishra) ನಾರ್ಮಲ್ ಎತ್ತರ ಹೊಂದಿದ್ದು, ಸ್ವಲ್ಪ ದಪ್ಪವಾಗಿದ್ದಾರೆ. ಆದ್ರೆ ವಿಡಿಯೋದಲ್ಲಿರೋದು ನೀಳ ಕಾಯದ ಎತ್ತರದ ವ್ಯಕ್ತಿ. ಈ ವ್ಯಕ್ತಿ ಸುಮಾರು 5 ಅಡಿ 10 ಇಂಚು ಎತ್ತರ ಇದ್ದಾರೆ. ಸ್ಥಳೀಯರೇ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಸುಮಿತ್ ಜೈಸ್ವಾಲ್ ಎಂದು ಗುರುತಿಸಿದ್ದಾರೆ.

  ಇದನ್ನು ಓದಿ: 30 ಗಂಟೆಗಳ ಗೃಹಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಅರೆಸ್ಟ್

  ಯಾರು ಈ ಸುಮಿತ್ ಜೈಸ್ವಾಲ್?:
  ಸುಮಂತ್ ಜೈಸ್ವಾಲ್ (Sumit Jaiswal) ಸ್ಥಳೀಯ ಬಿಜೆಪಿ ಕಾರ್ಯಕರ್ತ. ಲಖೀಂಪುರ ನಗರ ಪಾಲಿಕೆಯ ಶಿವಪುರಿ ವಾರ್ಡ್ (Shivpuri ward in the Nagar Palika Parishad Lakhimpur. ಸದಸ್ಯ. ಲಖೀಂಪುರ ವ್ಯಾಪ್ತಿಯಲ್ಲಿ ನಡೆಯುವ ಬಿಜೆಪಿ ಕಾರ್ಯಕ್ರಮಗಳಲ್ಲಿ ಆಶೀಶ್ ಮಿಶ್ರಾ ಜೊತೆ ಸುಮಿತ್ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಇಬ್ಬರು ಜೊತೆಯಾಗಿರುವ ಕೆಲ ಫೋಟೋಗಳು ವೈರಲ್ ಆಗಿವೆ. ಸಚಿವ ಅಜಯ್ ಮಿಶ್ರಾ ಅವರ ಸ್ವಗ್ರಾಂ ಬನ್‍ಬಿರ್ಪುರ (Banbirpur)ನಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಸುಮಿತ್ ಸಹ ತೆರಳಿದ್ದರು. ಕಾರ್ಯಕ್ರಮಕ್ಕೆ ತೆರಳುವ ಮಾರ್ಗಮಧ್ಯೆಯೇ ಈ ಹಿಂಸಾಚಾರ ನಡೆದಿದೆ. ಘಟನೆ ಬಳಿಕ ಸುಮಿತ್ ಜೈಸ್ವಾಲ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

  ಇದನ್ನು ಓದಿ: ಅಣ್ಣ ಬಿಟ್ಟುಬಿಡಿ, ತಮ್ಮಂದಿರಾ ಹೊಡೀಬೇಡಿ… ಕರಗದ ಪ್ರತಿಭಟನಾಕಾರರ ಹೃದಯ

  ಅಜಯ್ ಮಿಶ್ರಾ ಹೇಳಿದ್ದೇನು?
  ಹಿಂಸಾಚಾರ ನಡೆದ ಸ್ಥಳದಲ್ಲಿ ಪುತ್ರ ಆಶೀಶ್ ಇರಲಿಲ್ಲ. ನಮ್ಮ ಚಾಲಕನನ್ನು ಕೋಲುಗಳಿಂದು ಹೊಡೆದು ಕೊಲೆ ಮಾಡಲಾಗಿದೆ. ಒಂದು ವೇಳೆ ಪುತ್ರ ಅಲ್ಲಿದ್ದಿದ್ದರೆ ಆತನನ್ನು ಬಿಡುತ್ತಿರುಲಿಲ್ಲ. ಇದೊಂದು ಪೂರ್ವಯೋಜಿತ ಘಟನೆ. ಯಾರಾದ್ರೂ ನಮ್ಮ ಮೇಲೆ ಮಾಡುತ್ತಿರುವ ಆರೋಪಗಳನ್ನು ಸಾಬೀತು ಮಾಡಿದ್ರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

  -ಮಹ್ಮದ್ ರಫೀಕ್​​ ಕೆ
  Published by:Seema R
  First published: