Lakhimpur Kheri Violence: ಇಂದು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಲಖಿಂಪುರ ಖೇರಿಗೆ ಭೇಟಿ

ನಿಯೋಗದಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಕೂಡ ಇರಬೇಕಿತ್ತು. ಆದರೆ ಅವರನ್ನು ಉತ್ತರ ಪ್ರದೇಶದ ಪೊಲೀಸರು ಗೃಹ ಬಂಧನದಲ್ಲಿ ಇರಿಸಿರುವುದರಿಂದ ಅವರ ಬದಲಿಗೆ ಕೆ.ಸಿ. ವೇಣುಗೋಪಾಲ್ ತೆರಳುತ್ತಿದ್ದಾರೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

  • Share this:
ನವದೆಹಲಿ(ಅ. 6): ಪ್ರತಿಭಟನೆ ಮಾಡುತ್ತಿದ್ದ ರೈತರ ಮಾರಣಹೋಮ ನಡೆದಿರುವ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ (Lakhimpur Kheri Violence ) ಇಂದು ಕಾಂಗ್ರೆಸ್ ನಿಯೋಗ (Congress Delegation) ಭೇಟಿ ನೀಡಲಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (AICC Former President Rahul Gandhi) ನೇತೃತ್ವದ ಐವರ ನಿಯೋಗ ಲಖಿಂಪುರ ಖೇರಿಗೆ ಭೇಟಿ ಕೊಡಲಿದೆ. ನಿಯೋಗದಲ್ಲಿ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chief Minister Bhupesh Baghel), ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (Chief Minister Charanjith Singh Channi), ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ (Rajasthan Deputy Chief Minister Sachin Pilot) ಹಾಗೂ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (AICC organization General Secretary K.C. Venugopal) ಇರಲಿದ್ದಾರೆ.

ನಿಯೋಗದಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Uttar Pradesh Congress In Charge and AICC General Secretary Priyanka Gandhi Vadra) ಕೂಡ ಇರಬೇಕಿತ್ತು. ಆದರೆ ಅವರನ್ನು ಉತ್ತರ ಪ್ರದೇಶದ ಪೊಲೀಸರು (Uttar Pradesh Police) ಗೃಹ ಬಂಧನದಲ್ಲಿ (House Arrest) ಇರಿಸಿರುವುದರಿಂದ ಅವರ ಬದಲಿಗೆ ಕೆ.ಸಿ. ವೇಣುಗೋಪಾಲ್ ತೆರಳುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ. ನಿಯೋಗವು ಮಧ್ಯಾಹ್ನ 12.30ಕ್ಕೆ ಲಕ್ನೋ ವಿಮಾನ ನಿಲ್ದಾಣ (Lucknow Airport) ತಲುಪಲಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ಲಖಿಂಪುರ ಖೇರಿಗೆ ತೆರಳಲಿದೆ. ಲಖಿಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ‌ ಹೇಳಲಿದೆ.

ಮೊನ್ನೆ ಲಖಿಂಪುರ ಖೇರಿಗೆ ತೆರಳಲು ಲಕ್ನೋಗೆ ಆಗಮಿಸಿದ್ದ ಛತ್ತೀಸಗಢ ಸಿಎಂ ಭೂಪೇಶ್ ಬಾಘೇಲ್ ಅವರನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿ ತಡೆದಿದ್ದರು. ಪೊಲೀಸರ ನಡೆ ಖಂಡಿಸಿ ಸಿಎಂ ಭೂಪೇಶ್ ಬಾಘೇಲ್ ವಿಮಾನ ನಿಲ್ದಾಣದಲ್ಲಿಯೇ ಕುಳಿತು ಧರಣಿ ನಡೆಸಿದ್ದರು. ಇದಲ್ಲದೆ ಪಂಜಾಬ್ ಕಾಂಗ್ರೆಸ್ ನಿಯೋಗಕ್ಕೂ (Punjab Congress Delegation) ಉತ್ತರ ಪ್ರದೇಶ ಪೊಲೀಸರು ಲಖಿಂಪುರ ಖೇರಿಗೆ ತೆರಳಲು ನಿರ್ಬಂಧಿಸಿದ್ದರು.

ಇದನ್ನೂ ಓದಿ:Lakhimpur Kheri Violence: ಹಿಂಸಾಚಾರದ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಪ್ರಿಯಾಂಕಾ ಗಾಂಧಿ ಬಂಧನ; ಕಾಂಗ್ರೆಸ್​ ಕಿಡಿ

ಘಟನೆ ನಡೆದ ಜಾಗಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಬಳಿಕ ಐವರು ಮಂದಿ ಮಾತ್ರ ಲಖೀಂಪುರ್ ಖೇರಿಗೆ ಭೇಟಿ ನೀಡಬಹುದು ಎಂದು ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದೆ. ಹಾಗಾಗಿ ರಾಹುಲ್ ಗಾಂಧಿ ನೇತೃತ್ವದ ಐವರು ಮಂದಿಯ ನಿಯೋಗ ಮಾತ್ರ ಲಖೀಂಪುರ್ ಖೇರಿಗೆ ತೆರಳಿ ಮೃತ ರೈತರ ಕುಟುಂಬಗಳನ್ನು ಭೇಟಿಯಾಗಲಿದೆ.

ಪ್ರಿಯಾಂಕಾ ಗಾಂಧಿಗೆ ವಕೀಲರ ಭೇಟಿಗೂ ಅವಕಾಶ ನಿರಾಕರಣೆ

ಪಿಸಿ ಗೆಸ್ಟ್ ಹೌಸ್ ನಲ್ಲಿ ಗೃಹ ಬಂಧನದಲ್ಲಿ ಇರಿಸಲ್ಪಟ್ಟಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಉತ್ತರ ಪ್ರದೇಶದ ಪೊಲೀಸರು ವಕೀಲರ ಭೇಟಿಗೂ ಅವಕಾಶ ಮಾಡಿಕೊಡುತ್ತಿಲ್ಲ. ಈ ಬಗ್ಗೆ ಮಂಗಳವಾರ ಸಂಜೆ ಫೋನ್ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ‌ ಅವರು, 'ಲಖೀಂಪುರ್ ಖೇರಿ ಹಿಂಸಾಚಾರದ ರೂವಾರಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ (Union Home Minister (MoS) Ajay Mishra) ಮತ್ತು ಅವರ ಪುತ್ರ ಆಶೀಶ್ ಮಿಶ್ರಾ ಬಂಧನ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನನ್ನನ್ನು ಇಲ್ಲಿರಿಸಿ 38 ಗಂಟೆ ಕಳೆದ್ರೂ ಎಫ್‍ಐಆರ್ (FIR) ಕಾಪಿ ನೀಡುತ್ತಿಲ್ಲ ಏಕೆ? ವಕೀಲರನ್ನು ಸಂಪರ್ಕಿಸಲು ಪೊಲೀಸರು ಅವಕಾಶ ನೀಡುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

'ರೈತರಿಗಾಗಿ ನೀವೆಲ್ಲರೂ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದೀರಿ. ರೈತರೇ ಭೂಮಿಯ ದೇವರು. ರೈತರು ಭೂಮಿಗೆ ರಕ್ತ ಹರಿಸಿ ಬೆಳೆ ಬೆಳೆಯುತ್ತಾರೆ. ಇಂದೂ ರೈತರ ಮಕ್ಕಳು ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಸರ್ಕಾರ ಜನರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ರೈತರನ್ನು ಭೇಟಿಯಾಗಲು ಹೊರಟ ಒಬ್ಬ ಮಹಿಳೆಯನ್ನು ಬಿಜೆಪಿ ಸರ್ಕಾರ ತಡೆದು ನಿಲ್ಲಿಸಿದೆ. ಸ್ವತಂತ್ರ ದಿನಾಚರಣೆಯ ಅಮೃತಮಹೋತ್ಸವ ಆಚರಣೆಗಾಗಿ ಲಕ್ನೋಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ರೈತರ ಕಣ್ಣೀರು ಒರೆಸಲು ಬರಲಿಲ್ಲ ಏಕೆ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಗೆಸ್ಟ್ ಹೌಸ್ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಪ್ರಿಯಾಂಕಾ ಗಾಂಧಿ ಅವರನ್ನು ಇರಿಸಲಾಗಿರುವ ಗೆಸ್ಟ್ ಹೌಸ್ ತಾತ್ಕಾಲಿಕ ಜೈಲಿನ ರೀತಿ ಬದಲಾಗಿದೆ. ಅಲ್ಲಿಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇತ್ತ ಗೆಸ್ಟ್ ಹೌಸ್ ಮುಂಭಾಗ ಜಮಾಯಿಸಿರುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಅಲ್ಲಿಯೇ ಅಡುಗೆ ಮಾಡಲು ಸಿದ್ಧತೆ ನಡೆಸುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಲಖಿಂಪುರ ಖೇರಿ ಹಿಂಸಾಚಾರದ ಕುರಿತು ಇಂದು ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಸನ್ನಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amith Sha) ಅವರನ್ನು ಭೇಟಿಯಾಗಲಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, ಪಂಜಾಬ್ ನಿಂದ ಲಖಿಂಪುರ ಖೇರಿ ಅವರಿಗೆ ಪಾದಯಾತ್ರೆ ಮಾಡುವೆ ಎಚ್ಚರಿಕೆ ನೀಡಿದ್ದಾರೆ.‌ ಮಾಜಿ ಕೇಂದ್ರ ಸಚಿವ ಪಿ .ಚಿದಂಬರಂ (P. Chidambarm), ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar), ಶಿವಸೇನೆ ಸಂಸದ ವಕ್ತಾರ ಸಂಜಯ್ ರಾವತ್ (Sanjay Rawath),  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಮತ್ತಿತರರು ಘಟನೆಗೆ ಕಾರಣವಾದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Published by:Latha CG
First published: