Lakhimpur Kheri Violence: 30 ಗಂಟೆಗಳ ಗೃಹಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಅರೆಸ್ಟ್

ಲಖೀಂಪುರ ಖೇರಿಯ ವಿಡಿಯೋ ನೋಡಿ. ಇದರಲ್ಲಿ ನಿಮ್ಮ ಸಂಪುಟದ ಸಚಿವರ ಪುತ್ರ ರೈತರ ಮೇಲೆ ವಾಹನ ಚಲಾಯಿಸಿದ್ದಾರೆ. ಮಂತ್ರಿ ಹಾಗೂ ಪುತ್ರನ ಬಂಧನ ಆಗಿಲ್ಲವೇಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಿಯಾಂಕಾಂ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ

 • Share this:
  ಲಕ್ನೋ: ಲಖೀಂಪುರ ಖೇರಿ ಹಿಂಸಾಚಾರ ನಡೆದ ಸ್ಥಳಕ್ಕೆ ಹೊರಟಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದರು. ಇದೀಗ 30 ಗಂಟೆ ಬಳಿಕ ಸೆಕ್ಷನ್ 144 ಉಲ್ಲಂಘನೆ (ಶಾಂತಿ ಕದಡುವ ಯತ್ನ) ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಿಯಾಂಕಾ ಗಾಂಧಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಭಾನುವಾರ ಲಖೀಂಪುರ ಖೇರಿಯ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದುಕೊಂಡಿತ್ತು. ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸಾವನ್ನಪ್ಪಿದ್ದರು.

  ಬೆಳಗ್ಗೆ ವಿಡಿಯೋ ಸಂದೇಶ

  ಪೊಲೀಸರು ತಮ್ಮನ್ನು ಇರಿಸಿರುವ ಪಿಸಿ ಗೆಸ್ಟ್ ಹೌಸ್ ನಿಂದ ಪ್ರಿಯಾಂಕಾ ಗಾಂಧಿ ವಿಡಿಯೋ ಮೂಲಕ ಸಂದೇಶ ನೀಡಿದ್ದರು. ಪ್ರತಿಭಟನಾಕಾರರ ಮೇಲೆ ವಾಹನ ಚಲಾಯಿಸುತ್ತಿರುವ ವೈರಲ್ ವಿಡಿಯೋ ತೋರಿಸುತ್ತಾ, ಒಮ್ಮೆ ಈ ದೃಶ್ಯಗಳನ್ನು ಗಮನಿಸಿ. ಆ ಮಂತ್ರಿಯನ್ನು ರಾಜೀನಾಮೆ ಏಕೆ ಪಡೆದುಕೊಂಡಿಲ್ಲ ಎಂದು ದೇಶದ ಜನರಿಗೆ ತಿಳಿಸಿ. ಇನ್ನೂ ಈ ಹುಡುಗನನ್ನು ಇದುವರೆಗೂ ಯಾಕೆ ಬಂಧಿಸಿಲ್ಲ. ಯಾವುದೇ ಆದೇಶ, ಎಫ್‍ಐಆರ್ ಇಲ್ಲದೇ ವಿಪಕ್ಷ ನಾಯಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದ್ದರು.

  ಪಿಎಂ ಮೋದಿಗೆ ಪ್ರಿಯಾಂಕಾ ಪ್ರಶ್ನೆ

  ನೀವು ಸ್ವತಂತ್ರ ದಿನಾಚರಣೆಯ ಅಮೃತಮಹೋತ್ಸವ ಆಚರಿಸಲು ಲಕ್ನೋಗೆ ಬಂದಿದ್ದೀರಿ. ನೀವು ಲಖೀಂಪುರ ಖೇರಿಯ ವಿಡಿಯೋ ನೋಡಿ. ಇದರಲ್ಲಿ ನಿಮ್ಮ ಸಂಪುಟದ ಸಚಿವರ ಪುತ್ರ ರೈತರ ಮೇಲೆ ವಾಹನ ಚಲಾಯಿಸಿದ್ದಾರೆ. ಮಂತ್ರಿ ಹಾಗೂ ಪುತ್ರನ ಬಂಧನ ಆಗಿಲ್ಲವೇಕೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ಪ್ರಿಯಾಂಕಾಂ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಸೋಮವಾರ ಗೆಸ್ಟ್ ಹೌಸ್ ಕೊಠಡಿಯಲ್ಲಿ ಪ್ರಿಯಾಂಕಾ ಗಾಂಧಿ ಕಸ ಗುಡಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ತದನಂತರ ಈ ಉಪವಾಸ ಅನ್ನದಾತರ ಹಕ್ಕು ಮತ್ತು ಸಂವಿಧಾನದ ರಕ್ಷಣೆಗಾಗಿ. ಬಿಜೆಪಿ ಸರ್ಕಾರ  ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಹಕ್ಕುಗಳ ಹೋರಾಟ ಮಹಾತ್ಮ ಗಾಂಧೀಜಿ ಅವರ ಮಾರ್ಗದಲ್ಲಿ ಮುಂದುವರಿಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

  ಇದನ್ನೂ ಓದಿ: Lakhimpur Violence| ಪ್ರತಿಪಕ್ಷ ನಾಯಕರು ಅರೆಸ್ಟ್​, ರೈತ ಮುಖಂಡರ ಮೂಲಕ ಮಾತುಕತೆ; 24 ಗಂಟೆಯಲ್ಲಿ ನಿಯಂತ್ರಣಕ್ಕೆ ಬಂದ ಲಖೀಂಪುರ್ ಗಲಭೆ!

  ಪ್ರಿಯಾಂಕಾ ಗಾಂಧಿ ಅವರ ಬಂಧನ ಖಂಡಿಸಿ ದೇಶದ್ಯಾಂತ ಕಾಂಗ್ರೆಸ್ ಕಾರ್ಯಕರ್ತರಯ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ಸೀತಾಪುರಕ್ಕೆ ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ತೆರಳುತ್ತಿದ್ದರು. ಆದ್ರೆ ಪೊಲೀಸರು ಮುಖ್ಯಮಂತ್ರಿಗಳನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿಯೇ ತಡೆದಿದ್ದಾರೆ.

  ಅಜಯ್ ಮಿಶ್ರಾ ಸ್ಪಷ್ಟನೆ

  ಘಟನೆ ನಡೆದ ವೇಳೆ ನನ್ನ ಪುತ್ರ ಆಶೀಶ್ ಮಿಶ್ರಾ ಅಲ್ಲಿ ಇರಲೇ ಇಲ್ಲ. ಪ್ರತಿಭಟನಾಕಾರ ಗುಂಪಿನಲ್ಲಿ ಕೆಲ ಸಮಾಜ ವಿರೋಧಿಗಳು ಶಾಮೀಲು ಆಗಿದ್ದರು. ಪ್ರತಿಭಟನಾಕಾರು ಕಲ್ಲು ತೂರಾಟ ನಡೆಸಿ ವಾಹನಗಳನ್ನು ಪಲ್ಟಿ ಮಾಡಿದರು. ಈ ವೇಳೆ ವಾಹನಗಳ ಕೆಳಗೆ ಸಿಲುಕಿ ರೈತರಿಬ್ಬರು ಸಿಲುಕಿ ಸಾವನ್ನ ಪ್ಪಿದ್ದಾರೆ. ಇಡೀ ಘಟನೆ ಪಕ್ಕಾ ಪೂರ್ವನಿಯೋಜಿತವಾಗಿತ್ತು. ಗಲಾಟೆ ಸೃಷ್ಟಿಸುವ ಉದ್ದೇಶದಿಂದಲೇ ಕೆಲವರು ಗುಂಪಿನಲ್ಲಿ ಸೇರಿಕೊಂಡಿದ್ದರು ಎಂದು ಅಜಯ್ ಮಿಶ್ರಾ ಆರೋಪಿಸಿದ್ದಾರೆ.

  ಎಫ್‍ಐಆರ್ ದಾಖಲು

  ಭಾನುವಾರ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಕೊಲೆ ಪ್ರಕರಣ ದಾಖಲಾಗಿದೆ. ಪ್ರತಿಭಟನಾಕಾರರ ಮೇಲೆ ಆಶೀಶ್ ಮಿಶ್ರಾನೇ ವಾಹನ ಚಲಾಯಿಸಿರುವ ಆರೋಪಗಳು ಕೇಳಿ ಬಂದಿವೆ. ಪ್ರಕರಣದ ಕುರಿತು ಮಾಹಿತಿ ನೀಡಿರುವ ಐಜಿ ಶ್ರೇಣಿಯ ಲಕ್ಷ್ಮಿ ಸಿಂಗ್, ದೂರಿನ ಆಧಾರದ ಮೇಲೆ ಆಶೀಶ್ ಮಿಶ್ರಾ ಸೇರಿದಂತೆ 15-20 ಅಪರಿಚಿತರ ವಿರುದ್ಧ ಸೆಕ್ಷನ್ 1417, 148, 149, 302, 130ಬಿ ಮತ್ತು 304ಎ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

  ವರದಿ: ಮಹ್ಮದ್​​ ರಫೀಕ್​ ಕೆ 
  Published by:Kavya V
  First published: