Lakhimpur Kheri Violence: ಸಚಿವರ ಮಗ ಮಿಶ್ರಾನನ್ನು ವಿಚಾರಣೆಗೆ ಕರೆಸಿಕೊಂಡ ಪೊಲೀಸರು; ಪಂಜಾಬ್ ಗಡಿಯಲ್ಲಿ ಸಿಧು ಬಂಧನ

ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ರಾಜಕಾರಣಿಗಳು ಲಖಿಂಪುರ್ ಖೇರಿ ಪ್ರವೇಶಕ್ಕೆ ಈ ಮೊದಲು ಸರ್ಕಾರ ನಿರ್ಬಂಧ ವಿಧಿಸಿತ್ತು. ಮೂರು ದಿನ ಕಳೆದ ಬಳಿಕ ಮೃತ ನಾಲ್ವರು ರೈತರ ಅಂತ್ಯ ಸಂಸ್ಕಾರ ನೆರವೇರಿದ ಬಳಿಕ  ನೊಂದ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ರಾಜಕಾರಣಿಗಳಿಗೆ ಅನುಮತಿ ನೀಡಲಾಗಿದೆ.

ಉತ್ತರಪ್ರದೇಶ ಗಡಿಯಲ್ಲಿ ನವಜೋತ್ ಸಿಂಗ್ ಸಿಧುನನ್ನು ವಶಕ್ಕೆ ಪಡೆದ ಪೊಲೀಸರು.

ಉತ್ತರಪ್ರದೇಶ ಗಡಿಯಲ್ಲಿ ನವಜೋತ್ ಸಿಂಗ್ ಸಿಧುನನ್ನು ವಶಕ್ಕೆ ಪಡೆದ ಪೊಲೀಸರು.

 • Share this:
  ಲಖಿಂಪುರ್ ಖೇರಿ ಘಟನೆಯಲ್ಲಿ (Lakhimpur Kheri Violence) ರೈತರ ಮೇಲೆ ವಾಹನ ಹರಿಸಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದ ಬಳಿಕ ಕೇಂದ್ರ ಸಚಿವರ ಮಗ ಆಶಿಶ್ ಮಿಶ್ರಾನನ್ನು (Union Minister Son Ashish Mishra) ವಿಚಾರಣೆಗೆ ಕರೆಸಿಕೊಳ್ಳಲಾಗಿದೆ ಎಂದು ಲಕ್ನೋ ಐಜಿ ಲಕ್ಷ್ಮಿ ಸಿಂಗ್ ಗುರುವಾರ ತಿಳಿಸಿದ್ದಾರೆ. ರೈತರ ಸಾವಿಗೆ ಸಂಬಂಧಿಸಿದಂತೆ ಕೇಂದ್ರ  ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಮಗನನ್ನು ಬಂಧಿಸುವಂತೆ ಒತ್ತಾಯಿಸಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidu) ಅವರನ್ನು ಹಾಗೂ ಇಬ್ಬರು ಪಂಜಾಬ್ ಸಚಿವರನ್ನು ಮತ್ತು ಕೆಲವು ಶಾಸಕರೊಂದಿಗೆ ಉತ್ತರಪ್ರದೇಶ ಗಡಿಯಲ್ಲಿರುವ ಶಹಜಹಾನ್ಪುರದಲ್ಲಿ ಬಂಧಿಸಲಾಗಿದೆ.

  ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾದ ಮೊದಲ ಮಾಹಿತಿ ವರದಿ (ಎಫ್‌ಐಆರ್) ಮತ್ತು ಬಂಧನಗಳ ಕುರಿತು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರದಿಂದ ವಸ್ತುಸ್ಥಿತಿ ವರದಿಯನ್ನು ಕೇಳಿದೆ. ಇದರಲ್ಲಿ ರೈತರು ಸೇರಿದಂತೆ ಎಂಟು ಜನರು ನಾಲ್ಕು ಚಕ್ರದ ವಾಹನದಲ್ಲಿ ಸಿಲುಕಿಕೊಂಡಿದ್ದಾರೆ. ಅಜಯ್ ಮಿಶ್ರಾ ತೇನಿ ಪುತ್ರನನ್ನು ಬಂಧಿಸದಿದ್ದರೆ ನಾಳೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಎಚ್ಚರಿಕೆ ನೀಡಿದ್ದಾರೆ. ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ (ನಿವೃತ್ತ) ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನು ಹಿಂಸಾಚಾರದ ಘಟನೆಯ ತನಿಖೆಗಾಗಿ ಲಖಿಂಪುರ್ ಖೇರಿಯ ಕೇಂದ್ರ ಕಚೇರಿಯೊಂದಿಗೆ ಏಕ ಸದಸ್ಯ ತನಿಖಾ ಆಯೋಗವಾಗಿ ನೇಮಿಸಲಾಗಿದೆ.

  ಲಖಿಂಪುರ್ ಖೇರಿ ಹಿಂಸಾಚಾರ ಘಟನೆಗೆ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಅಸಮಾಧಾನ ಹೊರಹಾಕಿದ್ದಾರೆ. ಅಹಂಕಾರ ಮತ್ತು ಕ್ರೌರ್ಯದ ಸಂದೇಶ ಪ್ರತಿಯೊಬ್ಬ ರೈತನ ಮನಸ್ಸನ್ನು ಪ್ರವೇಶಿಸುವ ಮೊದಲು ನ್ಯಾಯವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಎಂಟು ಜನರ ಸಾವಿನ ನಂತರ ಲಖಿಂಪುರ್ ಖೇರಿಗೆ ರಾಜಕೀಯ ನಾಯಕರು ಹೋಗಲು ಪ್ರಯತ್ನಿಸುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ರಾಜಕಾರಣಿಗಳು ಲಖಿಂಪುರ್ ಖೇರಿ ಪ್ರವೇಶಕ್ಕೆ ಈ ಮೊದಲು ಸರ್ಕಾರ ನಿರ್ಬಂಧ ವಿಧಿಸಿತ್ತು. ಮೂರು ದಿನ ಕಳೆದ ಬಳಿಕ ಮೃತ ನಾಲ್ವರು ರೈತರ ಅಂತ್ಯ ಸಂಸ್ಕಾರ ನೆರವೇರಿದ ಬಳಿಕ  ನೊಂದ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ರಾಜಕಾರಣಿಗಳಿಗೆ ಅನುಮತಿ ನೀಡಲಾಗಿದೆ.

  ಮೃತ ನಾಲ್ವರು ರೈತರನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಒಂದು ಮೃತದೇಹದ ಸಂಬಂಧಿಕರು ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆಸಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆ ಬಳಿಕ ದೆಹಲಿಯಿಂದ ತಜ್ಞ ವೈದ್ಯರನ್ನು ಕರೆಯಿಸಿ ಬಹ್ರೈಚ್​ನಲ್ಲಿ ಎರಡನೇ ಬಾರಿಗೆ ಒಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷಾ ವರದಿ ಬಗ್ಗೆ ಮಾತನಾಡಿದ ಲಖಿಂಪುರದ ಇನ್ಸ್‌ಪೆಕ್ಟರ್ ಜನರಲ್ ಲಕ್ಷ್ಮಿ ಸಿಂಗ್ ಅವರು ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ರೈತನ ಎರಡನೇ ಮರಣೋತ್ತರ ಪರೀಕ್ಷೆಯಲ್ಲಿಯೂ ಯಾವುದೇ ಬಂದೂಕು ಗಾಯ ಕಂಡುಬಂದಿಲ್ಲ ಎಂದು  ಹೇಳಿದ್ದಾರೆ.

  ಇದನ್ನು ಓದಿ: Lakhimpur Kheri Violence: ಯೋಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ನವಜೋತ್ ಸಿಂಗ್ ಸಿಧು

  ಸಚಿವರ ಮಗನನ್ನು ಏಕೆ ಬಂಧಿಸಿಲ್ಲ: ಸಿಧು ಪ್ರಶ್ನೆ

  ರೈತರ ಮೇಲೆ ಹಿಂದಿನಿಂದ ದಾಳಿ ನಡೆಸಿ ಕೊಲ್ಲಲಾಗಿದೆ. ಎಫ್‍ಐಆರ್ ದಾಖಲಾದ್ರೂ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ (Union Minister of State (MoS) for Home Ajay Mishra's son) ಪೊಲೀಸ್ ವಿಚಾರಣೆಗೆ ಹಾಜರಾಗಿಲ್ಲ ಏಕೆ? ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಏಕೆ ಎಂದು ಸಿಧು ಇದಕ್ಕೂ ಮುನ್ನ ಪ್ರಶ್ನೆ ಮಾಡಿದ್ದರು. ಕೇಂದ್ರ ಸಚಿವ ಮತ್ತು ಅವರ ಪುತ್ರ ಸಂವಿಧಾನಕ್ಕಿಂತ ದೊಡ್ಡವರೇನು ಎಂದು ಕಿಡಿಕಾರಿದರು. ಬಳಿಕ ಸಿಧು ನೇತೃತ್ವದ ತಂಡ ಉತ್ತರ ಪ್ರದೇಶ ಗಡಿಯತ್ತ ಹೊರಟಿತು. ಅಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು.
  Published by:HR Ramesh
  First published: