Lakhimpur Kheri Violence: ರೈತರ ಹತ್ಯಾಕಾಂಡದ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಪಟ್ಟು, ಕೇಂದ್ರ ಸರ್ಕಾರ ನಕಾರ

ಪ್ರಮುಖ ವಿಷಯಗಳ ಚರ್ಚೆಗೆ ಅವಕಾಶ ಕೊಡದ ಕೇಂದ್ರ ಸರ್ಕಾರದ ನಡೆಗಳಿಗೆ ಪ್ರತಿಯಾಗಿ ಏನು ಮಾಡಬೇಕೆಂದು ಪ್ರತಿಪಕ್ಷಗಳು ಚರ್ಚೆ ಮಾಡುತ್ತಿವೆ ಇಂದು ಕೂಡ ಚರ್ಚೆಗೆ ಅವಕಾಶ ಕೊಡದಿದ್ದರೆ ಪ್ರತಿಪಕ್ಷಗಳು ಜಂಟಿ ಸುದ್ದಿಗೋಷ್ಠಿ ಮತ್ತು ಸಂಸತ್ ಭವನದಿಂದ ವಿಜಯ್ ಚೌಕ್ ವರೆಗೆ ಮೆರವಣಿಗೆ ನಡೆಸಲಿವೆ.

ಸಂಸತ್

ಸಂಸತ್

  • Share this:
ನವದೆಹಲಿ, ಡಿ.‌ 21: ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ (Union Minister Ajay Mishra) ಅವರ ಪುತ್ರ ಆಶೀಶ್ ಮಿಶ್ರಾ ಅವರೇ ಹತ್ಯಾಕಾಂಡಕ್ಕೆ ಕಾರಣ ಎನ್ನಲಾಗುತ್ತಿರುವ ಉತ್ತರ ಪ್ರದೇಶದ (Uttar Pradesh) ಲಖಿಂಪುರ ಖೇರಿ ಪ್ರಕರಣದ (Lakhimpur Kheri Violence) ಬಗ್ಗೆ ಸಂಸತ್ತಿನ‌ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕೆಂದು ಕಾಂಗ್ರೆಸ್ (Congress) ನೇತೃತ್ವದಲ್ಲಿ ಪ್ರತಿಪಕ್ಷಗಳು ಮಾಡುತ್ತಿರುವ ಮನವಿಯನ್ನು ಕೇಂದ್ರ ಸರ್ಕಾರ (Union Government) ಪುರಸ್ಕರಿಸದ ಹಿನ್ನೆಲೆಯಲ್ಲಿ ಈಗಾಗಲೇ ಅಧಿವೇಶನದ ಅರ್ಧಕ್ಕಿಂತಲೂ ಹೆಚ್ಚು ಅವಧಿ ವ್ಯರ್ಥವಾಗಿದೆ. ಇಂದು ಮತ್ತೆ ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ಕೇಳಿವೆ. ಆಢಳಿತಾರೂಢ ಪಕ್ಷ ಚರ್ಚೆಗೆ ದೊಡ್ಡ ಮನಸ್ಸು ಮಾಡುವುದೇ ಇಲ್ಲವೇ ಎಂಬುದು ಇನ್ನಷ್ಟೇ ನಿರ್ಧಾರ ಆಗಬೇಕಿದೆ.

ಚರ್ಚೆ ಮಾಡಲು ಕೇಂದ್ರ ಸರ್ಕಾರ ನಕಾರ

ಲಖಿಂಪುರ ಖೇರಿಯಲ್ಲಿ ನಡೆದ ರೈತರ ಹತ್ಯಾಕಾಂಡಕ್ಕೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಮತ್ತು ಅವರ ಪುತ್ರ ಆಶೀಶ್ ಮಿಶ್ರಾ ಅವರೇ ಕಾರಣ. ಆಶಿಶ್ ಮಿಶ್ರಾ ಕಾರು ಹರಿಸಿದ ಪರಿಣಾಮದಿಂದಾಗಿಯೇ ರೈತರ ಸಾವು ಸಂಭವಿಸಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Congress Leader Rahul Gandhi) ಅವರು ಆರೋಪ ಮಾಡಿದ್ದರಲ್ಲದೆ. ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಕೂಡ ಆಗ್ರಹಿಸಿದ್ದರು. ಘಟನೆಯಲ್ಲಿ ಕೇಂದ್ರ ಸಚಿವರ ಪಾತ್ರ ಇರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ವಿಷಯ ಚರ್ಚೆ ಆಗಬೇಕು ಎಂದು ಸ್ಪೀಕರ್ ಓಂ ಬಿರ್ಲಾ  (Lokasabha Speaker Om Birla) ಅವರಿಗೆ ಮನವಿಯನ್ನೂ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ ಚರ್ಚೆಗೆ ಸುತಾರಾಂ ಸಿದ್ದವಿಲ್ಲ. ಇದರಿಂದ ಸದನ ಸರಿಯಾಗಿ ನಡೆಯುತ್ತಿಲ್ಲ. ಬಹುತೇಕ ಇಂದು ಕೂಡ ಅದೇ ರೀತಿ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Morning Digest: ಚಿನ್ನದ ಬೆಲೆಯಲ್ಲಿ ಇಳಿಕೆ, ಪೆಟ್ರೋಲ್​ ಬೆಲೆ ಸ್ಥಿರ, ಹೆಚ್ಚಾದ ಚಳಿ; ಬೆಳಗಿನ ಟಾಪ್​​ ನ್ಯೂಸ್​​ಗಳು

ಪ್ರತಿಪಕ್ಷಗಳ ಪ್ರತಿಭಟನೆ

ಲಖಿಂಪುರ ಖೇರಿ ರೈತರ ಹತ್ಯಾಕಾಂಡದ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ಕೋರಿಕಾಂಗ್ರೆಸ್ ಸಂಸದ ಮಾಣಿಕ್ ಟ್ಯಾಗೂರ್ ಇಂದು ಸ್ಪೀಕರ್ ಗೆ ಮನವಿ ಮಾಡಿದ್ದಾರೆ. ಹತ್ಯಾಕಾಂಡದಲ್ಲಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಪಾತ್ರದ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ (Adhir Ranjan Chowdhari) ಮತ್ತಿತರರು ಕೂಡ ಮನವಿ ಮಾಡಿದ್ದರು. ಹೀಗೆ ಪ್ರತಿಪಕ್ಷ ಪರಿಪರಿಯಾಗಿ ಬೇಡಿಕೊಂಡರೂ ಕೇಂದ ಸರ್ಕಾರ ಮಾತ್ರ ರೈತರ ಹತ್ಯಾಕಾಂಡದ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕಾಗಿಯೇ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದವು.

ಪ್ರತಿಭಟನಾ ಮೆರವಣಿಗೆ

ಇನ್ನೊಂದೆಡೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ವಿಪಕ್ಷಗಳ ಸಭೆ ನಡೆಸಿ ಅಧಿವೇಶನದಲ್ಲಿ ಪ್ರತಿಪಕ್ಷಗಳ ಮನವಿಗೆ ಸ್ಪಂದಿಸದ ಕೇಂದ್ರ ಸರ್ಕಾರದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಪ್ರಮುಖ ವಿಷಯಗಳ ಚರ್ಚೆಗೆ ಅವಕಾಶ ಕೊಡದ ಕೇಂದ್ರ ಸರ್ಕಾರದ ನಡೆಗಳಿಗೆ ಪ್ರತಿಯಾಗಿ ಪ್ರತಿಪಕ್ಷಗಳು ಏನು ಮಾಡಬೇಕೆಂದು ಕೂಡ ಚರ್ಚೆ ಮಾಡಲಾಗುತ್ತಿದೆ. ಒಂದು ವೇಳೆ ಇಂದು ಕೂಡ ಚರ್ಚೆಗೆ ಅವಕಾಶ ಕೊಡದಿದ್ದರೆ ಪ್ರತಿಪಕ್ಷಗಳು ಜಂಟಿ ಸುದ್ದಿಗೋಷ್ಠಿ (Joint Press meet) ನಡೆಸಲಿವೆ. ಅಲ್ಲದೆ ಸಂಸತ್ ಭವನದಿಂದ ವಿಜಯ್ ಚೌಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿವೆ.

ಇದನ್ನೂ ಓದಿ: Political Murders: ಬಿಜೆಪಿ, ಎಸ್​ಡಿಪಿಐ ಮುಖಂಡರ ಹತ್ಯೆ; ಕೇರಳದಲ್ಲಿ ಉದ್ವಿಗ್ನ ಸ್ಥಿತಿ

ಚುನಾವಣಾ ತಿದ್ದುಪಡಿ ಮಸೂದೆ ಮಂಡನೆ

ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿಪ್ ಚುನಾವಣಾ ತಿದ್ದುಪಡಿ ಮಸೂದೆ ಮಂಡನೆ ಆಗಲಿದೆ. ಈ ಮಸೂದೆಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪಕ್ಷದ ಸಂಸದರಿ ವಿಪ್ ಜಾರಿ ಮಾಡಿದೆ. ಮಸೂದೆ ಮಂಡನೆ ವೇಳೆ ಎಲ್ಲಾ ಸಂಸದರು ತಪ್ಪದೆ ಹಾಜರಿದ್ದು ವಿರೋಧ ವ್ಯಕ್ತಪಡಿಸಬೇಕೆಂದು ಸೂಚನೆ ನೀಡಿದೆ. ಕೇಂದ್ರ ಸರ್ಕಾರ ತರುತ್ತಿರುವ ಚುನಾವಣಾ ತಿದ್ದುಪಡಿ ಮಸೂದೆಯಲ್ಲಿ ಕೆಲವು ಲೋಪದೋಷಗಳಿದ್ದು ಅವುಗಳ ಬಗ್ಗೆ ಚರ್ಚೆ ಮಾಡಲು ಮತ್ತು ತಿದ್ದುಪಡಿ ಮಾಡಲು ಮಸೂದೆಯನ್ನು ಜಂಟಿ ಸದನ ಸಮಿತಿಗೆ ಕಳುಹಿಸಬೇಕೆಂದು ಪ್ರತಿಪಕ್ಷಗಳು ಕೇಳುತ್ತಿವೆ.
Published by:Latha CG
First published: