Lakhimpur Kheri Massacre| ಲಖೀಂಪುರ್​ ಖೇರಿ ಹತ್ಯಾಕಾಂಡ; ಪ್ರಮುಖ ಆರೋಪಿ, ಸಚಿವರ ಪುತ್ರ ಆಶೀಶ್ ಮಿಶ್ರಾ ಬಂಧನ!

ಭಾರೀ ಜನಾಕ್ರೋಶಕ್ಕೆ ಕಾರಣವಾದ ಲಖೀಂಪುರ್ ಘಟನೆಯ ಆರೋಪಿಗಳ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತ ಉತ್ತರಪ್ರದೇಶ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆಶೀಶ್ ಮಿಶ್ರಾ.

ಬಂಧಿತ ಆಶೀಶ್ ಮಿಶ್ರಾ.

 • Share this:
  ಲಖ್ನೋ: ಲಖೀಂಪುರ್ ಖೇರಿ (Lakhimpur Kheri Massacre) ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ (Ajay Mishra)  ಅವರ ಪುತ್ರ ಆಶೀಶ್ ಮಿಶ್ರಾ (Ashish Mishra) ಅವರನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಲಖೀಂಪುರ್​ ಖೇರಿ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶೀಶ್ ಮಿಶ್ರಾ ಸೇರಿದಂತೆ 13 ಜನರ ಎಫ್​ಐಆರ್​ ದಾಖಲಿಸಲಾಗಿದೆ. ಅಲ್ಲದೆ, ನಾಪತ್ತೆಯಾಗಿದ್ದ ಆಶೀಶ್ ಮಿಶ್ರಾ ಪೊಲೀಸರ ಎದುರು ವಿಚಾರಣೆಗೆ ಹಾಜರ್ ಆಗಬೇಕು ಎಂದು ಎರಡು ಬಾರಿ ಸಮನ್ಸ್​ ಸಹ ಜಾರಿ ಮಾಡಲಾಗಿತ್ತು. ಹೀಗಾಗಿ ಆಶೀಶ್ ಮಿಶ್ರಾ ನಿನ್ನೆ ಉತ್ತರ ಪ್ರದೇಶ ಪೊಲೀಸರ ಎದುರು ಹಾಜರಾಗಿದ್ದರು. ಈ ವೇಳೆ ಪೊಲೀಸರು ಸತತ 11 ಗಂಟೆಗಳ ಕಾಲ ಆತನ ವಿಚಾರಣೆಯನ್ನು ನಡೆಸಿದ್ದಾರೆ. ಆದರೆ, ವಿಚಾರಣೆ ವೇಳೆ ಆತನ ಉತ್ತರಗಳಿಂದ ತೃಪ್ತರಾಗದ ಪೊಲೀಸರು ವಿಚಾರಣೆ ಬೆನ್ನಿಗೆ ನಿನ್ನೆ ತಡರಾತ್ರಿ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.  ಇನ್ಸ್‌ಪೆಕ್ಟರ್ ಜನರಲ್ ಉಪೇಂದ್ರ ಅಗರ್ವಾಲ್ (Upendra Agarwal) ನೇತೃತ್ವದ ಒಂಬತ್ತು ಸದಸ್ಯರ ಎಸ್‌ಐಟಿ ತಂಡ ಆಶೀಶ್ ಮಿಶ್ರಾ ಅವರನ್ನು ಬಂಧಿಸಿದೆ.

  ಲಖೀಂಪುರ್​ ಹತ್ಯಾಕಾಂಡದಲ್ಲಿ ಸಚಿವರ ಪುತ್ರ ಆಶೀಶ್ ಮಿಶ್ರಾ ಪಾತ್ರ ಪ್ರಮುಖವಾದದ್ದು ಎನ್ನಲಾಗಿದೆ. ಪ್ರತಿಭಟನಾ ನಿರತ ರೈತರ ಮೇಲೆ ಕಾರನ್ನು ಹರಿಸುವಂತೆ ಸೂಚನೆ ನೀಡಿದ್ದೇ ಆಶೀಶ್ ಮಿಶ್ರಾ. ಆದರೆ, ಈ ಘಟನೆಯಲ್ಲಿ 4 ರೈತರು ಸಾವನ್ನಪ್ಪುತ್ತಿದ್ದಂತೆ ಆತ ಕಾರಿನಿಂದ ಇಳಿದು ಓಡಿಹೋಗಿದ್ದ. ಈ ಸಂಬಂಧ ವಿಡಿಯೋ ಸಹ ವೈರಲ್ ಆಗಿತ್ತು. ಈ ಘಟನೆಗೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಲಖೀಂಪುರ್​ ಖೇರಿಯಲ್ಲಿ ಹಿಂಸಾಚಾರವೇ ಭುಗಿಲೆದ್ದಿತ್ತು. ಆದರೂ, ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲ.

  ಆದರೆ, ಭಾರೀ ಜನಾಕ್ರೋಶಕ್ಕೆ ಕಾರಣವಾದ ಲಖೀಂಪುರ್ ಘಟನೆಯ ಆರೋಪಿಗಳ ವಿರುದ್ಧ ತೆಗೆದುಕೊಂಡ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತ ಉತ್ತರಪ್ರದೇಶ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ.

  ಆಶೀಶ್ ಮಿಶ್ರಾ ಬಂಧನದ ಬಗ್ಗೆ ಮಾತನಾಡಿರುವ ಡಿಐಜಿ ಅಗರ್ವಾಲ್, "ವಿಚಾರಣೆಗೆ ಅಸಹಕಾರ ಮತ್ತು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಆಧಾರದ ಮೇಲೆ ಆಶೀಶ್ ಮಿಶ್ರಾ ಅವರನ್ನು ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ. ಆದರೆ, ಮತ್ತೊಂದೆಡೆ ಘಟನೆ ನಡೆದ ಸ್ಥಳದಲ್ಲಿ ನನ್ನ ಮಗ ಇರಲೇ ಇಲ್ಲ. ಆತ ಬೇರೊಂದು ಸಮಾರಂಭದಲ್ಲಿದ್ದ. ಬೇಕಿದ್ದರೆ ನಾನು ಆ ಬಗೆಗಿನ ದಾಖಲೆಯನ್ನು ನೀಡುತ್ತೇನೆ ಎಂದು ಸಚಿವ ಅಜಯ್​ ಮಿಶ್ರಾ ತಿಳಿಸಿದ್ದಾರೆ. ಆದರೆ, ಈವರೆಗೆ ಅವರು ಯಾವುದೇ ದಾಖಲೆಯನ್ನು ಮುಂದಿಟ್ಟಿಲ್ಲ.

  ಘಟನೆಯ ವಿವಿರ;

  ಕೇಂದ್ರ ಸಚಿವ ಅಜಯ್​ ಮಿಶ್ರಾ ಮತ್ತು ಡಿಸಿಎಂ ಕೇಶವ ಪ್ರಸಾದ್​ ಮೌರ್ಯ ಕಳೆದ ಭಾನುವಾರ ಉತ್ತರ ಪ್ರದೇಶದ ಲಖೀಮ್​ಪುರ್​ಗೆ ಆಗಮಿಸಿದ್ದರು. ಆದರೆ, ಅವರ ಈ ಭೇಟಿಯನ್ನು ತಡೆಯುವ ಸಲುವಾಗಿ ರೈತ ಪ್ರತಿಭಟನಾಕಾರರು ಹೆಲಿಪ್ಯಾಡ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅಜಯ್ ಮಿಶ್ರಾ ಸೇರಿದಂತೆ ಇನ್ನಿತರರು ರಸ್ತೆ ಮಾರ್ಗವಾಗಿಯೇ ಲಖಿಮಪುರಕ್ಕೆ ತೆರಳಿದ್ದರು. ಕಾರ್ಯಕ್ರಮದ ನಂತರ ಹಿಂದಿರುಗುತ್ತಿದ್ದ ವೇಳೆ ರೈತರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

  ಇದನ್ನೂ ಓದಿ: Lakhimpur Kheri Violence- ಬಿಜೆಪಿ ಕಾರ್ಯಕರ್ತರನ್ನು ಕೊಂದದ್ದು ಕ್ರಿಯೆಗೆ ಪ್ರತಿಕ್ರಿಯೆ ಮಾತ್ರ: ರಾಕೇಶ್ ಟಿಕಾಯತ್

  ಈ ವೇಳೆ ಸಚಿವರ ಪುತ್ರ ರೈತರ ಮೇಲೆ ಕಾರ್ ಚಲಾಯಿಸಿದ್ದಾರೆ. ಈ ಘಟನೆಯಲ್ಲಿ 4 ಜನ ರೈತರು ಸ್ಥಳದಲ್ಲೇ ಮೃತಪಟ್ಟಿದ್ದರೆ, ನಂತರ ನಡೆದ ಗಲಭೆಯಲ್ಲಿ 5 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರದಲ್ಲಿ ಓರ್ವ ಪ್ರತಕರ್ತನೂ ಮೃತಪಟ್ಟಿದ್ದು ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ನಂತರ ಲಖೀಮ್​ಪುರ್​ನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದೆ. ಅಲ್ಲದೆ, ಇನ್ನೂ ಇತರ 13 ಜನರ ವಿರುದ್ಧ ಎಫ್‌ಐಆರ್‌‌ ದಾಖಲಿಸಲಾಗಿದೆ.
  Published by:MAshok Kumar
  First published: