• Home
  • »
  • News
  • »
  • national-international
  • »
  • National: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಕೆರೆ ನಾಶ! ವರದಿ ಕೇಳಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 

National: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಕೆರೆ ನಾಶ! ವರದಿ ಕೇಳಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 

ಕೆರೆಯನ್ನು ನಾಶಮಾಡಿದ ಸ್ಥಳ

ಕೆರೆಯನ್ನು ನಾಶಮಾಡಿದ ಸ್ಥಳ

ದೆಹಲಿ-ವಡೋದರಾ-ಮುಂಬೈ ಎಕ್ಸ್‌ಪ್ರೆಸ್‌ವೇ (ಎನ್‌ಎಚ್-148ಎನ್‌ಎ) ಯನ್ನು ನುಹ್‌ ಹಳ್ಳಿಯ ಕೆರೆಯ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದು, ಗುರುಗ್ರಾಮ್​ ಅರಣ್ಯದಲ್ಲಿ ಮರಗಳನ್ನು ಕಡಿಯಲಾಗಿದೆ ಎಂಬ ಆರೋಪದ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವರದಿ ಕೇಳಿದೆ.

  • Share this:

    ದೆಹಲಿ-ವಡೋದರಾ-ಮುಂಬೈ ಎಕ್ಸ್‌ಪ್ರೆಸ್‌ವೇ (ಎನ್‌ಎಚ್-148ಎನ್‌ಎ) ಯನ್ನು (Delhi-Mumbai Expressway) ನುಹ್‌ ಹಳ್ಳಿಯ ಕೆರೆಯ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದು, ಗುರುಗ್ರಾ ಮ್​ ಅರಣ್ಯದಲ್ಲಿ ಮರಗಳನ್ನು ಕಡಿಯಲಾಗಿದೆ ಎಂಬ ಆರೋಪದ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (National Green Tribunal) ವರದಿ ಕೇಳಿದೆ. ರಾಜ್ಯ ಮಾಲಿನ್ಯ ಮಂಡಳಿ, ಅರಣ್ಯ ಇಲಾಖೆ (Forest Department) ಮತ್ತು ಗುರುಗ್ರಾಮ್ ಆಡಳಿತದ ಜಂಟಿ ಸಮಿತಿಯನ್ನು ರಚಿಸುವಂತೆ ಬುಧವಾರ ನ್ಯಾಯಾಧಿಕರಣವು ಹರಿಯಾಣ ಸರ್ಕಾರವನ್ನು ಕೇಳಿದೆ. ಸಮಿತಿಯು ಸ್ಥಳಗಳನ್ನು ಪರಿಶೀಲಿಸಿ ಎರಡು ತಿಂಗಳೊಳಗೆ ವಾಸ್ತವಿಕ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿದೆ.


    ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ವಿಚಾರಣೆ ನಡೆಸುತ್ತಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನುಹ್‌ನ ಕಿರಂಜ್ ಗ್ರಾಮದ ಎರಡು ಎಕರೆ ಕೆರೆಯ ಜಲಾನಯನ ಪ್ರದೇಶವನ್ನು ಬಳಸಿಕೊಂಡು 2021 ರ ನವೆಂಬರ್‌ನಲ್ಲಿ ಆರು ಪಥಗಳ ಎಕ್ಸ್‌ಪ್ರೆಸ್‌ವೇಯ 60 ಕಿಮೀ ವ್ಯಾಪ್ತಿಯನ್ನು ನಿರ್ಮಿಸಲು ಪ್ರಾರಂಭಿಸಿದೆ ಎಂದು ಅಲ್ಲಿನ ನಿವಾಸಿ ಹಾಗೂ ಅರ್ಜಿದಾರ ಪ್ರೇಮ್ ಮೋಹನ್ ಗೌರ್ ಮಾಹಿತಿ ನೀಡಿದ್ದಾರೆ.


    ಗುರುಗ್ರಾಮ್ ಗಡಿಗೆ ಸಮೀಪವಿರುವ ಈ ಕೊಳವನ್ನು ಗ್ರಾಮಸ್ಥರು ನೀರಾವರಿಗಾಗಿ ಬಳಸುತ್ತಿದ್ದರು ಮತ್ತು ಇದು ಅಂತರ್ಜಲ ಮರುಪೂರಣದ ಮೂಲವಾಗಿದೆ ಎಂದು ಗೌರ್ ವಾದಿಸಿದ್ದಾರೆ.


    ಅನುಮತಿಯನ್ನು ಕೇಳದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ


    ಪ್ರಾಧಿಕಾರವು ಅರಣ್ಯ ಸಂರಕ್ಷಣೆ ಕಾಯಿದೆ, 1980 ಅನ್ನು ಉಲ್ಲಂಘಿಸಿ ಸಮೀಪದ ಹಾಜಿಪುರ ಅರಣ್ಯದಲ್ಲಿ ಮರಗಳನ್ನು ಕಡಿದಿದೆ. 2020 ರಲ್ಲಿ ಗ್ರಾಮ ಪಂಚಾಯತ್‌ಗಳಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರೂ, ಕೆರೆಯ ಮೇಲೆ ಎಕ್ಸ್‌ಪ್ರೆಸ್‌ವೇನಿರ್ಮಿಸಲು ಮತ್ತು ಮರಗಳನ್ನು ಕಡಿಯಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಅಗತ್ಯ ಅನುಮತಿಗಳನ್ನು ತೆಗೆದುಕೊಂಡಿಲ್ಲ ಎಂದು ಅರ್ಜಿದಾರ ಹೇಳಿದ್ದಾರೆ.


    ಅರ್ಜಿದಾರ ಪ್ರೇಮ್ ಮೋಹನ್ ಗೌರ್ ಅವರ ಹೇಳಿಕೆ


    "ರಾಷ್ಟ್ರೀಯ ಹೆದ್ದಾರಿ-148ಎನ್ಎ (ಫರಿದಾಬಾದ್- ಬಲ್ಲಬ್‌ಗಢ್ ಬೈಪಾಸ್ ನಿಂದ ಕೆಎಂಪಿ ಇಂಟರ್ ಜೇಂಜ್ ವರೆಗೆ) ಒಂದು ಭಾಗವನ್ನು ನಿರ್ಮಿಸುವಾಗ, ಹರಿಯಾಣ ಕೆರೆಯ ತ್ಯಾಜ್ಯ ನೀರು ನಿರ್ವಹಣಾ ಪ್ರಾಧಿಕಾರ ಕಾಯ್ದೆ, 2018 ರ ಅಡಿಯಲ್ಲಿ ಸೂಚಿಸಲಾದ ಕೆರೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI )ಆವರಿಸಿಕೊಂಡಿದ್ದು, ಹಾಜಿಪುರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆ. ಇದು ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಯೋಜನೆಯಡಿ ಬರುತ್ತದೆ" ಎಂದು ಗೌರ್ ತಿಳಿಸಿದ್ದಾರೆ.


    ಇದನ್ನೂ ಓದಿ: ಪತ್ನಿ ಕೊಂದು ಮನೆ ಆವರಣದಲ್ಲೇ ಹೂತಿಟ್ಟಿದ್ದ ಪಾತಕಿ, 18 ತಿಂಗಳ ಬಳಿಕ ಅರೆಸ್ಟ್!


    ದೇಶದ ಅತಿದೊಡ್ಡ ಮೆಟ್ರೋ ನಗರಗಳನ್ನು ಸಂಪರ್ಕಿಸುವ ಉದ್ದೇಶದಿಂದ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು 2022 ರಲ್ಲಿ ಕೇಂದ್ರ ಸರ್ಕಾರ ಘೋಷಿಸಿತು.


    ಎಕ್ಸ್‌ಪ್ರೆಸ್‌ವೇ ಭಾಗವು ಫರಿದಾಬಾದ್-ಬಲ್ಲಬ್‌ಗಢ್ ಬೈಪಾಸ್‌ನಿಂದ ಪ್ರಾರಂಭವಾಗಿ ನುಹ್‌ನಲ್ಲಿರುವ ಕೆಎಂಪಿ ಇಂಟರ್‌ಚೇಂಜ್‌ವರೆಗೆ ವಿಸ್ತರಿಸುತ್ತದೆ.


    ಕೆರೆಯನ್ನು ನಾಶಮಾಡಿದ ಸ್ಥಳ


    ಹಸಿರು ನ್ಯಾಯಮಂಡಳಿಯ ನಿರ್ದೇಶನ


    ಈ ಕುರಿತ ಅರ್ಜಿಯನ್ನು ಕೈಗೆತ್ತಿಕೊಂಡು ಪರಿಶೀಲಿಸಿ ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ತಜ್ಞ ಸದಸ್ಯ ಎ.ಸೆಂಥಿಲ್ ವೇಲ್ ಅವರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಪೀಠವು ನಿರ್ದೇಶನ ನೀಡಿದೆ.


    ಸಂಬಂಧಿತ ಅಧಿಕಾರಿಗಳಿಂದ ವಾಸ್ತವಿಕ ವರದಿಯನ್ನು ಪಡೆಯುವುದು ಸೂಕ್ತವೆಂದು ನಾವು ಭಾವಿಸುತ್ತೇವೆ, ಇದಕ್ಕಾಗಿ ನಾವು ಜಂಟಿ ಸಮಿತಿಯನ್ನು ರಚಿಸುತ್ತೇವೆ. ಸೈಟ್ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಿ ಮತ್ತು ತೆಗೆದುಕೊಂಡ ಕ್ರಮಗಳ ಜೊತೆಗೆ ವಿವರವಾದ ವಾಸ್ತವಿಕ ವರದಿ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಈ ಸಂದರ್ಭದಲ್ಲಿ ಸೂಚಿಸಿದೆ.




    ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI ) ಅಧಿಕಾರಿಗಳಿಗೆ ಈ ವಿಷಯ ತಿಳಿದಿದ್ದು, ಯಾವ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರನ್ನು ಕೇಳಲಾಗಿದೆ. ಅವರು "ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ಹಣವನ್ನು ಠೇವಣಿ ಮಾಡಿದ್ದಾರೆ" ಎಂದು ಹೇಳಿದ್ದಾರೆ.


    ನವೆಂಬರ್ 2021 ರಲ್ಲಿ, ಕಿರಂಜ್ ಕೆರೆಯ ಮೇಲೆ ಎಕ್ಸ್‌ಪ್ರೆಸ್‌ವೇ ನಿರ್ಮಿಸುತ್ತಿರುವ ಬಗ್ಗೆ ವರದಿಯಾಗಿದ್ದು, ಜಲಮೂಲವನ್ನು ಪುನಃಸ್ಥಾಪಿಸಲು ಕ್ರಮಕೈಗೊಳ್ಳುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(NHAI ) ಅಧಿಕಾರಿಗಳು ಹೇಳಿದ್ದರು. ಇದಕ್ಕೆ ಸಂಬಂಧಪಟ್ಟ ಅರ್ಜಿಯ ಕುರಿತು ಮಾರ್ಚ್ 17 ರಂದು ವಿಚಾರಣೆ ನಡೆಯಲಿದೆ.

    Published by:Prajwal B
    First published: