ಮತದಾರರನ್ನು ಮೋಡಿ ಮಾಡಿದ ಮತಗಟ್ಟೆ ಅಧಿಕಾರಿ; ಹಳದಿ ಸೀರೆ ಸುಂದರಿಯ ಪೋಟೊಗಳು ವೈರಲ್​

ಒಟ್ಟಿನಲ್ಲಿ ಒಂದೇ ರಾತ್ರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿರುವ ಈ ಹಳದಿ ಸೀರೆಯ ಸುಂದರಿಯಂಥವರನ್ನೇ ಚುನಾವಣಾ ಕರ್ತವ್ಯಕ್ಕೆ ನೇಮಿಸಿ ಎಂಬ ಕೂಗು ಕೇಳಿ ಬಂದಿರುವುದ ಸುಳ್ಳಲ್ಲ

Seema.R | news18
Updated:May 11, 2019, 2:39 PM IST
ಮತದಾರರನ್ನು ಮೋಡಿ ಮಾಡಿದ ಮತಗಟ್ಟೆ ಅಧಿಕಾರಿ; ಹಳದಿ ಸೀರೆ ಸುಂದರಿಯ ಪೋಟೊಗಳು ವೈರಲ್​
ಮತಗಟ್ಟೆ ಅಧಿಕಾರಿ
  • News18
  • Last Updated: May 11, 2019, 2:39 PM IST
  • Share this:
ಕಣ್ಣಿಗೆ ಕೂಲಿಂಗ್​ ಗ್ಲಾಸ್...​ ಕೈಯಲ್ಲಿ ಸ್ಟೈಲಿಶ್​​ ವಾಚ್​... ಕಾಲಿಗೆ ಹೀಲ್ಡ್ಸ್​ ಚಪ್ಪಲಿ... ಹಳದಿ ಬಣ್ಣದ ಸೀರೆಯುಟ್ಟ ನೀರೆ ಕೈಯಲ್ಲಿ ಮತಪೆಟ್ಟಿಗೆ ಸಾಮಗ್ರಿ ಹಿಡಿದು ಮತಗಟ್ಟೆಯತ್ತ ಹೆಜ್ಜೆ ಹಾಕುತ್ತ ಬಂದ ಚೆಲುವೆಯನ್ನು ನೋಡಿ ಅದೆಷ್ಟೋ ಮತದಾರರು ಫಿದಾ ಆಗಿದ್ದರು.

ದೇಶದೆಲ್ಲೆಡೆ ಈಗ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಈ ಬಿಸಿಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಹಳದಿ ಸೀರೆಯುಟ್ಟ ಮತಗಟ್ಟೆ ಅಧಿಕಾರಿ.

ಸರ್ಕಾರಿ ಅಧಿಕಾರಿ ಅದರಲ್ಲೂ ಚುನಾವಣಾಧಿಕಾರಿಗಳು ಕೆಲಸದ ಒತ್ತಡದಿಂದ ತಮ್ಮ ಧಿರಿಸಿನ ಬಗ್ಗೆ ಕಾಳಜಿವಹಿಸುವುದು ವಿರಳ. ಆದರೆ, ಇಲ್ಲೊಬ್ಬರು ಮಹಿಳಾ ಮತಗಟ್ಟೆ ಅಧಿಕಾರಿ ಇದಕ್ಕೆ ವಿರುದ್ಧವಾಗಿದ್ಧಾರೆ.

ಮೇ.6ರಂದು ನಡೆದ ಐದನೇ ಹಂತದ ಚುನಾವಣೆ ವೇಳೆ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮಹಿಳೆಯೊಬ್ಬರು ರಾತ್ರೋ ರಾತ್ರಿ ಫೇಮಸ್​ ಆಗಿದ್ದಾರೆ. ಹಳದಿ ಸೀರೆಯುಟ್ಟು ಮತಪೆಟ್ಟಿಗೆ ಹಿಡಿದು ಓಡಾಡಿದ ಮಹಿಳಾಧಿಕಾರಿ ಪಡ್ಡೆಗಳ ನಿದ್ದೆಗೆಡೆಸಿರುವುದಂತು ಸುಳ್ಳಲ್ಲ.ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಮಹಿಳಾ ಅಧಿಕಾರಿ ಕಣ್ತುಂಬಿಕೊಂಡಿರುವ ಮತದಾರರು, ಮತದಾನ ಸಂಖ್ಯೆ ಹೆಚ್ಚಾಗಬೇಕು ಎಂದರೆ ಈ ರೀತಿಯ ಸುಂದರ ಮಹಿಳೆಯರನ್ನು ಮತಗಟ್ಟೆಗೆ ಕರ್ತವ್ಯಕ್ಕೆ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಯಾರೀ ಹಳದಿ ಸೀರೆ ಸುಂದರಿ?ರಾಜಸ್ಥಾನ ಜೈಪುರದಲ್ಲಿ ನಡೆದ ಐದನೇ ಹಂತದ ಚುನಾವಣೆ ವೇಳೆ ಕುಮಾವತ್​ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಈಕೆಯ ಹೆಸರು ನಳಿನಿ ಸಿಂಗ್​​. ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಳಿನಿ ಸಿಂಗ್​ ಜೈಪುರ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಈ ಮಹಿಳಾ ಅಧಿಕಾರಿ ಫೋಟೋ ವೈರಲ್​ ಆದ ಬಳಿಕ ಅನೇಕರು ಈಕೆ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಶ್ರೀಮತಿ ನಳಿನಿ ಸಿಂಗ್. ಚುನಾವಣೆ ಸಮಯದಲ್ಲಿ ಕುಮಾವತ್​ನಲ್ಲಿ ಕಾರ್ಯನಿರ್ವಹಿಸಿದ ಇವರಿಂದಾಗಿ ಮತಗಟ್ಟೆಯಲ್ಲಿ  ಶೇ 94ರಷ್ಟು ಮತದಾನ ಆಗಿದೆ. ಮತದಾನ ಹೆಚ್ಚಳ ಮಾಡಬೇಕು ಎಂಬ ಜಾಗೃತಿ ಮೂಡಿಸಲು ಜಾಹೀರಾತಿನ ಮೂಲಕ ಕೋಟಿಗಟ್ಟಲೆ ಖರ್ಚು ಮಾಡುವ ಬದಲು ಇಂತಹ ಸುಂದರ ಮಹಿಳೆಯರನ್ನು ಕರ್ತವ್ಯಕ್ಕೆ ನಿಯೋಜಿಸಿ ಎಂಬ ಬೇಡಿಕೆಗಳು ಬಂದಿವೆ.

ಅಸಲಿ ವಿಷಯವೇ ಬೇರೆ!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಗಳ ಕುರಿತು ಈಕೆ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಈಕೆ ಹೆಸರು, ಉದ್ಯೋಗದ ಕುರಿತು ಯಾರೋ ಅಪರಿಚಿತರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಈ ಪೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರ ಪಕ್ಕದಲ್ಲಿ ಶಾಲಾ ಬಸ್​ ನಿಂತಿರುವುದು ಕಂಡು ಬಂದಿದೆ. ಆ ಶಾಲಾ ಬಸ್​ ನಂಬರ್​ ಹಿಡಿದು ಜಾಲಾಡಿದಾಗ ಆ ಸಂಖ್ಯೆ ಬಸ್​ ಉತ್ತರ ಪ್ರದೇಶದ ಲಕ್ನೋ ಮೂಲದ್ದಾಗಿದೆ ಎಂದು ವೆಬ್​ ದುನಿಯಾ ವರದಿ ಮಾಡಿದೆ.

ಇದನ್ನು ಓದಿ: ಟ್ವೀಟರ್​ನಲ್ಲಿ1.10 ಕೋಟಿ ಫಾಲೋವರ್ಸ್ ಹೊಂದಿ ದಾಖಲೆ ನಿರ್ಮಿಸಿದ ಬಿಜೆಪಿ; ಪಕ್ಷಕ್ಕಿಂತ ಪ್ರಧಾನಿ ಮೋದಿ ಹಿಂಬಾಲಿಸುವವರೇ ಹೆಚ್ಚು!

ಒಂದು ಬಸ್​​ ಲಕ್ನೋದ ಬಾಬು ಬನಾರ್ಸಿಡಾಸ್​ ವಿಶ್ವಾವಿದ್ಯಾಲಯದ ಬಸ್​ ಆಗಿದ್ದರೆ ಮತ್ತೊಂದು ಇಂಟಿಗ್ರಲ್​ ವಿಶ್ವವಿದ್ಯಾಲಯದ ಬಸ್​ ಆಗಿದೆ. ಈ ಬಸ್​ಗಳು ಕಾನ್ಪರದ ಬಿಬಿಡಿ ವಿಶ್ವವಿದ್ಯಾಲಯದಿಂದ ಚುನಾವಣಾ ಕರ್ತವ್ಯಕ್ಕೆ ನೇಮಿಸಿದ ಬಸ್​ ಕೂಡ ಆಗಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಸಲಿ ಮಾಹಿತಿ ಮಾತ್ರ ಲಭ್ಯವಾಗಿಲ್ಲ.

ಒಟ್ಟಿನಲ್ಲಿ ಒಂದೇ ರಾತ್ರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿರುವ ಈ ಹಳದಿ ಸೀರೆಯ ಸುಂದರಿಯಂಥವರನ್ನೇ ಚುನಾವಣಾ ಕರ್ತವ್ಯಕ್ಕೆ ನೇಮಿಸಿ ಎಂಬ ಕೂಗು ಕೇಳಿ ಬಂದಿರುವುದ ಸುಳ್ಳಲ್ಲ.

First published:May 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ