HOME » NEWS » National-international » LADIES GANG ALLEGEDLY CONNED BACHELORS INTO FAKE MARRIAGES IN PUNE SNVS

ನಾರೀಮಣಿಯರ ನಕಲಿ ಮದುವೆ ಜಾಲ; ಆಸೆ ತೋರಿಸಿ ಅಮಾಯಕರಿಗೆ ಹಣ, ಆಭರಣ ಪಂಗನಾಮ

ನಿರ್ದಿಷ್ಟ ವಯಸ್ಸು ಮೀರಿದ ಅವಿವಾಹಿತ ಪುರುಷರಿಗೆ ವಧು ತೋರಿಸುವ ನಾಟಕವಾಡಿ 2-3 ಲಕ್ಷ ರೂ ಹಣ ಪೀಕಿಸಿಕೊಂಡು, ಮದುವೆಯಾಗಿ ಕೆಲ ದಿನಗಳ ಬಳಿಕ ಹಣ ಮತ್ತು ಆಭರಣ ದೋಚಿ ಪರಾರಿಯಾಗುತ್ತಿದ್ದ ತಂಡವನ್ನ ಪುಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

news18
Updated:February 11, 2021, 3:50 PM IST
ನಾರೀಮಣಿಯರ ನಕಲಿ ಮದುವೆ ಜಾಲ; ಆಸೆ ತೋರಿಸಿ ಅಮಾಯಕರಿಗೆ ಹಣ, ಆಭರಣ ಪಂಗನಾಮ
ಸಾಂದರ್ಭಿಕ ಚಿತ್ರ
  • News18
  • Last Updated: February 11, 2021, 3:50 PM IST
  • Share this:
ನೀವು ಇನ್ನೂ ಮದುವೆಯಾಗಿಲ್ವಾ..? ಹಾಗಾದ್ರೆ ತುಂಬಾ ಎಚ್ಚರಿಕೆಯಿಂದಿರಿ. ಹೆಣ್ಣು ತೋರಿಸುತ್ತೇವೆಂದು ನಿಮಗೆ ಪಂಗನಾಮ ಹಾಕುವ ಗ್ಯಾಂಗ್ ಗಳು ಇದೀಗ ಸಕ್ರಿಯವಾಗಿವೆ ಹುಷಾರ್!. ನೀವೇನಾದರೂ ಇವರ ಮಾತು ನಂಬಿದ್ರೆ ಅಷ್ಟೇ, ಮುಗೀತು ನಿಮ್ಮ ಕಥೆ! ಹೌದು, ಅವಿವಾಹಿತರನ್ನೇ ಟಾರ್ಗೆಟ್ ಮಾಡಿ ನಕಲಿ ವಿವಾಹ ಮಾಡಿ ಮೋಸ ಮಾಡುವ ಗ್ಯಾಂಗ್ ಗಳು ಹುಟ್ಟಿಕೊಂಡಿವೆ. ವಯಸ್ಸಾದ್ರೂ ಇನ್ನೂ ಮದುವೆಯಾಗಿಲ್ಲವೆಂದು ಕೊರಗುತ್ತಿರುವವರು ಇವರ ಮಾತನ್ನು ಸುಲಭವಾಗಿ ನಂಬಿ ಮೋಸ ಹೋಗಿಬಿಡುತ್ತಾರೆ.  

ಒಂದು ನಿರ್ದಿಷ್ಟ ವಯಸ್ಸಿನ ಪುರುಷರೇ ಈ ಗ್ಯಾಂಗ್ ನ ಪ್ರಮುಖ ಗುರಿ. ಅವರು ಮೊದಲು ನಿಮಗೆ ವಧುವನ್ನು ತೋರಿಸುತ್ತೇವೆ ಎಂದು ಹೇಳುತ್ತಾರೆ. ವಧು ತೋರಿಸಲು ಶುಲ್ಕ ನೀಡಬೇಕೆಂದು ನಿಮ್ಮ ಬಳಿ ಹಣ ಪಡೆದುಕೊಳ್ಳುತ್ತಾರೆ. ಬಳಿಕ ಮದುವೆಯನ್ನೂ ಮಾಡಿಸುತ್ತಾರೆ. ಆದರೆ ಅದು ಅಸಲಿ ಮದುವೆಯ ಬದಲು ನಕಲಿ ಮದುವೆಯಾಗಿರುತ್ತದೆ. ಹೀಗೆ ನಕಲಿ ಮದುವೆ ಮಾಡಿಸಿ ಅವಿವಾಹಿತರಿಗೆ ಮೋಸ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ನ ಸದಸ್ಯರನ್ನು ಪುಣೆಯ ಗ್ರಾಮೀಣ ಅಪರಾಧ ಶಾಖೆ ಪೊಲೀಸರು ಬಂಧಿಸಿದ್ದಾರೆ.

ಮದುವೆ ಹೆಸರಿನಲ್ಲಿ ಅವಿವಾಹಿತರಿಗೆ ಟೋಪಿ ಹಾಕುತ್ತಿದ್ದ 8 ಜನ ಮಹಿಳೆಯರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಘೋಲಿಯ ಕೇಘ್ನಾಂಡ್ ಫಾಟಾ ನಿವಾಸಿ ಜ್ಯೋತಿ ರವೀಂದ್ರ ಪಾಟೀಲ್(35), ವಿದ್ಯಾ ಸತೀಶ್ ಖಂಡೇಲ್ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು 4 ದಿನಗಳ ಕಾಲ ಕಸ್ಟಡಿಯಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಡ್ಗಾಂವ್ ಮಾವಲ್ ಪೊಲೀಸ್ ಠಾಣೆಯಲ್ಲಿ ಮಾವಲ್ ಮೂಲದ 32 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರು ಅಶಿಕ್ಷಿತ ಮತ್ತು ನಿರುದ್ಯೋಗಿಯಾಗಿದ್ದರಿಂದ ವಧುವನ್ನು ಹುಡುಕುವುದು ಕಷ್ಟಕರವಾಗಿತ್ತು. ಹೀಗಾಗಿ ಗ್ಯಾಂಗ್ ಲೀಡರ್ ಆಗಿರುವ ಜ್ಯೋತಿ ಪಾಟೀಲ್ ಅವರ ಬಳಿ ವಧುವಿಗಾಗಿ ಅವರು ಸಂಪರ್ಕಿಸಿದ್ದರು. ದಿವ್ಯಾ ಖಂಡೇಲ್ ಅವರನ್ನು ಸೋನಾಲಿ ಜಾಧವ್ ಎಂದು ಜ್ಯೋತಿ ದೂರುದಾರರಿಗೆ ಪರಿಚಯಿಸಿದ್ದರು ಮತ್ತು ಮದುವೆಗಾಗಿ ಅವರಿಂದ 2.4 ಲಕ್ಷ ರೂ. ಹಣ ಪಡೆದುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾನು ಮದುವೆಯಾಗುತ್ತಿರುವ ವಧುವಿನ ನಡವಳಿಕೆ ಅನುಮಾನಾಸ್ಪದವಾಗಿರುವುದನ್ನು ಕಂಡುಕೊಂಡ ದೂರುದಾರರ ಕುಟುಂಬ ಸಂಶಯ ವ್ಯಕ್ತಪಡಿಸಿತ್ತು. ಬಳಿಕ ದಿವ್ಯಾ ಖಂಡೇಲ್ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವುದನ್ನು ಪತ್ತೆ ಹಚ್ಚಿ ಸ್ಥಳೀಯ ಅಪರಾಧ ಶಾಖೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕಾರ್ಯಾಚರಣೆ ನಡೆಸಿದ ಪೊಲೀಸರು ಜ್ಯೋತಿ ಪಾಟೀಲ್ ಗ್ಯಾಂಗ್ ಅವಿಹಾಹಿತರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿರುವ ವಿಚಾರವನ್ನು ಬಹಿಲಿಗೆಳೆದಿದ್ದಾರೆ.

ಒಂದು ನಿರ್ದಿಷ್ಟ ವಯಸ್ಸನ್ನು ಮೀರಿದ ಅವಿವಾಹಿತ ಪುರುಷರನ್ನು ಟಾರ್ಗೆಟ್ ಮಾಡಿ ಅವರಿಗೆ ವಧು ತೋರಿಸುವ ನಾಟಕವಾಡಿ ಮದುವೆ ಮಾಡಿಸಲು 2-3 ಲಕ್ಷ ರೂ. ಹಣ ಪಡೆದುಕೊಳ್ಳುತ್ತಿದ್ದರು. ಮದುವೆಯಾದ ಆರೇಳು ದಿನಗಳ ಬಳಿಕ ಆಭರಣ ಮತ್ತು ಹಣ ದೋಚಿ ಪರಾರಿಯಾಗುತ್ತಿದ್ದರು. ಇವರ ಮೋಸದ ಜಾಲಕ್ಕೆ ಸಿಕ್ಕು ಬಲಿಪಶುಗಳಾದ ಬಹುತೇಕರು ಸಮಾಜದಲ್ಲಿ ಮುಖ ತೋರಿಸಲು ಹೆದರಿ ಈ ಗ್ಯಾಂಗ್ ನ ವಂಚನೆ ಬಗ್ಗೆ ದೂರು ನೀಡಿರಲಿಲ್ಲ.

ಈ ರೀತಿ ಮೋಸ ಹೋದವರು ಧೈರ್ಯವಾಗಿ ಮುಂದೆ ಬಂದು ದೂರು ನೀಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ 8 ಮಂದಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420(ಮೋಸ) ಮತ್ತು 379(ಕಳ್ಳತನ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪುಣೆ ಅಪರಾಧ ಶಾಖೆಯ ಇನ್ಸ್ ಪೆಕ್ಟರ್ ಪದ್ಮಕರ್ ಘನ್ವತ್ ಹೇಳಿದ್ದಾರೆ.
Published by: Vijayasarthy SN
First published: February 11, 2021, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories