Video: ನದಿ ತೀರದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ಅಸ್ಸಾಂನ ಮಜುಲಿಯಲ್ಲಿ ರಸ್ತೆಗಳೇ ಇಲ್ಲ!

news18
Updated:September 14, 2018, 5:43 PM IST
Video: ನದಿ ತೀರದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ಅಸ್ಸಾಂನ ಮಜುಲಿಯಲ್ಲಿ ರಸ್ತೆಗಳೇ ಇಲ್ಲ!
news18
Updated: September 14, 2018, 5:43 PM IST
-ನ್ಯೂಸ್​ 18 ಕನ್ನಡ

ಅಸ್ಸಾಂ,(ಸೆ.14): ಆಸ್ಪತ್ರೆಗೆ ಹೋಗಲು ಸಮರ್ಪಕವಾದ ರಸ್ತೆ ಸಂಪರ್ಕವಿಲ್ಲದೇ ಮಹಿಳೆಯೊಬ್ಬರು ನದಿ ತೀರದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಅಸ್ಸಾಂನ ಮಜುಲಿಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು,  ಮಹಿಳೆ ಐಮೋನಿ ಬ್ರಹ್ಮಪುತ್ರ ನದಿ ದಡದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಜುಲಿ ಗ್ರಾಮದಲ್ಲಿ ಇಂತಹ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಬೇರೆಡೆಗೆ ತೆರಳಲು ಸರಿಯಾದ ರಸ್ತೆ ಸಂಪರ್ಕವಿಲ್ಲ.

ಇಂದು ಮುಂಜಾನೆ ಹೆರಿಗೆ ನೋವು ಅನುಭವಿಸುತ್ತಿದ್ದ ಐಮೋನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಮುಂದಿನ ವಾರ ದಿನಾಂಕ ನಿಗದಿ ಮಾಡಿ ವಾಪಸ್ಸು ಕಳಿಸಿದ್ದರು. ಆಸ್ಪತ್ರೆಯಿಂದ ಮನೆಗೆ ಮರಳಿ ಬರುವಾಗ ದಾರಿ ಮಧ್ಯದಲ್ಲೇ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಅಲ್ಲೇ ಇದ್ದ ಮಹಿಳೆಯರ ಸಹಾಯದಿಂದ ಹೆರಿಗೆ ಮಾಡಿಸಲಾಗಿದೆ. ತಾಯಿ ಐಮೋನಿ ದಾರಿಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಗ್ರಾಮಸ್ಥರು ಬಿದಿರಿನಿಂದ ಹೆಣೆದ ಪಲ್ಲಕ್ಕಿಗೆ ಬಟ್ಟೆ ಸುತ್ತಿ ಅದರಲ್ಲಿ ತಾಯಿ ಮತ್ತು ಮಗುವನ್ನು ಮನೆಗೆ ಕರೆದೊಯ್ದಿದ್ದಾರೆ. 



ಗ್ರಾಮಸ್ಥರ ಸಹಾಯದಿಂದ ದೋಣಿಯ ಮೂಲಕ ನದಿಯನ್ನು ದಾಟಿ ಮನೆ ತಲುಪಿದ್ದಾಳೆ. ಜನ್ಮ ತಳೆದ ಗಂಡು ಮಗುವಿಗೆ ಸಂಗ್ಬಾದಿಕ್​​ ಎಂದು ಹೆಸರಿಟ್ಟಿದ್ದಾರೆ. ಸಂಗ್ಬಾದಿಕ್​​ ಅಂದರೆ ಪತ್ರಕರ್ತ ಎಂಬ ಅರ್ಥ ಬರುತ್ತದೆ.

ಇಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಈ ವರ್ಷ ಇಂತಹದೇ ಇನ್ನೊಂದು ಘಟನೆ ನಡೆದಿತ್ತು. ಗರ್ಭಿಣಿ ಮಹಿಳೆಯೊಬ್ಬರು ಇಂತಹದೇ ಪರಿಸ್ಥಿತಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಲ್ಲಿ ಸಮರ್ಪಕ ರಸ್ತೆಗಳು ಮತ್ತು ಆಸ್ಪತ್ರೆಗಳಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
First published:September 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ