ಅಚ್ಚರಿಯಾದರೂ ಸತ್ಯ; ಸಾಕಿದ ಒಡತಿಗೇ ಶೂಟ್ ಮಾಡಿದ ನಾಯಿ!

ಇದೇ ಮೊದಲ ಬಾರಿಗೆ ನಾಯಿಯೊಂದು ಗನ್​ನಿಂದ ಶೂಟ್ ಮಾಡಿರುವ ಘಟನೆ ವರದಿಯಾಗಿದೆ. ಹೀಗಾಗಿ, ಪೊಲೀಸರಿಗೂ ಯಾರ ವಿರುದ್ಧ ಕ್ರಮ ಕೈಗೊಳ್ಳುವುದೆಂದು ಗೊತ್ತಾಗದೆ ಗೊಂದಲಗೊಂಡಿದ್ದಾರೆ.

news18-kannada
Updated:October 10, 2019, 4:42 PM IST
ಅಚ್ಚರಿಯಾದರೂ ಸತ್ಯ; ಸಾಕಿದ ಒಡತಿಗೇ ಶೂಟ್ ಮಾಡಿದ ನಾಯಿ!
ಸಾಂದರ್ಭಿಕ ಚಿತ್ರ
news18-kannada
Updated: October 10, 2019, 4:42 PM IST
ಬಹುತೇಕ ಎಲ್ಲ ಹೆಣ್ಣುಮಕ್ಕಳಂತೆ ಆಕೆ ಕೂಡ ನಾಯಿಪ್ರೇಮಿ. ಮನೆತುಂಬ ನಾಯಿಗಳು ಇರಬೇಕೆಂಬ ಆಸೆಯಿಂದ ನಾಲ್ಕೈದು ನಾಯಿಗಳನ್ನು ಮನೆಯಲ್ಲಿ ಸಾಕಿಕೊಂಡಿದ್ದ ಆಕೆ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು. ನಾಯಿಗಳಿಗೂ ಅಷ್ಟೇ ಒಡತಿಯೆಂದರೆ ಬಹಳ ಪ್ರೀತಿ. ಆದರೆ, ತಾನು ಪ್ರೀತಿಯಿಂದ ಸಾಕಿದ್ದ ನಾಯಿಯಿಂದಲೇ ಆಕೆಗೆ ಆಪತ್ತು ಕಾದಿತ್ತು.

ಅಮೆರಿಕದ ಒಕ್ಲಹೊಮಾದ ಪೊಲೀಸರಿಗೆ ಆ ದಿನ ಅಚ್ಚರಿ, ಆಘಾತಗಳೆರಡೂ ಕಾದಿತ್ತು. ಪೊಲೀಸರಿಗೆ ಅಪಘಾತ, ಕೊಲೆ, ಕಳ್ಳತನದ ದೂರಿನ ಫೋನ್ ಕರೆಗಳು ಬರುವುದು ಸಾಮಾನ್ಯ. ಆದರೆ, ಆ ದಿನ ಬಂದ ಫೋನ್ ಕರೆ ವಿಚಿತ್ರವಾಗಿತ್ತು. ಕಾರಿನಲ್ಲಿ ಕುಳಿತ ಮಹಿಳೆಗೆ ಗುಂಡೇಟು ತಾಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಗುಂಡೇಟು ಹೊಡೆದಿದ್ದು ಆಕೆ ಸಾಕಿದ ನಾಯಿ ಎಂಬುದೇ ವಿಚಿತ್ರವಾದ ಸಂಗತಿ.

ತನ್ನ ಮುದ್ದಿ ನಾಯಿಯೊಂದಿಗೆ ಕಾರಿನಲ್ಲಿ ಹೊರಟಿದ್ದ ಮನೆಯೊಡತಿ ಟೀನಾ ಸ್ಪ್ರಿಂಗರ್ ರಸ್ತೆಯ ಮಧ್ಯೆ ರೈಲ್ವೆ ಹಳಿಯಲ್ಲಿ ರೈಲು ಬರುತ್ತಿದ್ದುದರಿಂದ ಡ್ರೈವರ್ ಕಾರು ನಿಲ್ಲಿಸಿದ್ದ. ಕಾರಿನ ಮುಂದಿನ ಸೀಟಿನ ಬಳಿ ಲೋಡ್ ಆಗಿದ್ದ ಹ್ಯಾಂಡ್​ಗನ್ ಇಡಲಾಗಿತ್ತು. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಲ್ಯಾಬ್ರಡಾರ್ ನಾಯಿ ಮೊಲ್ಲಿ ಕುಳಿತಿತ್ತು. ರೈಲು ಹೋದ ನಂತರ ಡ್ರೈವರ್ ಕಾರನ್ನು ಸ್ಟಾರ್ಟ್​ ಮಾಡಿದ್ದಾನೆ. ಇದ್ದಕ್ಕಿದ್ದಂತೆ ಕಾರು ಸ್ಟಾರ್ಟ್​ ಆಗಿದ್ದರಿಂದ ಗಾಬರಿಯಾದ ಮೊಲ್ಲಿ ಎಂಬ 7 ತಿಂಗಳ ಲ್ಯಾಬ್ರಡಾರ್​ ನಾಯಿ ಮುಂದೆ ಹಾರಿತ್ತು. ಮೊಲ್ಲಿ ಗನ್​ ಮೇಲೆ ಹಾರಿದ ರಭಸಕ್ಕೆ ಅದರಿಂದ ಗುಂಡು ಹಾರಿದೆ. ಆಗ ಆ ಗುಂಡು ಮುಂದಿನ ಸೀಟಿನಲ್ಲಿ ಕುಳಿತಿದ್ದ ಟೀನಾ ಅವರ ತೊಡೆಗೆ ತಾಗಿದ್ದರಿಂದ ಆಕೆ ಗಂಭಿರವಾಗಿ ಗಾಯಗೊಂಡಿದ್ದರು.

ಭಿಕ್ಷುಕಿಯ ಚೆಕ್ ನೋಡಿದ ಬ್ಯಾಂಕ್​ ಅಧಿಕಾರಿಗಳು ಶಾಕ್; ಭಿಕ್ಷೆ ಬೇಡಿ ಆಕೆ ಸಂಪಾದಿಸಿದ್ದು 5.62 ಕೋಟಿ ರೂ!

ಇದೇ ಮೊದಲ ಬಾರಿಗೆ ನಾಯಿಯೊಂದು ಗನ್​ನಿಂದ ಶೂಟ್ ಮಾಡಿರುವ ಘಟನೆ ವರದಿಯಾಗಿದೆ. ಹೀಗಾಗಿ, ಪೊಲೀಸರಿಗೂ ಯಾರ ವಿರುದ್ಧ ಕ್ರಮ ಕೈಗೊಳ್ಳುವುದೆಂದು ಗೊತ್ತಾಗದೆ ಗೊಂದಲಗೊಂಡಿದ್ದಾರೆ. ತೀವ್ರ ರಕ್ತಸ್ರಾವವಾಗಿರುವುದರಿಂದ ಟೀನಾ ಸ್ಪ್ರಿಂಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

First published:October 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...