HOME » NEWS » National-international » L CATTERTON BECOMES 10TH INVESTOR IN JIO PLATFORMS IN FUNDRAISING BY RIL UNIT SNVS

Jio-L Catterton: ರಿಲಾಯನ್ಸ್​ನಲ್ಲಿ ಹೂಡಿಕೆ ಮಾಡಿದ 10ನೇ ಕಂಪನಿ

ಎಲ್ ಕೆಟರ್​ಟನ್ (L Catterton) ಜಿಯೋದಲ್ಲಿ ಹೂಡಿಕೆ ಮಾಡಿದೆ. ಏಳು ವಾರಗಳ ಅವಧಿಯಲ್ಲಿ ಜಿಯೋದಲ್ಲಿ ಹೂಡಿಕೆ ಮಾಡಿದ 10ನೇ ಕಂಪನಿ ಇದಾಗಿದೆ.

news18
Updated:June 14, 2020, 10:40 AM IST
Jio-L Catterton: ರಿಲಾಯನ್ಸ್​ನಲ್ಲಿ ಹೂಡಿಕೆ ಮಾಡಿದ 10ನೇ ಕಂಪನಿ
ರಿಲಾಯನ್ಸ್ ಜಿಯೋ
  • News18
  • Last Updated: June 14, 2020, 10:40 AM IST
  • Share this:
ಮುಂಬೈ(ಜೂನ್ 14): ರಿಲಾಯನ್ಸ್ ಜಿಯೋದ ವಿವಿಧ ಪ್ಲಾಟ್​ಫಾರ್ಮ್​​ಗಳಲ್ಲಿ ಹೂಡಿಕೆ ಮಾಡಲು ವಿಶ್ವದ ದೊಡ್ಡ ದೊಡ್ಡ ಹೂಡಿಕೆದಾರರು ಆಸಕ್ತಿ ತೋರುತ್ತಿರುವುದು ಮುಂದುವರಿದಿದೆ. ವಿಶ್ವದ ಅತಿದೊಡ್ಡ ಖಾಸಗಿ ಹೂಡಿಕೆ ಕಂಪನಿಗಳಲ್ಲಿ ಒಂದಾದ ಎಲ್ ಕೆಟರ್​ಟನ್ (L Catterton) ಜಿಯೋದಲ್ಲಿ ಹೂಡಿಕೆ ಮಾಡಿದೆ.

ಅಮೆರಿಕ ಮೂಲದ L Catterton ಸಂಸ್ಥೆಯು ಗ್ರಾಹಕ ಕೇಂದ್ರಿತ ವಲಯದಲ್ಲಿ ವಿಶ್ವದ ಅತಿದೊಡ್ಡ ಪ್ರೈವೇಟ್ ಈಕ್ವಿಟಿ ಸಂಸ್ಥೆಯಾಗಿದೆ. ಇದು ಜಿಯೋದ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ಶೇ 0.39 ಪಾಲನ್ನು ಖರೀದಿಸಲಿದೆ. ಸುಮಾರು 1,894.50 ಕೋಟಿ ರೂ ಹೂಡಿಕೆ ಮಾಡಲಿದೆ.

ನಿನ್ನೆ ಒಂದೇ ದಿನ ಜಿಯೋ ಜೊತೆ ಎರಡು ಕಂಪನಿಗಳು ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದು ವಿಶೇಷ. TPG ಹಾಗೂ L Catterton ಕಂಪನಿಗಳು ನಿನ್ನೆ ಜಿಯೋದ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ಹೂಡಿಕೆ ಮಾಡಿವೆ. ಕಳೆದ ಏಳು ವಾರಗಳ ಅವಧಿಯಲ್ಲಿ ಜಿಯೋದಲ್ಲಿ ಒಟ್ಟು 10 ಸಂಸ್ಥೆಗಳು ಹೂಡಿಕೆ ಮಾಡಿವೆ. ಜಿಯೋ ಒಟ್ಟು ಶೇ. 22.38ರಷ್ಟು ಪಾಲನ್ನು 1,04,326.65 ರೂಪಾಯಿಗೆ ಮಾರಿದೆ.

ಇದನ್ನೂ ಓದಿ: Jio-TPG Deal - ಒಂದು ಲಕ್ಷ ಕೋಟಿ ದಾಟಿದ ಹೊರ ಬಂಡವಾಳ ಹೂಡಿಕೆ

ಎಲ್ ಕ್ಯಾಟರ್​ಟನ್ ಸಂಸ್ಥೆ ವಿಶ್ವದ ವಿವಿಧ ಪ್ರಮುಖ ಕನ್ಸೂಮರ್ ಬ್ರ್ಯಾಂಡ್​ಗಳ ಮೇಲೆ 200 ಹೂಡಿಕೆ ಒಪ್ಪಂದ ಮಾಡಿಮಾಡಿಕೊಂಡಿದೆ.

Youtube Video


ಜಿಯೋದಲ್ಲಿ ಹೂಡಿಕೆ ಮಾಡಿರುವ ಈ 10 ಕಂಪನಿಗಳ ಪೈಕಿ ಫೇಸ್​ಬುಕ್ ಸಂಸ್ಥೆ ಗರಿಷ್ಠ ಹೂಡಿಕೆ ಮಾಡಿದೆ. ಇದು 43,574 ಕೋಟಿ ರೂ ಹೂಡಿಕೆ ಮಾಡಿ ಶೇ. 9.99 ಪಾಲನ್ನು ಖರೀದಿಸಿದೆ.
First published: June 14, 2020, 10:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories