HOME » NEWS » National-international » KUWAITI BUSINESSMAN AIMS TO MAKE SUPERWORMS A SUCCESSFUL FOOD FOR HUMANS STG KVD

ವಿಲಿವಿಲಿ ಎನ್ನುವ ಹುಳುಗಳನ್ನು ಮನುಷ್ಯರು ತಿನ್ನುವಂತೆ ಮಾಡುವುದೇ ಈ ಉದ್ಯಮಿಯ ಗುರಿಯಂತೆ! ಏಕೆ?

ಈ ಸೂಪರ್‌ ಕೀಟಗಳಿಂದ ಪಾಕವಿಧಾನಗಳ ಪ್ರಯೋಗ ಮಾಡುತ್ತಿದ್ದಾರೆ‌. ಈಗಾಗಲೇ ಈ ಸೂಪರ್‌ ವರ್ಮ್‌ಗಳಿಂದ ಮೂರು ಬಗೆಯ ಸಾಸ್‌ಗಳನ್ನು ತಯಾರಿದ್ದಾರೆ.

news18-kannada
Updated:June 1, 2021, 3:52 PM IST
ವಿಲಿವಿಲಿ ಎನ್ನುವ ಹುಳುಗಳನ್ನು ಮನುಷ್ಯರು ತಿನ್ನುವಂತೆ ಮಾಡುವುದೇ ಈ ಉದ್ಯಮಿಯ ಗುರಿಯಂತೆ! ಏಕೆ?
ಹುಳುಗಳು
  • Share this:

ಪಶು ಆಹಾರಕ್ಕಾಗಿ ಕೀಟಗಳ ಸಂತಾನೋತ್ಪತ್ತಿ ಮಾಡಲು ಹಲವು ವರ್ಷಗಳನ್ನು ಕಳೆದಿರುವ ಕುವೈತ್ ಉದ್ಯಮಿ ಜಸ್ಸೆಮ್ ಬುವಾಬ್ಬಾಸ್, ಈಗ ಕೀಟಗಳು ಕೊಲ್ಲಿ ರಾಷ್ಟ್ರದ ಪ್ರಜೆಗಳ ಆಹಾರಕ್ರಮವಾಗಲೆಂದು ಆಶಿಸಿದ್ದಾರೆ. ಅಲ್ಲದೆ, ಈ ಸೂಪರ್‌ ವಾರ್ಮ್‌ಗಳನ್ನು ಮಾನವರಿಗೆ 'ಯಶಸ್ವಿ ಆಹಾರ'ವನ್ನಾಗಿ ಮಾಡುವ ಗುರಿಯನ್ನೂ ಹೊಂದಿದ್ದಾರೆ. ಈ ಸಂಬಂಧ ಎಎಫ್‌ಪಿಗೆ ಮಾತನಾಡಿದ ಕುವೈತ್ ಉದ್ಯಮಿ ಜಸ್ಸೆಮ್ ಬುವಾಬ್ಬಾಸ್, "ಈ ಹುಳುಗಳು ಮಾನವರಿಗೆ ಯಶಸ್ವಿ ಆಹಾರ ಪರ್ಯಾಯವಾಗಬೇಕೆಂಬುದು ನನ್ನ ಮಹತ್ವಾಕಾಂಕ್ಷೆಯಾಗಿದೆ" ಎಂದು ಹೇಳಿದ್ದಾರೆ.


ಸಾಮಾನ್ಯ ಕೀಟಗಳನ್ನು ಜಗತ್ತಿನಾದ್ಯಂತ ವ್ಯಾಪಕವಾಗಿ ತಿನ್ನಲಾಗುತ್ತದೆ. ಅಂದಾಜು 1,000 ಪ್ರಭೇದಗಳ ಕೀಟಗಳನ್ನು ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಸುಮಾರು ಎರಡು ಶತಕೋಟಿ ಜನರು ಈ ಆಹಾರವನ್ನು ತಿನ್ನುತ್ತಾರೆ. ಆದರೆ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಹೊರತಾಗಿ, ಕ್ರಿಕೆಟ್ ಪಾಸ್ಟಾ ಮತ್ತು ಮೀಲ್‌ವರ್ಮ್‌ ಸ್ಮೂಥಿಗಳು ಕೆಲವು ವಿಶ್ವ ರಾಜಧಾನಿಗಳಲ್ಲಿ ಇತ್ತೀಚಿನ ಆಹಾರ ಟ್ರೆಂಡ್‌ ಆಗಿ ಮಾರ್ಪಟ್ಟಿವೆ. ಅಲ್ಲದೆ, ಖಾದ್ಯ ಕೀಟಗಳನ್ನು ಸಾಮಾನ್ಯ ಪ್ರೋಟೀನ್ ಮೂಲಗಳಿಗೆ ಸುಸ್ಥಿರ ಪರ್ಯಾಯವಾಗಿ ಉತ್ತೇಜಿಸಲಾಗುತ್ತದೆ.ಕುವೈತ್ ಸಿಟಿಯ ಹೊರಗಿನ ಒಂದು ಸಣ್ಣ ಡಾರ್ಕ್‌ ರೂಮಿನಲ್ಲಿ ಹೆಚ್ಚಿನ ಪ್ರೋಟೀನ್ ಅಂಶಕ್ಕೆ ಹೆಸರುವಾಸಿಯಾಗಿರುವ ಡಾರ್ಕ್ಲಿಂಗ್ ಜೀರುಂಡೆಯ ಹುಳು-ತರಹದ ಲಾರ್ವಾಗಳನ್ನು ಹೊಟ್ಟು ಮತ್ತು ಕಾರ್ನ್‌ಫ್ಲೋರ್‌ನ ಹಾಸಿಗೆಯ ಮೇಲೆ ಪಾರದರ್ಶಕ ಪೆಟ್ಟಿಗೆಯಲ್ಲಿ ಇಡುತ್ತಾರೆ. ಇನ್ನೊಂದರಲ್ಲಿ ಅವರು ಪ್ರಬುದ್ಧ ಜೀರುಂಡೆಗಳನ್ನು ಸಂಯೋಗಕ್ಕಾಗಿ ಇಡುತ್ತಾರೆ. ಕೆಲವು ಕೊಲ್ಲಿ ರಾಜ್ಯಗಳ ಜನತೆ ಒಣಗಿದ ಮತ್ತು ಬೇಯಿಸಿದ ಮಿಡತೆಗಳನ್ನು ತಿನ್ನುವ ಸಂಪ್ರದಾಯವನ್ನು ಹೊಂದಿದ್ದಾರೆ. ಆಧುನಿಕ ಕಾಲದಲ್ಲಿ ಇದನ್ನು ಬಳಸುವವರು ಕಡಿಮೆಯಾಗಿದ್ದರೂ ಅವುಗಳನ್ನು ಕೆಲವರು ಸವಿಯಾದ ಪದಾರ್ಥವೆಂದು ಪರಿಗಣಿಸುತ್ತಾರೆ.


ಇದನ್ನೂ ಓದಿ: ನಿಜ ಜೀವನದ ಚಾಕೊಲೇಟ್‌ ಕಪ್ಪೆಗಳು ಪತ್ತೆ ಹಚ್ಚಿದ ವಿಜ್ಞಾನಿಗಳು: ಹ್ಯಾರಿ ಪಾಟರ್ ಅಭಿಮಾನಿಗಳ ಪ್ರತಿಕ್ರಿಯೆ ಹೀಗಿದೆ ನೋಡಿ!

ಇನ್ನು, ಈ ಸೂಪರ್‌ ವಾರ್ಮ್‌ಗಳಿಗೆ ಪಕ್ಷಿಗಳು, ಮೀನುಗಳು, ಉಭಯಚರಗಳು ಮತ್ತು ಸರೀಸೃಪಗಳ ಮಾಲೀಕರಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದರೆ, ಕುವೈತ್‌ನಲ್ಲಿ ಮಾನವ ಬಳಕೆಗಾಗಿ ಇನ್ನೂ ಅನುಮೋದನೆ ಪಡೆಯಲಾಗಿಲ್ಲವಾದರೂ, ಜನರು ಅವುಗಳನ್ನು ಪ್ರಯತ್ನಿಸಲು ಸಿದ್ಧರಿರುತ್ತಾರೆ ಎಂದು ಬುವಾಬ್ಬಾಸ್ ಭರವಸೆ ಹೊಂದಿದ್ದಾರೆ.
ಸದ್ಯ ಸಾಕು ಪ್ರಾಣಿಗಳ ಆಹಾರಕ್ಕಾಗಿ ಮಾತ್ರ ಈ ಸೂಪರ್‌ ಕೀಟಗಳನ್ನು ಬಳಸಲಾಗುತ್ತಿದ್ದರೂ, ಈ ವ್ಯವಹಾರವನ್ನು ಜನರ ಆಹಾರದ ಭಾಗವಾಗಿಯೂ ಸೇರಿಸುವ ಉದ್ದೇಶ ಹೊಂದಿದ್ದಾರೆ ಈ ಕುವೈತ್‌ನ ಉದ್ಯಮಿ. ಅಲ್ಲದೆ, ಇದು ಯಶಸ್ವಿಯಾಗಿದ್ದೇ ಆದಲ್ಲಿ ಕೊಲ್ಲಿಯಲ್ಲಿ ಈ ಸೂಪರ್‌ ವಾರ್ಮ್‌ಗಳ ಮೊದಲ ರೆಸ್ಟೋರೆಂಟ್‌ ಸಹ ಓಪನ್‌ ಆಗಬಹುದು.


ಕುವೈತ್ ಅಧಿಕಾರಿಗಳಿಂದ ಅನುಮತಿ ಪಡೆಯುವ ಮೊದಲು ಈ ಸೂಪರ್‌ ಕೀಟಗಳಿಂದ ಪಾಕವಿಧಾನಗಳ ಪ್ರಯೋಗ ಮಾಡುತ್ತಿದ್ದಾರೆ ಬುವಾಬ್ಬಾಸ್‌. ಈಗಾಗಲೇ ಈ ಸೂಪರ್‌ ವರ್ಮ್‌ಗಳಿಂದ ಮೂರು ಬಗೆಯ ಸಾಸ್‌ಗಳನ್ನು ಮಾಡಿದ್ದೇನೆ. ಮತ್ತು ನನ್ನ ಸಹೋದ್ಯೋಗಿಗಳು ಅವುಗಳನ್ನು ಪ್ರಯತ್ನಿಸಿದ್ದಾರೆ ಮತ್ತು ಇಷ್ಟಪಟ್ಟಿದ್ದಾರೆ ಎಂದು ಬುವಾಬ್ಬಾಸ್‌ ಹೇಳಿದ್ದಾರೆ. ಇವರು ಸೂಪರ್‌ ವರ್ಮ್‌ಗಳನ್ನು ಸಂತಾನೋತ್ಪತ್ತಿ ಮಾಡುವುದರ ಹೊರತಾಗಿ ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಾರೆ.

ಇನ್ನೊಂದೆಡೆ, ಮೇ ತಿಂಗಳಲ್ಲಿ 27 ರಾಷ್ಟ್ರಗಳ ಬಣದ ಫುಡ್‌ ವಾಚ್‌ಡಾಗ್‌, ಮಾನವರು ತಿನ್ನಲು ಸುರಕ್ಷಿತ ಎಂದು ಹೇಳಿದ ನಂತರ ಯುರೋಪಿಯನ್ ಕಮಿಷನ್ ನಾಗರಿಕರ ಬಳಕೆಗಾಗಿ ಒಣಗಿದ ಮೀಲ್‌ ವಾರ್ಮ್‌ಗಳನ್ನು ಅನುಮೋದಿಸಿದೆ. ಈ ನಿರ್ಧಾರವು ಯುರೋಪಿನಲ್ಲಿ ಬೆಳೆಯುತ್ತಿರುವ ಕೀಟ ಕೃಷಿ ಉದ್ಯಮಕ್ಕೆ ಒಳ್ಳೆಯ ಸುದ್ದಿಯಾಗಿದೆ.
ಸೂಪರ್‌ ವರ್ಮ್‌ಗಳ ರಹಸ್ಯಗಳ ಮೇಲಿನ ಆಕರ್ಷಣೆಯು 2018 ರಲ್ಲಿ ಥೈಲ್ಯಾಂಡ್‌ಗೆ ಪ್ರಯಾಣಿಸಲು ಪ್ರಾಣಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರೇರೇಪಿಸಿತು. ಅಲ್ಲಿ ಪ್ರಾನಿಗಳು ಜನಪ್ರಿಯ ಸ್ನ್ಯಾಕ್ಸ್‌ಗಳಾಗಿದೆ ಎಂದು ಬುವಾಬ್ಬಾಸ್ ಹೇಳಿದರು.


"ಮೊದಲಿಗೆ, ನಾನು ಈ ಹುಳುಗಳಿಂದ ಅಸಹ್ಯಗೊಂಡಿದ್ದೆ, ಆದರೆ ... ನಂತರ ನಾನು ಒಗ್ಗಿಕೊಂಡೆ, ಅದರ ನಡವಳಿಕೆಯನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ಅದಕ್ಕೆ ಯಾವುದು ಅಪಾಯವನ್ನುಂಟುಮಾಡುತ್ತದೆ ಎಂಬುದನ್ನು ಕಂಡುಕೊಂಡಿದ್ದೇನೆ'' ಎಂದು ಅವರು ಎಎಫ್‌ಪಿಗೆ ತಿಳಿಸಿದರು.Youtube Video

ಅವರು ಪ್ರತಿದಿನ ಎರಡು ಗಂಟೆಗಳ ಕಾಲ ಈ ಜೀವಿಗಳೊಂದಿಗೆ ಕಳೆಯುತ್ತಾರೆ. ಅವುಗಳಿಗೆ ಓಟ್ಸ್, ಬ್ರ್ಯಾನ್‌, ಆಲೂಗೆಡ್ಡೆ ಮತ್ತು ಕ್ಯಾರೆಟ್‌ ಮುಂತಾದ ಆಹಾರವನ್ನು ನೀಡುತ್ತೇನೆ. ಜೊತೆಗೆ ತೇವಾಂಶ ಮತ್ತು ತಾಪಮಾನದ ಮಟ್ಟವನ್ನು ತಿರುಗಿಸುತ್ತಾರೆ ಬುವಾಬ್ಬಾಸ್‌. ಸಾಮಾನ್ಯವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ 3,000 ರಿಂದ 6,000 ಹುಳುಗಳನ್ನು ಉತ್ಪಾದಿಸುವ ಉದ್ಯಮಿ, ಕೆಲವೊಮ್ಮೆ 10,000 ದವರೆಗೆ ಸಂತಾನೋತ್ಪತ್ತಿ ಮಾಡುತ್ತಾರೆ.
ಸೂಪರ್‌ ವಾರ್ಮ್‌ಗಳು ಸಾಕಷ್ಟು ಪ್ರಬುದ್ಧವಾಗಿ ಮಾರಾಟಕ್ಕೆ ಸಿದ್ಧವಾಗಲು ಸುಮಾರು 90 ದಿನಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿಯೊಂದು ಕೀಟಆರು ಗ್ರಾಂ ತೂಕದ ಆರು ಸೆಂಟಿಮೀಟರ್ (ಎರಡು ಇಂಚು) ಉದ್ದವಿರುತ್ತದೆ. ಇನ್ನು, 25 ಲಾರ್ವಾಗಳಿಗೆ 3 ಡಾಲರ್‌ ಹಣ ಪಡೆಯುವುದಾಗಿಯೂ ಅವರು ತಿಳಿಸಿದ್ದಾರೆ.ಸೂಪರ್‌ ವಾರ್ಮ್‌ ವ್ಯವಹಾರವು ಲಾಭದಾಯಕವಾಗಿದೆ ಎಂದು ಬುವಾಬ್ಬಾಸ್‌ ಹೇಳಿದ್ದು, ಪಕ್ಷಿ ಸಾಕುವ ಗ್ರಾಹಕರು ತಮ್ಮ ಕಾರ್ಡಿನಲ್ಸ್ ಮತ್ತು ನೈಟಿಂಗೇಲ್‌ಗಳಿಗೆ ಆಹಾರಕ್ಕಾಗಿ ಒಂದು ಸಮಯದಲ್ಲಿ ಸಾವಿರಾರು ಡಾಲರ್ ಮೌಲ್ಯದ ಕೀಟಗಳನ್ನು ಖರೀದಿಸುತ್ತಾರೆ.


ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದಿಂದಾಗಿ ದೇಶದ ಗಡಿಗಳನ್ನು ಮುಚ್ಚುವ ಮೊದಲು, ಅವರು ಹುಳುಗಳ ಪೆಟ್ಟಿಗೆಗಳನ್ನು ಇತರ ಕೊಲ್ಲಿ ರಾಷ್ಟ್ರಗಳಿಗೆ, ವಿಶೇಷವಾಗಿ ಸೌದಿ ಅರೇಬಿಯಾಕ್ಕೆ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.ಬುವಾಬ್ಬಾಸ್‌ ತನ್ನ ವ್ಯವಹಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಅವರು ಸೂಪರ್ ವಾರ್ಮ್‌ ಪಾಕವಿಧಾನಗಳಲ್ಲಿ ಕೆಲಸ ಮಾಡುವಾಗ ಸ್ಥಳೀಯ ಪಾಕಪದ್ಧತಿಯ ಅಂಶಗಳನ್ನು ಸಂಯೋಜಿಸುವುದಾಗಿಯೂ ಅವರು ಹೇಳುತ್ತಾರೆ. ಆದರೆ ಈ ಸೂಪರ್‌ ಕೀಟಗಳನ್ನು ಹೇಗೆ ರುಚಿ ನೋಡಿದ್ದಿರಿ ಎಂದು ಕೇಳಿದ್ದಕ್ಕೆ, ತಾನು ಅವುಗಳನ್ನು ಯಾವಾಗಲೂ ತಿಂದಿಲ್ಲ. ಈ ಹಿನ್ನೆಲೆ ಟೇಸ್ಟ್‌ ತಿಳಿದಿಲ್ಲ ಎಂದು ಉದ್ಯಮಿ ಬುವಾಬ್ಬಾಸ್‌ ಹೇಳಿದರು.

First published: June 1, 2021, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories