• Home
 • »
 • News
 • »
 • national-international
 • »
 • Kuwait: ಸಾರ್ವಜನಿಕ ಸ್ಥಳಗಳಲ್ಲಿ ಯೋಗ ಮಾಡುವಂತಿಲ್ಲ! ಹೊಸ ನಿಯಮಕ್ಕೆ ಬೇಸತ್ತು ಬೀದಿಗಿಳಿದ ಮುಸ್ಲಿಂ ಮಹಿಳೆಯರು!

Kuwait: ಸಾರ್ವಜನಿಕ ಸ್ಥಳಗಳಲ್ಲಿ ಯೋಗ ಮಾಡುವಂತಿಲ್ಲ! ಹೊಸ ನಿಯಮಕ್ಕೆ ಬೇಸತ್ತು ಬೀದಿಗಿಳಿದ ಮುಸ್ಲಿಂ ಮಹಿಳೆಯರು!

ಯೋಗ / yoga

ಯೋಗ / yoga

Kuwait government: ಕುವೈತ್​​ನಲ್ಲಿ ಮೌಲ್ವಿಗಳ ವಿರೋಧ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಬಯಲು ಯೋಗವನ್ನು ನಿಷೇಧಿಸಿದೆ. ಪದ್ಮಾಸನ ಮತ್ತು ಸ್ವನಾಸನ ಯೋಗಾಸನಗಳ ಬಗ್ಗೆ ಧರ್ಮಗುರುಗಳು (Clerics) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಇಸ್ಲಾಂಗೆ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.

ಮುಂದೆ ಓದಿ ...
 • Share this:

  ಯೋಗ (Yoga) ಮಾಡಿ ರೋಗ (Disease) ಬರೋದಿಲ್ಲಾ ಎಂಬ ಮಾತಿದೆ. ಆದರೆ ಕುವೈತ್​ನಲ್ಲಿ (Kuwait) ಯೋಗ ಮಾಡುವ ವಿಚಾರವಾಗಿ ಹೊಸ ನಿಯಮವನ್ನು (New Rules) ಜಾರಿಗೆ ತರಲಾಗಿದೆ. ಮಾತ್ರವಲ್ಲದೆ ಹೊಸ ನಿಯಮದಿಂದಾಗಿ ಕುವೈತ್ ನಲ್ಲಿ ಕೋಲಾಹಲ ಎದ್ದಿದೆ.


  ಕುವೈತ್​​ನಲ್ಲಿ ಮೌಲ್ವಿಗಳ ವಿರೋಧ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಬಯಲು ಯೋಗವನ್ನು ನಿಷೇಧಿಸಿದೆ. ಪದ್ಮಾಸನ ಮತ್ತು ಸ್ವನಾಸನ ಯೋಗಾಸನಗಳ ಬಗ್ಗೆ ಧರ್ಮಗುರುಗಳು (Clerics) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಇಸ್ಲಾಂಗೆ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.


  ಆದರೆ ಈ ವಿಚಾರಕ್ಕೆ ಮಹಿಳೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಯೋಗ ಮಾಡಲು ಅನುಮತಿ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಬಹುತೇಕ ದೇಶಗಳು ಯೋಗಾಸನ ಮಾಡಲು ಉತ್ತೇಜನ ನೀಡುತ್ತಾ ಬಂದಿದೆ. ಇದರಿಂದ ಆರೋಗ್ಯ ಲಾಭವಿದೆ ಎಂದು ಗಮನಿಸಿಕೊಂಡು ಯೋಗಾಸನ ಮಾಡಿದರೆ. ಕುವೈತ್​ ಮಾತ್ರ ಸಾರ್ವಜನಿಕ ಸ್ಥಳದಲ್ಲಿ ಯೋಗ ಮಾಡದಂತೆ ನಿಯಮ ಜಾರಿಗೆ ತಂದಿದೆ.


  ಯೋಗ ಶಿಬಿರಕ್ಕೆ ಸಂಬಂಧಿಸಿ ಈ ವಿರೋಧ ಪ್ರಾರಂಭವಾಗಿದೆ. ಯೋಗ ಶಿಕ್ಷಕರೊಬ್ಬರು ಮರುಭೂಮಿಯಲ್ಲಿ ಯೋಗವನ್ನು ಮಾಡುವ ಜಾಹೀರಾತು ಮಾಡಿದ್ದಾರೆ. ಇದರ ನಂತರ ಅಲ್ಲಿ ಬಯಲು ಯೋಗದ ಬಗ್ಗೆ ವಿರೋಧಗಳು ಕೇಳಿಬಂದಿದೆ.


  ಯೋಗ ಜಾಹೀರಾತಿನ ನಂತರ ಧರ್ಮಗುರುಗಳು ಮತ್ತು ಮೂಲಭೂತವಾದಿಗಳು ಯೋಗದ ವಿರುದ್ಧ ಹರಿಹಾಯ್ದರು. ಯೋಗ ಮಾಡುವ ಜನರು ಸಾರ್ವಜನಿಕ ಸ್ಥಳಗಳಲ್ಲಿ ಪದ್ಮಾಸನ ಮತ್ತು ಸ್ವನಾಸನ ಯೋಗಾಸನವನ್ನು ಇಸ್ಲಾಂಗೆ ಅಪಾಯಕಾರಿ ಎಂದು ಬಣ್ಣಿಸಿದ್ದಾರೆ.


  ಹೆಚ್ಚುತ್ತಿರುವ ವಿವಾದವನ್ನು ಕಂಡು ಸದ್ಯಕ್ಕೆ ಈ ಯೋಗ ಶಿಬಿರವನ್ನು ನಿಷೇಧಿಸಲಾಗಿದೆ. ಅದೇ ಸಮಯದಲ್ಲಿ, ಪುರುಷರ ಪ್ರಾಬಲ್ಯವಿರುವ ಕವೈಟ್​ ದೇಶದಲ್ಲಿ ಯೋಗವನ್ನು ನಿಷೇಧಿಸುವುದರ ವಿರುದ್ಧ ಮಹಿಳೆಯರೂ ಒಗ್ಗೂಡಿದ್ದಾರೆ. ಮಹಿಳೆಯರಿಗಾಗಿ ಯೋಗವು ಮಹಿಳಾ ಹಕ್ಕುಗಳ ಹೋರಾಟದ ಸಂಕೇತವಾಗಿದೆ ಎಂದು ಬೀದಿಗಿಳಿದಿದ್ದಾರೆ.


  ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಯೋಗ ಮಾಡುವುದು ದೇಶದ ಸಾಂಪ್ರದಾಯಿಕ ಮೌಲ್ಯಗಳ ಮೇಲಿನ ದಾಳಿ ಎಂದು ಅಲ್ಲಿನ ಸಂಪ್ರದಾಯವಾದಿಗಳು ಹೇಳುತ್ತಿದ್ದಾರೆ. ಇದೇ ವಿಚಾರಕ್ಕೆ ಸರಕಾರವೂ ಇವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಸಮಸ್ಯೆಯನ್ನು ಸರಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ದೂರಿದ್ದಾರೆ.


  ಇದನ್ನೂ ಓದಿ: Internet Cut: ಮಕ್ಕಳ ಮೊಬೈಲ್ ಚಟ ತಪ್ಪಿಸಲು ಅಪ್ಪ ಮಾಡಿದ ಎಡವಟ್ಟು ಏನು ಗೊತ್ತಾ? ಇಡೀ ನಗರದ ಇಂಟರ್​ನೆಟ್ ಕಟ್!


  ಕುವೈತ್‌ನಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ನಜೀಬಾ ಹಯಾತ್ ಯೋಗಕ್ಕೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂಲಭೂತವಾದಿಗಳ ಇಂತಹ ಧೋರಣೆಯಿಂದಾಗಿ ಕುವೈತ್ ವೇಗವಾಗಿ ಹಿಂದುಳಿದಿದೆ ಎಂದಿದ್ದಾರೆ.


  ಮಹಿಳೆಯರಿಗೆ ಸೀಮಿತ ಹಕ್ಕು


  ಮಹಿಳೆಯರಿಗೆ ಅತ್ಯಂತ ಕಡಿಮೆ ಹಕ್ಕುಗಳನ್ನು ನೀಡಿರುವ ದೇಶಗಳಲ್ಲಿ ಕುವೈತ್ ಕೂಡ ಒಂದು. ಇಲ್ಲಿ, ಮಹಿಳೆಯರು ಸಾರ್ವಜನಿಕವಾಗಿ ಏನು ಮಾಡಬೇಕು ಎಂಬುದನ್ನು ಪುರುಷರು ನಿರ್ಧರಿಸುತ್ತಾರೆ. ಆದರೆ ಮೂಲಭೂತವಾದಿ ಸಿದ್ಧಾಂತಕ್ಕೆ ಹೆಸರಾದ ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ಈಗ ಮಹಿಳೆಯರಿಗೆ ಸಾಕಷ್ಟು ಹಕ್ಕುಗಳನ್ನು ನೀಡಲಾಗುತ್ತಿದೆ. ಕಳೆದ ತಿಂಗಳು ಸೌದಿ ಅರೇಬಿಯಾ ಮೊದಲ ಓಪನ್ ಏರ್ ಯೋಗ ಉತ್ಸವವನ್ನು ಆಯೋಜಿಸಿತ್ತು. ಆಗ ಕುವೈತ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.


  ಸೆಕ್ಷನ್ 153


  ಕುವೈತ್ ಮಹಿಳೆಯರ ಮನಸ್ಸು ಈಗಾಗಲೇ ನಿರ್ಬಂಧಗಳಿಂದ ತುಂಬಿದೆ ಎಂದು ‘ಅಬಾಲಿಶ್ 153’ ಎಂಬ ಸಂಸ್ಥೆಯ ಸಂಸ್ಥಾಪಕ ಅಲನೂದ್ ಅಲ್ಶರೇಖ್ ಹೇಳಿದ್ದಾರೆ. ಈಗ ಅವರೆಲ್ಲರು ಹೊರಬಂದು ಪ್ರತಿಭಟಿಸುತ್ತಿದ್ದಾರೆ. ಕುವೈತ್‌ನಲ್ಲಿ ಮಹಿಳೆಯೊಬ್ಬರು ಅಪರಾಧ ಮಾಡಿದರೆ ಕಾನೂನಿನಲ್ಲಿ ಕಠಿಣ ಶಿಕ್ಷೆಯ ವ್ಯವಸ್ಥೆ ಇದೆ. ಆದರೆ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಈ ಶಿಕ್ಷೆಯು ಅತ್ಯಲ್ಪವಾಗಿದೆ ಎಂದಿದ್ದಾರೆ.


  ಇದನ್ನೂ ಓದಿ: Browserನಲ್ಲಿ ಪಾರ್ಸ್​ವರ್ಡ್​​ ಸೇವ್​ ಮಾಡಿಟ್ಟುಕೊಂಡಿದ್ದೀರಾ? ಹಾಗಿದ್ರೆ ಮೊದಲು ಈ ಕೆಲಸ ಮಾಡಿ


  ಕುವೈತ್ ದಂಡ ಸಂಹಿತೆಯ ಸೆಕ್ಷನ್ 153 ರ ಅಡಿಯಲ್ಲಿ, ಗೌರವಾರ್ಥವಾಗಿ ಮಹಿಳೆಯ ಹತ್ಯೆಗೆ ಅತ್ಯಂತ ಸೌಮ್ಯವಾದ ಶಿಕ್ಷೆಯ ನಿಬಂಧನೆ ಇದೆ. ಈ ಕಾನೂನನ್ನು ಹಿಂಪಡೆಯಬೇಕು ಎಂಬ ಬೇಡಿಕೆಯೂ ಹಲವು ಬಾರಿ ಕೇಳಿಬಂದಿದೆ. 2021 ರಲ್ಲಿ ಫರಾಹ್ ಹತ್ಯೆಯ ನಂತರ ನಡೆದ ಪ್ರತಿಭಟನೆಗಳ ನಂತರ, ಸಂಸತ್ತು ಸೆಕ್ಷನ್ 153 ಅನ್ನು ರದ್ದುಗೊಳಿಸುವ ಕರಡನ್ನು ಮಂಡಿಸಿತು. ಮಹಿಳೆಯು ಇನ್ನೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದರಿಂದ ಕೊಲೆಯಾಗಿದ್ದರೆ, ತಪ್ಪಿತಸ್ಥರು ಗರಿಷ್ಠ ಮೂರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಅದು ಹೇಳಿದೆ.


  ಗಮನಾರ್ಹ ವಿಚಾರವೆಂದರ, ಕುವೈತ್‌ನಲ್ಲಿ ಸೈನ್ಯಕ್ಕೆ ಮಹಿಳೆಯರ ನೇಮಕಾತಿಯ ಬೇಡಿಕೆಯನ್ನು ತಿರಸ್ಕರಿಸಲಾಗಿದೆ.

  Published by:Harshith AS
  First published: