ಪ್ರಯಾಗ್​ರಾಜ್​ನಲ್ಲಿ ಕುಂಭಮೇಳಕ್ಕೆ ಚಾಲನೆ; 12 ಕೋಟಿ ಭಕ್ತರು ಭಾಗಿ ಸಾಧ್ಯತೆ

Kumbh Mela 2019: ಶೈವ, ವಿಷ್ಣು ಹಾಗೂ ಉದಾಸೀನ ಪಂಥದ ಸಾಧುಗಳ ಆಧಾರದ ಮೇಲೆ ಅಖಾಡಗಳನ್ನು ವರ್ಗೀಕರಿಸಲಾಗುತ್ತದೆ. ಭಕ್ತರ ಶಾಹಿ ಸ್ನಾನಕ್ಕಾಗಿ ನದಿಯ ಉದ್ದಕ್ಕೂ ಸುಸಜ್ಜಿತ ಸ್ನಾನಘಟ್ಟಗಳನ್ನು ನಿರ್ಮಿಸಲಾಗಿದೆ.

Rajesh Duggumane | news18
Updated:January 15, 2019, 10:49 AM IST
ಪ್ರಯಾಗ್​ರಾಜ್​ನಲ್ಲಿ ಕುಂಭಮೇಳಕ್ಕೆ ಚಾಲನೆ; 12 ಕೋಟಿ ಭಕ್ತರು ಭಾಗಿ ಸಾಧ್ಯತೆ
ಕುಂಭಮೇಳದಲ್ಲಿ ಭಕ್ತರು
  • News18
  • Last Updated: January 15, 2019, 10:49 AM IST
  • Share this:
ಅಲಹಾಬಾದ್ (ಜ.15)​: ಹಿಂದುಗಳ ಪವಿತ್ರ ಕ್ಷೇತ್ರಗಳಲ್ಲೊಂದಾದ  ಪ್ರಯಾಗ್​ರಾಜ್​ನಲ್ಲಿ (ಅಲಹಾಬಾದ್​) ಅರ್ಧ ಕುಂಭಮೇಳಕ್ಕೆ ಚಾಲನೆ ನೀಡಲಾಯಿತು. ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ ಮುಂದಿನ 50 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.

13 ಅಖಾಡಗಳಲ್ಲಿ ಸಾಧುಗಳು ಪುಣ್ಯಸ್ನಾನ ಮಾಡುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಿದರು. ಮುಂದಿನ ಎರಡು ದಿನಗಳಲ್ಲಿ ಸುಮಾರು 12 ಕೋಟಿಗೂ ಅಧಿಕ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು 1 ಕೋಟಿಗೂ ಹೆಚ್ಚು ಭಕ್ತರು ಪ್ರಯಾಗ್​ ರಾಜ್​​ಗೆ ಆಗಮಿಸಿದ್ದಾರೆ. ಮಹಾ ಶಿವರಾತ್ರಿಯಂದು ಕಾರ್ಯಕ್ರಮ ಕೊನೆಗೊಳ್ಳಲಿದೆ.

ಶೈವ, ವಿಷ್ಣು ಹಾಗೂ ಉದಾಸೀನ ಪಂಥದ ಸಾಧುಗಳ ಆಧಾರದ ಮೇಲೆ ಅಖಾಡಗಳನ್ನು ವರ್ಗೀಕರಿಸಲಾಗುತ್ತದೆ. ಭಕ್ತರ ಶಾಹಿ ಸ್ನಾನಕ್ಕಾಗಿ ನದಿಯ ಉದ್ದಕ್ಕೂ ಸುಸಜ್ಜಿತ ಸ್ನಾನಘಟ್ಟಗಳನ್ನು ನಿರ್ಮಿಸಲಾಗಿದೆ. 4,300 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸಲಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಪುಣ್ಯಸ್ನಾನದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: ಸುಗ್ಗಿಯ ಸಂಭ್ರಮದ ಸಂಕ್ರಾಂತಿ; ರಾಜ್ಯದಲ್ಲೆಡೆ ಅದ್ದೂರಿ ಆಚರಣೆ

ಯಾವುದೇ ಅಹಿತರಕ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಒದಗಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದರಿಂದ ಕಾಲ್ತುಳಿತ ಉಂಟಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿ 6 ವರ್ಷಕ್ಕೊಮ್ಮೆ ಅರ್ಧಕುಂಭಮೇಳ ಹಾಗೂ ಪ್ರತಿ 12 ವರ್ಷಗಳಿಗೊಮ್ಮೆ ಪೂರ್ಣಕುಂಭಮೇಳ ನಡೆಯುತ್ತದೆ. ಇದು ಹಿಂದುಗಳ ಸಾಮೂಹಿಕ ತೀರ್ಥಯಾತ್ರೆ ಎಂದೇ ಹೇಳಬಹುದು.

First published: January 15, 2019, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading