New Rules: ಅಬ್ಬರದ ಮ್ಯೂಸಿಕ್, ಜೋರಾಗಿ ಮಾತಾಡೋದು ನಿಷೇಧಿಸಿದ KSRTC

ಹಲವಾರು ಪ್ರಯಾಣಿಕರು ಕೆಎಸ್‍ಆರ್​ಟಿಸಿ ಬಸ್‍ಗಳಲ್ಲಿ ಕೆಲವರು ಜೋರಾಗಿ ತಮ್ಮ ಮೊಬೈಲ್‍ನಲ್ಲಿ ಮಾತನಾಡುತ್ತಾರೆ, ಹಾಡುಗಳನ್ನು ಕೇಳುತ್ತಾರೆ, ಅದರಿಂದ ಕಿರಿಕಿರಿ ಅನುಭವಿಸುವ ಪ್ರಯಾಣಿಕರೊಂದಿಗೆ ಉದ್ಧಟತನದೊಂದಿಗೆ ವರ್ತಿಸುತ್ತಾರೆ ಎಂದು ದೂರು ನೀಡಿದ್ದರು.

ಮೊಬೈಲ್

ಮೊಬೈಲ್

  • Share this:
ಭಾರತದಾದ್ಯಂತ (India) ಸಾರ್ವಜನಿಕರು ಫೋನ್ ಗಳಲ್ಲಿ ಮಾತಾಡುತ್ತ ಸಂಚರಿಸುವುದನ್ನು ಕಾಣಬಹುದು. ಆದರೆ, ವಿಶೇಷವಾಗಿ ಸಾರ್ವಜನಿಕ ಸಾರಿಗೆಗಳಲ್ಲಿ (Transport) ಜನರು ಜೋರಾಗಿ ಮಾತನಾಡುವಂತಹ ದುರ್ವರ್ತನೆ ಸಹಪ್ರಯಾಣಿಕರಿಗೆ ಕಿರುಕುಳವಾಗಿ ಪರಿಣಮಿಸಿದ್ದು, ಚಾಲಕರ ಗಮನವನ್ನು ಬೇರೆಡೆ ಸೆಳೆಯುತ್ತದೆ. ಹೀಗಾಗಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ತನ್ನ ಬಸ್‍ಗಳಲ್ಲಿ ಇನ್ನು ಮುಂದೆ ಸ್ಪೀಕರ್ ಫೋನ್ ಹಾಕಿಕೊಂಡು ಸಂಗೀತ ಕೇಳುವುದು, ಫೋನ್‍ನಲ್ಲಿ ಜೋರಾಗಿ ಮಾತನಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರಿಗೆ ಸ್ಪೀಕರ್ ಫೋನ್‍ಗಳಲ್ಲಿ ಸಂಗೀತ ಕೇಳುವುದು, ಮೊಬೈಲ್ (Mobile) ಫೋನ್‍ನಲ್ಲಿ ಜೋರಾಗಿ ಮಾತನಾಡುವುದರಿಂದ ತೀವ್ರ ಕಿರಿಕಿರಿಯಾಗುತ್ತಿದೆ ಎಂಬ ದೂರಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂಥ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಫೋನ್‍ ಬಳಸಿ ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬ ಸೂಚನೆಯನ್ನು ದಪ್ಪ ಅಕ್ಷರಗಳಲ್ಲಿ (Bold Letters) ಬಸ್‍ನೊಳಗೆ ಬರೆಯಲಾಗುತ್ತದೆ. ಈ ಸಂಬಂಧ ದೂರುಗಳೇನಾದರೂ ಕೇಳಿ ಬಂದರೆ, ಬಸ್‍ನ ನಿರ್ವಾಹಕರು ಅಂತಹ ದೂರುಗಳನ್ನು ಶಾಂತಿಯುತವಾಗಿ ಪರಿಹರಿಸುತ್ತಾರೆ.  ಪ್ರಯಾಣಿಕರಿಗೆ ಸೂಚನೆಯನ್ನು ಅನುಸರಿಸುವಂತೆ ಮನವಿ ಮಾಡುತ್ತಾರೆ ಎನ್ನಲಾಗಿದೆ.

ಮಹಿಳಾ ಪ್ರಯಾಣಿಕರು ನೀಡಿದ ದೂರು:

ಫೆಬ್ರವರಿ 2ರಂದು ಈ ಸಂಬಂಧ ಮಹಿಳಾ ಪ್ರಯಾಣಿಕರೊಬ್ಬರು (Lady Passenger) ನೀಡಿದ್ದ ದೂರನ್ನು ಆಧರಿಸಿ ಕೆಎಸ್‍ಆರ್​ಟಿಸಿ ಇಂತಹ ಆದೇಶವನ್ನು ಹೊರಡಿಸಿದೆ. ಇದರೊಂದಿಗೆ ಹಲವಾರು ಪ್ರಯಾಣಿಕರು ಕೆಎಸ್‍ಆರ್​ಟಿಸಿ ಬಸ್‍ಗಳಲ್ಲಿ ಕೆಲವರು ಜೋರಾಗಿ ತಮ್ಮ ಮೊಬೈಲ್‍ನಲ್ಲಿ ಮಾತನಾಡುತ್ತಾರೆ, ಹಾಡುಗಳನ್ನು ಕೇಳುತ್ತಾರೆ, ಅದರಿಂದ ಕಿರಿಕಿರಿ ಅನುಭವಿಸುವ ಪ್ರಯಾಣಿಕರೊಂದಿಗೆ ಉದ್ಧಟತನದೊಂದಿಗೆ ವರ್ತಿಸುತ್ತಾರೆ ಎಂದು ದೂರು ನೀಡಿದ್ದರು. ಇದರೊಂದಿಗೆ ದೊಡ್ಡ ಸದ್ದಿನೊಂದಿಗೆ ಬಸ್‍ ಒಳಗೆ ವಿಡಿಯೊ ಮತ್ತು ಹಾಡುಗಳನ್ನು ಕೇಳಲಾಗುತ್ತದೆ ಎಂದೂ ದೂರು ನೀಡಲಾಗಿತ್ತು.

ಬಸ್ ಒಳಗಡೆ ಹೊಸ ನಿಯಮ

ಕೆಎಸ್‍ಆರ್​ಟಿಸಿ ಸುಖಕರ ಹಾಗೂ ಸುರಕ್ಷಿತ ಪ್ರಯಾಣ ಒದಗಿಸಲು ಪ್ರಯತ್ನ ಪಡುತ್ತಿದ್ದು, ಎಲ್ಲ ವರ್ಗದ ಪ್ರಯಾಣಿಕರ ಹಿತವನ್ನು ಗರಿಷ್ಠ ಪ್ರಮಾಣದಲ್ಲಿ ರಕ್ಷಿಸುವ ಗುರಿ ಹೊಂದಿದೆ. ಹೀಗಾಗಿ, ಬಸ್‍ನೊಳಗೆ ನಡೆಯುವ ಇಂತಹ ಘಟನೆಗಳು ಅನಾರೋಗ್ಯಕರ ಮತ್ತು ಅಹಿತಕರ ವಾತಾವರಣವನ್ನು ಸೃಷ್ಟಿಸುತ್ತವೆ. ಈ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್‍ನೊಳಗೆ ಸಂಗೀತ ಕೇಳಲು ಮತ್ತು ದೊಡ್ಡ ಧ್ವನಿಯಲ್ಲಿ ಮೊಬೈಲ್‍ನಲ್ಲಿ ಮಾತನಾಡುವುದನ್ನು ನಿಷೇಧಿಸಲಾಗಿದೆ. ಈ ನಿಷೇಧವನ್ನು ಬರವಣಿಗೆಯ ಮೂಲಕ ಬಸ್‍ನೊಳಗೆ ಪ್ರದರ್ಶಿಸಲಾಗುತ್ತದೆ.

ಮೊಬೈಲ್ ಫೋನ್ ಬಳಕೆಗೆ ಕಡಿವಾಣ

ಈ ಕುರಿತು ಪ್ರತಿಕ್ರಿಯಿಸಿರುವ ಕೆಎಸ್ಆರ್‍ಟಿಸಿ, ಎಲ್ಲ ಪ್ರಯಾಣಿಕರ ಹಿತಾಸಕ್ತಿಯನ್ನು ರಕ್ಷಿಸಲು ಮೊಬೈಲ್ ಫೋನ್ ಬಳಕೆಯ ಮೇಲೆ ನಿರ್ಬಂಧ ಹೇರಲಾಗಿದೆ. ಬಸ್‍ನೊಳಗೆ ಸುರಕ್ಷಿತ ಪ್ರಯಾಣವನ್ನು ಖಾತ್ರಿಗೊಳಿಸಲು ಹಾಗೂ ಅನಾರೋಗ್ಯಕರ ಮತ್ತು ಅಹಿತಕರ ವಾತಾವರಣವನ್ನು ತೊಡೆದು ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿದೆ ನಿಯಮ

ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ‍್ಥೆಗಳೆರಡೂ ಪ್ರಯಾಣಿಕರು ತಮ್ಮ ಬಸ್‍ಗಳಲ್ಲಿ ಸಂಗೀತ ಹಾಕುವುದು, ಸ್ಪೀಕರ್ ಹಾಕಿಕೊಂಡು ಸಿನಿಮಾಗಳನ್ನು ನೋಡುವುದನ್ನು ನಿಷೇಧಿಸಿದ್ದವು. ಅಲ್ಲದೆ ಈ ನಿಯಮವನ್ನು ಉಲ್ಲಂಘಿಸುವ ಪ್ರಯಾಣಿಕರನ್ನು ಬಸ್‍ನಿಂದ ಕೆಳಗಿಳಿಸಲಾಗುವುದು ಎಂದು ಪ್ರಕಟಿಸಿದ್ದವು.

ಇದನ್ನೂ ಓದಿ: KSRTC ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್: ಡಿಸೆಂಬರ್ 10 ರಿಂದಲೇ ನೂತನ ದರ ಅನ್ವಯ: ಎಷ್ಟು ಹೆಚ್ಚಾಗಿದೆ? ಇಲ್ಲಿದೆ ಮಾಹಿತಿ

ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಂದ ದೂರು

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಿಗೂ ಕೂಡಾ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಫೋನ್‍ಗಳಲ್ಲಿ ಸಂಗೀತ ಕೇಳುವುದು, ಸುದ್ದಿ ಮತ್ತು ಸಿನಿಮಾಗಳನ್ನು ನೋಡುವುದರ ವಿರುದ್ಧ ದೂರುಗಳು ಸಲ್ಲಿಕೆಯಾಗಿದ್ದವು. ಸಹ ಪ್ರಯಾಣಿಕರ ಇಂತಹ ವರ್ತನೆಗಳಿಂದ ತಮಗೆ ಕಿರಿಕಿರಿಯಾಗುತ್ತಿದೆ ಎಂದು ಹಲವು ಪ್ರಯಾಣಿಕರು ತಮ್ಮ ದೂರಿನಲ್ಲಿ ನಮೂದಿಸಿದ್ದರು.

ಇದನ್ನೂ ಓದಿ: Karnataka: KSRTC ಅಂದ್ರೆ ಇನ್ಮೇಲೆ ಕರ್ನಾಟಕ ಸಾರಿಗೆ ಅಲ್ಲ, ಕೇರಳ ಸಾರಿಗೆ

ಬಸ್​ನಲ್ಲಿ ಸಿನಿಮಾ ನೋಡುವುದರಿಂದ ಕಿರಿಕಿರಿ

ಈ ದೂರುಗಳನ್ನು ಆಧರಿಸಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳು ಬಸ್‍ಗಳಲ್ಲಿ ಸಂಗೀತ ಆಲಿಸಲು, ಸಿನಿಮಾ ಮತ್ತು ಸುದ್ದಿಗಳನ್ನು ನೋಡಲು ಇರುವ ನಿರ್ಬಂಧದ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವಂತೆ ಸಂಸ್ಥೆಗಳು ತಮ್ಮ ಚಾಲಕರು ಹಾಗೂ ನಿರ್ವಾಹಕರಿಗೆ ಸೂಚನೆ ನೀಡಿದ್ದವು. ಹೀಗಿದ್ದೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಳಿ ಇಂತಹ ದೂರುಗಳ ಸಂಖ್ಯೆಯ ಬಗ್ಗೆ ಯಾವುದೇ ದತ್ತಾಂಶ ಲಭ್ಯವಿಲ್ಲ.

ಕರ್ನಾಟಕಲ್ಲಿ ಈಗಾಗಲೇ ನಿಯಮ ಜಾರಿಯಲ್ಲಿದ್ದು, ಕೇರಳದಲ್ಲಿ ಈಗ ಹೊಸದಾಗಿ ಜಾರಿಯಾಗಿದೆ. ಈ ಮೂಲಕ ಸಾರ್ವಜನಿಕ ಸಾರಿಗೆಯ ಪ್ರಯಾಣದ ಗುಣಮಟ್ಟವನ್ನು ಹೆಚ್ಚಿಸುವ ಹೆಜ್ಜೆ ಇಟ್ಟಿದೆ ಕೇರಳ ಸರಕಾರ.
Published by:Divya D
First published: