• Home
  • »
  • News
  • »
  • national-international
  • »
  • ಸದನದಲ್ಲಿ ಕಾಂಗ್ರೆಸ್​ನವರು ತಕರಾರು ಮಾಡಿದ್ರೆ ನಾವೇನು ಸುಮ್ಮನೆ ಕೂರ್ತೀವಾ?; ಕೆ.ಎಸ್. ಈಶ್ವರಪ್ಪ ಸವಾಲು

ಸದನದಲ್ಲಿ ಕಾಂಗ್ರೆಸ್​ನವರು ತಕರಾರು ಮಾಡಿದ್ರೆ ನಾವೇನು ಸುಮ್ಮನೆ ಕೂರ್ತೀವಾ?; ಕೆ.ಎಸ್. ಈಶ್ವರಪ್ಪ ಸವಾಲು

ಸಚಿವ ಕೆ.ಎಸ್​. ಈಶ್ವರಪ್ಪ

ಸಚಿವ ಕೆ.ಎಸ್​. ಈಶ್ವರಪ್ಪ

ದೆಹಲಿ ಗಲಭೆಗೆ ಬಿಜೆಪಿ ಕಾರಣ ಅಲ್ಲ. ರಾಷ್ಟ್ರದ್ರೋಹಿಗಳು ಈ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಸಹಾಯ ಮಾಡುತ್ತಿದೆ. ದೊರೆಸ್ವಾಮಿಯವರು ಕಾಂಗ್ರೆಸ್ ಪಕ್ಷದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಸಚಿವ ಕೆ.ಎಸ್​. ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.

  • Share this:

ಬೆಂಗಳೂರು (ಫೆಬ್ರವರಿ 28); ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಶಾಸಕ ಯತ್ನಾಳ್ ಕ್ಷಮೆ ಕೇಳದಿದ್ದರೆ ಸದನದ ಕಲಾಪವನ್ನು ನಡೆಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಬೆದರಿಕೆ ಹಾಕಿದ್ದಾರೆ. ಅವರು ಹೇಗೆ ಸದನ ನಡೆಸಲು ಬಿಡಲ್ಲ ಅಂತ ನಾವೂ ನೋಡ್ತೇವೆ. ಸದನದಲ್ಲಿ ಅವರು ತಕರಾರು ಮಾಡಿದ್ರೆ ನಾವೇನು ಸುಮ್ನೆ ಇರ್ತೀವಾ? ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್​ ನಾಯಕರಿಗೆ ಸವಾಲು ಹಾಕಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದು ಟೀಕಿಸಿದ್ದರು. ಯತ್ನಾಳ್ ಅವರ ಹೇಳಿಕೆ ವಿರುದ್ಧ ಸಿಡಿದೆದ್ದಿದ್ದ ಕಾಂಗ್ರೆಸ್ “ಶಾಸಕ ಯತ್ನಾಳ್ ತಮ್ಮ ಹೇಳಿಕೆಗೆ ದೊರೆಸ್ವಾಮಿ ಅವರ ಬಳಿ ಕ್ಷಮೆ ಕೇಳಲೇಬೇಕು. ಇಲ್ಲದಿದ್ದರೆ ಈ ಬಾರಿಯ ಸದನವನ್ನು ನಡೆಸಲು ಬಿಡುವುದಿಲ್ಲ” ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.

ಈ ಕುರಿತು ಇಂದು ಅಮೂಲ್ಯ ಹಾಗೂ ಇತರೆ ಪ್ರಗತಿಪರರ ಜೊತೆ ದೊರೆಸ್ವಾಮಿ ಯಾವ ರೀತಿಯ ಸಂಬಂಧ ಹೊಂದಿದ್ದಾರೆ ನೋಡಿ ಎನ್ನುತ್ತಾ ಫೋಟೋ ಬಿಡುಗಡೆ ಮಾಡುವ ಮೂಲಕ ಕಿಡಿಕಾರಿರುವ ಈಶ್ವರಪ್ಪ, “ನಮಗೆ ದೊರೆಸ್ವಾಮಿ ಅವರ ಬಗ್ಗೆ ಅಪಾರವಾದ ಗೌರವ ಇದೆ. ಆದ್ರೆ ಅವರು ಅಮೂಲ್ಯಾ ಮನೆಗೆ ಹೋಗಿ ಬಂದಿದ್ದಾರೆ. ಯತ್ನಾಳ್ ಹೇಳಿಕೆಯನ್ನೇ ಇಷ್ಟು ದೊಡ್ಡದು ಮಾಡುತ್ತಿರುವ ಕಾಂಗ್ರೆಸ್​ನವರು ದೊರೆಸ್ವಾಮಿ ಮತ್ತು ಅಮೂಲ್ಯಾಗೆ ಏನು ಸಂಬಂಧ? ಎಂಬುದನ್ನು ಸ್ಪಷ್ಟಪಡಿಸಲಿ.

ದೆಹಲಿ ಗಲಭೆಗೆ ಬಿಜೆಪಿ ಕಾರಣ ಅಲ್ಲ. ರಾಷ್ಟ್ರದ್ರೋಹಿಗಳು ಈ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಾಂಗ್ರೆಸ್ ಸಹಾಯ ಮಾಡುತ್ತಿದೆ. ದೊರೆಸ್ವಾಮಿಯವರು ಕಾಂಗ್ರೆಸ್ ಪಕ್ಷದವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ಸಂದರ್ಭದಲ್ಲಿ ಸದನದ ಕಲಾಪಕ್ಕೆ ಅಡ್ಡಿಪಡಿಸುವ ಕಾಂಗ್ರೆಸ್ ಬೆದರಿಕೆಗೆ ಉತ್ತರ ನೀಡಿರುವ ಅವರು, “ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯನ್ನು ಕೊಲೆಗಡುಕ ಎಂದು ನಿಂದಿಸಿದ್ದರು, ಅವತ್ತೇ ಅವರನ್ನು ಪಕ್ಷದಿಂದ ಹೊರಹಾಕಬೇಕಿತ್ತು. ಆದರೆ, ಅಂದು ಆ ಕೆಲಸ ಮಾಡದ ಕಾಂಗ್ರೆಸ್ ಇದು ಯತ್ನಾಳ್ ಕ್ಷಮೆಗೆ ಆಗ್ರಹಿಸುತ್ತಿದೆ. ಅವರು ಅದು ಹೇಗೆ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಾರೆ ಎಂದು ನಾವೂ ನೊಡ್ತೀವಿ, ಕಾಂಗ್ರೆಸ್​ ನಾಯಕರು ತಕರಾರು ಮಾಡಿದ್ರೆ ನಾವೇನು ಸುಮ್ಮನೆ ಕೂರ್ತೀವಾ?” ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ರಮೇಶ್​ ಕುಮಾರ್ ಸತ್ಯಹರಿಶ್ಚಂದ್ರನ ಸಂತತಿಯಾ? ದೇವೇಗೌಡರು ಸ್ವಾತಂತ್ರ್ಯ ಹೋರಾಟಗಾರರಾ?; ಯತ್ನಾಳ್​ ಲೇವಡಿ

First published: