ಕೃಷ್ಣಮೂರ್ತಿ ಸುಬ್ರಮಣಿಯನ್ ನೂತನ ಮುಖ್ಯ ಆರ್ಥಿಕ ಸಲಹೆಗಾರ

ವಿಶ್ವದ ಪ್ರಮುಖ ಹಣಕಾಸು ಮತ್ತು ಆರ್ಥಿಕ ತಜ್ಞರಲ್ಲೊಬ್ಬರೆನಿಸಿದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು 3 ವರ್ಷಗಳ ಕಾಲ ಅಧಿಕಾರ ಹೊಂದಲಿದ್ದಾರೆ.

Vijayasarthy SN | news18india
Updated:December 7, 2018, 5:32 PM IST
ಕೃಷ್ಣಮೂರ್ತಿ ಸುಬ್ರಮಣಿಯನ್ ನೂತನ ಮುಖ್ಯ ಆರ್ಥಿಕ ಸಲಹೆಗಾರ
ಕೃಷ್ಣಮೂರ್ತಿ ಸುಬ್ರಮಣಿಯನ್
Vijayasarthy SN | news18india
Updated: December 7, 2018, 5:32 PM IST
ನವದೆಹಲಿ(ಡಿ. 07): ಆರು ತಿಂಗಳಿನಿಂದ ತೆರವಾಗಿದ್ದ ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಗೆ ಕೃಷ್ಣಮೂರ್ತಿ ಸುಬ್ರಮಣಿಯನ್ ನೇಮಕವಾಗಿದ್ದಾರೆ. ಹೈದರಾಬಾದ್​ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್​ನ ಪ್ರೊಫೆಸರ್ ಆಗಿರುವ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಮುಂದಿನ 3 ವರ್ಷಗಳವರೆಗೆ ಸಿಇಎ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಅಮೆರಿಕದ ಚಿಕಾಗೋ ಬೂತ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಡಾಕ್ಟೋರೇಟ್ ಗೌರವ ಪಡೆದಿರುವ ಕೃಷ್ಣ ಮೂರ್ತಿ ಅವರು ಬ್ಯಾಂಕಿಂಗ್, ಕಾರ್ಪೊರೇಟ್ ಗವರ್ನೆನ್ಸ್ ಮತ್ತು ಆರ್ಥಿಕ ನೀತಿ ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿಯ ತಜ್ಞರಲ್ಲಿ ಒಬ್ಬರೆನಿಸಿದ್ಧಾರೆ. ಈ ವಿಚಾರಗಳ ಬಗ್ಗೆ ಇವರು ಬರೆದ ಸಂಶೋಧನಾ ಪ್ರಬಂಧಗಳು ವಿಶ್ವದ ಪ್ರಮುಖ ಜರ್ನಲ್​ಗಳಲ್ಲಿ ಮುದ್ರಿತವಾಗಿವೆ.

ಭಾರತದ ಸೆಬಿ ಮತ್ತು ಆರ್​ಬಿಐನ ವಿವಿಧ ತಜ್ಞ ಸಮಿತಿಗಳ ಸದಸ್ಯರಾಗಿ ಕೃಷ್ಣಮೂರ್ತಿ ಸುಬ್ರಮಣಿಯನ್ ಸೇವೆ ಸಲ್ಲಿಸಿ ಗಮನ ಸೆಳೆದಿದ್ದಾರೆ. ಜೆಪಿಮಾರ್ಗನ್ ಚೇಸ್, ಐಸಿಐಸಿಐ ಮೊದಲಾದ ಸಂಸ್ಥೆಗಳಲ್ಲೂ ಇವರು ಹಣಕಾಸು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಅರವಿಂದ್ ಸುಬ್ರಮಣಿಯನ್ ಅವರು ವೈಯಕ್ತಿಕ ಕಾರಣ ನೀಡಿ ಕೇಂದ್ರ ಹಣಕಾಸು ಇಲಾಖೆಯ ಮುಖ್ಯ ಆರ್ಥಿಕ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಿದ್ದರು. 2014ರಲ್ಲಿ ಅಧಿಕಾರ ಹಿಡಿದ ಇವರ ಅವಧಿಯಲ್ಲೇ ನೋಟ್ ಬ್ಯಾನ್, ಜಿಎಸ್​ಟಿ, ಆಧಾರ್-ಜನ್​ಧನ್ ಮೊದಲಾದ ಪ್ರಮುಖ ಕ್ರಮಗಳನ್ನ ಜಾರಿಗೊಳಿಸಲಾಗಿತ್ತು. ಈಗ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ಆರ್ಥಿಕ ಸಲಹೆಗಾರರಾಗಿರುವ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಮುಂದೆ ಹಲವು ಸವಾಲುಗಳಿವೆ. ಹಣಕಾಸು ಮತ್ತು ಆರ್ಥಿಕ ತಜ್ಞರಾಗಿ ಇವರು ಯಾವ ರೀತಿ ಪರಿಸ್ಥಿತಿ ನಿಭಾಯಿಸುತ್ತಾರೆಂಬುದು ಕುತೂಹಲ ಮೂಡಿಸಿದೆ.
First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...