Krishna Janmabhoomi Case: ಮಥುರಾದ ಮೀನಾ ಮಸೀದಿ ತೆರವು ಕೋರಿ ನ್ಯಾಯಾಲಯಕ್ಕೆ ಅರ್ಜಿ

ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿರುವ ಮೀನಾ ಮಸೀದಿ ತೆರವು ಕೋರಿ  ಅಖಿಲ ಭಾರತ ಹಿಂದೂ ಮಹಾಸಭಾದ (Hindhu Mahasabha) ರಾಷ್ಟ್ರೀಯ ಕೋಶಾಧಿಕಾರಿ ದಿನೇಶ್ ಶರ್ಮಾ ಎಂಬವರು ಮೀನಾ ಮಸೀದಿಯನ್ನು ತೆರವುಗೊಳಿಸುವಂತೆ   ಮಥುರಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮಸೀದಿ, ಕೃಷ್ಣದೇವಾಲಯ

ಮಸೀದಿ, ಕೃಷ್ಣದೇವಾಲಯ

  • Share this:
ವಾರಣಾಸಿಯ ಜ್ಞಾನವಾಪಿ (Gyanvapi) ಮಸೀದಿ ವಿವಾದದ ಬೆನ್ನಲೇ, ಇದೀಗ ಮೊಘಲರ ಕಾಲದಲ್ಲಿ ನಿರ್ಮಾಣವಾದ ಮಥುರಾದ ಮೀನಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ (Court) ಅರ್ಜಿ ಸಲ್ಲಿಸಲಾಗಿದೆ. ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿರುವ ಮೀನಾ ಮಸೀದಿ ತೆರವು ಕೋರಿ  ಅಖಿಲ ಭಾರತ ಹಿಂದೂ ಮಹಾಸಭಾದ (Hindhu Mahasabha) ರಾಷ್ಟ್ರೀಯ ಕೋಶಾಧಿಕಾರಿ ದಿನೇಶ್ ಶರ್ಮಾ ಎಂಬವರು ಮೀನಾ ಮಸೀದಿಯನ್ನು ತೆರವುಗೊಳಿಸುವಂತೆ   ಮಥುರಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣದ ಪೂರ್ವ ಭಾಗದಲ್ಲಿರುವ ಠಾಕೂರ್ ಕೇಶವ್ ದೇವ್ ಜಿ ದೇವಸ್ಥಾನದ ಒಂದು ಭಾಗದಲ್ಲಿ ಮಸೀದಿಯನ್ನು(Masidi) ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಅಖಿಲ ಭಾರತ ಹಿಂದೂ ಮಹಾಸಭಾದ (ABHM) ರಾಷ್ಟ್ರೀಯ ಖಜಾಂಚಿ ದಿನೇಶ್ ಶರ್ಮಾ ಅವರು ಕೃಷ್ಣನ ಭಕ್ತ ಮತ್ತು ಅವರ ‘ವಾದ್ ಮಿತ್ರ’ ಎಂದು ಮೊಕದ್ದಮೆ ಹೂಡಿದ್ದಾರೆ. ಮಥುರಾದ ಹಿರಿಯ ಸಿವಿಲ್ ವಿಭಾಗದ ನ್ಯಾಯಾಧೀಶರಾದ ಜ್ಯೋತಿ ಸಿಂಗ್ ಅವರ ಪೀಠಕ್ಕೆ ದಾವೆ ಸಲ್ಲಿಸಲಾಗಿದೆ.

ಮಥುರಾದ ಶಾಹಿ ಮಸೀದಿ ಈದ್ಗಾವನ್ನು ಸ್ಥಳಾಂತರ ಕೋರಿಕೆ

ಮಥುರಾದ ಶಾಹಿ ಮಸೀದಿ ಈದ್ಗಾವನ್ನು ಸ್ಥಳಾಂತರಿಸುವಂತೆ ಕೋರಿ ಈಗಾಗಲೇ ವಿವಿಧ ಮಥುರಾ ನ್ಯಾಯಾಲಯಗಳಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಇದು ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಅರ್ಜಿದಾರರು ಮಸೀದಿಯನ್ನು 13.37 ಎಕರೆ ಪ್ರದೇಶದಲ್ಲಿ ಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಮಂಡಿಸಿದ್ದಾರೆ. ಶರ್ಮಾ ಈ ಹಿಂದೆಯೂ ಕೂಡ ಶ್ರೀಕೃಷ್ಣ ಜನ್ಮಭೂಮಿ ಪಕ್ಕದಲ್ಲಿರುವ ಶಾಹಿ ಮಸೀದಿ ಈದ್ಗಾವನ್ನು ತೆಗೆಯುವಂತೆ ಕೋರಿ ಪ್ರಕರಣ ದಾಖಲಿಸಿದ್ದರು. ಈ ಬಾರಿ ಹೊಸ ಅರ್ಜಿಯಲ್ಲಿ, ಶರ್ಮಾ ಅವರು ಪ್ರಕರಣದಲ್ಲಿ 'ಅರ್ಜಿದಾರರ ಸಂಖ್ಯೆ 1' ಎಂದು ಶ್ರೀಕೃಷ್ಣನ ಇನ್ನೊಂದು ಹೆಸರಾದ ಠಾಕೂರ್ ಕೇಶವ್ ದೇವ್ ಜಿ ಮಹಾರಾಜ್ ಅವರ ಭಕ್ತ ಎಂದು ಹೇಳಿಕೊಂಡಿದ್ದಾರೆ.

 ಮೊಕದ್ದಮೆಯ ಮೂಲ ಉದ್ದೇಶ"
“ಶ್ರೀ ಕೃಷ್ಣ ಜನ್ಮಭೂಮಿ ಆಗಿರುವ ಮಥುರಾ ನಗರದಲ್ಲಿ 13.37 ಎಕರೆ ಭೂಮಿಯನ್ನು ಹೊಂದಿರುವ ಭಗವಂತ ಶ್ರೀ ಕೃಷ್ಣನ ಆಸ್ತಿಯನ್ನು ರಕ್ಷಿಸುವುದು ಮೊಕದ್ದಮೆಯ ಮೂಲ ಉದ್ದೇಶವಾಗಿದೆ. ನಾವು ಈಗ ವೃಂದಾವನ ರೈಲುಮಾರ್ಗದ ಬಳಿ ದೀಗ್ ಗೇಟ್‌ನಲ್ಲಿ ದೇವರ ಒಡೆತನದ ಜಮೀನಿನಲ್ಲಿ ಇರುವ ಮಿನಾ ಮಸೀದಿಯ ಹೆಸರಿನಲ್ಲಿ ನಿರ್ಮಿಸಿರುವ ನಿರ್ಮಾಣವನ್ನು ತೆಗೆದುಹಾಕಲು ಕೋರಿದ್ದೇವೆ.” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜನ್ಮಾಷ್ಟಮಿಯಂದು ಮಥುರಾದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಕಾಲ್ತುಳಿತ, 2 ಭಕ್ತರು ಸಾವು

ಅಕ್ಟೋಬರ್ 26ಕ್ಕೆ ವಿಚಾರಣೆ

ಹೊಸ ಮೊಕದ್ದಮೆಯ ಪ್ರತಿವಾದಿಗಳಾಗಿ ಲಕ್ನೋದ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಅಧ್ಯಕ್ಷರು ಮತ್ತು ಮಥುರಾದ ಮಿನಾ ಮಸೀದಿ (ಡೀಗ್ ಗೇಟ್)ಯ ಇಂಟೆಝಾಮಿಯಾ ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ. ಇನ್ನೂ ಪ್ರಕರಣದ ವಿಚಾರಣೆಗೆ ನ್ಯಾಯಾಲಯವು ಅಕ್ಟೋಬರ್ 26 ಅನ್ನು ನಿಗದಿಪಡಿಸಿದೆ ಎಂದು ಅರ್ಜಿದಾರರ ವಕೀಲ ದೀಪಕ್ ಶರ್ಮಾ ಹೇಳಿದರು.

ಆಕ್ಷೇಪ ವ್ಯಕ್ತಪಡಿಸಿದ ಭಕ್ತವೃಂದ

ಮೊಘಲ್ ಚಕ್ರವರ್ತಿ ಔರಂಗಜೇಬ್ ದೇವಾಲಯವನ್ನು ಧ್ವಂಸಗೊಳಿಸಿದ ಅದೇ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಮಥುರಾದಲ್ಲಿ ಸುಮಾರು ಹನ್ನೆರಡು ಪ್ರಕರಣಗಳಲ್ಲಿ, ಶ್ರೀ ಕೃಷ್ಣ ಜನ್ಮಭೂಮಿ ಪರವಾಗಿ ಹಾಜರಾದ ಅರ್ಜಿದಾರರು ಅಕ್ಟೋಬರ್ 12, 1968 ರಂದು ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಮಸೀದಿ ಈದ್ಗಾ ನಡುವಿನ ಇತ್ಯರ್ಥವನ್ನು ಪ್ರಶ್ನಿಸಿದ್ದಾರೆ. ಶಾಹಿ ಮಸೀದಿ ಈದ್ಗಾದ ಆಡಳಿತ ಸಮಿತಿಯು ಈ ಅರ್ಜಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, 1968 ರಲ್ಲಿ ರಾಜಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಅರ್ಜಿ ವಿಚಾರಣೆಗೆ ನ್ಯಾಯಾಲಯ ಕಾಲಾವಕಾಶ ಪಡೆದುಕೊಂಡಿದೆ.

ಇದನ್ನೂ ಓದಿ:  ‘ಕೃಷ್ಣಜನ್ಮ ಭೂಮಿಯಲ್ಲಿನ ಮಸೀದಿ ತೆರವು ಮಾಡಿ’ ಅರ್ಜಿ ಅಂಗೀಕರಿಸಿದ ಕೋರ್ಟ್

ಸೆ. 22ಕ್ಕೆ ಜ್ಞಾನವಾಪಿ ಮಸೀದಿ ಕುರಿತ ಮುಂದಿನ ವಿಚಾರಣೆ
ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಜ್ಞಾನವಾಪಿ ಮಸೀದಿಯಲ್ಲಿ ಪ್ರತಿದಿನ ಹಿಂದೂ ದೇವತೆಗಳ ಪೂಜೆಗೆ ಅನುಮತಿ ನೀಡುವಂತೆ ಹಿಂದೂ ಆರಾಧಕರು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಈಗಾಗ್ಲೇ ಸಾಕಷ್ಟು ವಿಚಾರಣೆಗಳು ನಡೆಯುತ್ತಿವೆ. ಪ್ರಕರಣದ ಮುಂದಿನ ವಿಚಾರಣೆ ಸೆ. 22 ರಂದು ನಡೆಯಲಿದೆ.
First published: