KPCL Recruitment 2020: ಸ್ಟಾಫ್​​ ನರ್ಸ್​, ಲ್ಯಾಬ್​ ಟೆಕ್ನೀಶಿಯನ್​ ಹುದ್ದೆಗಳಿಗೆ ಅರ್ಜಿ ಆಹ್ವಾನ!

ವೇತನ: ಸ್ಟಾಫ್ ನರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 27,450/-ರೂ ವೇತನ  ಸಿಗಲಿದೆ

work, Job

work, Job

  • Share this:
    ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ರಾಯಚೂರಿನ ಶಕ್ತಿನಗರ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಖಾಲಿ ಇರುವ ಸ್ಟಾಫ್​ ನರ್ಸ್​, ಆಫ್ತಾಲ್ಮೊಜಿಸ್ಟ್, ಲ್ಯಾಬ್ ಟೆಕ್ನೀಶಿಯನ್, ಎಕ್ಸ್-ರೇ ಟೆಕ್ನೀಶಿಯನ್ ಮತ್ತು ಫಾರ್ಮಾಸಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ತಿಳಿಸಿದೆ.

    ಹುದ್ದೆಗಳು:

    ಸ್ಟಾಫ್​ ನರ್ಸ್​-08

    ಆಫ್ತಾಲ್ಮೊಜಿಸ್ಟ್-01

    ಲ್ಯಾಬ್ ಟೆಕ್ನೀಶಿಯನ್-01

    ಎಕ್ಸ್-ರೇ ಟೆಕ್ನೀಶಿಯನ್-01

    ಫಾರ್ಮಾಸಿಸ್ಟ್-01

    ವಿದ್ಯಾರ್ಹತೆ:  ಡಿಪ್ಲೋಮಾ ಇನ್ ಆಫ್ತಾಲ್ಮಿಕ್ ಟೆಕ್ನಿಕ್, ಬಿ.ಎಸ್ಸಿ (ನರ್ಸಿಂಗ್)/ ಡಿಪ್ಲೊಮಾ ಇನ್ ನರ್ಸಿಂಗ್, ಡಿಪ್ಲೋಮಾ ಇನ್ ಮೆಡಿಕಲ್ ಎಕ್ಸ್-ರೇ ಟೆಕ್ನಾಲಜಿ ಮತ್ತು ಫಾರ್ಮಾಸಿ ಯಲ್ಲಿ ಪದವಿ/ ಡಿಪ್ಲೋಮಾ ಇನ್ ಫಾರ್ಮಾಸಿ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ಪದವಿ/ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ವಿದ್ಯಾರ್ಹತೆಯನ್ನು ಪಡೆದ ಬೋರ್ಡ್ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

    ವೇತನ: ಸ್ಟಾಫ್ ನರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 27,450/-ರೂ ವೇತನ  ಸಿಗಲಿದೆ.  ಇತರೆ ಹುದ್ದೆಗಳಿಗೆ ಕರ್ನಾಟಕ ಸರ್ಕಾರ ಕನಿಷ್ಟ ವೇತನ ಕಾಯ್ದೆಯನ್ವಯ ಕಾಲಕಾಲಕ್ಕೆ ನಿಗದಿಪಡಿಸುವ ಮಾಸಿಕ ವೇತನ ನೀಡಲಾಗುವುದು.

    ಅರ್ಜಿ ಸಲ್ಲಿಕೆ:  ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಲಗತ್ತಿಸಿ ನವೆಂಬರ್ 14,2020ರೊಳಗೆ ಅರ್ಜಿಯನ್ನು ಕಚೇರಿಗೆ ತಲುಪಿಸಬೇಕು. 
    Published by:Harshith AS
    First published: