ನವದೆಹಲಿ (ಅ. 26): ಭಾರತದ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕೋಟಕ್ ಮಹೀಂದ್ರ ಬ್ಯಾಂಕ್ ಲಿಮಿಟೆಡ್ ಇಂಡಸ್ಇಂಡ್ ಬ್ಯಾಂಕ್ ಅನ್ನು ಸ್ವಾಧೀನಕ್ಕೆ ಪಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಒಂದುವೇಳೆ ಇದು ನಿಜವಾದರೆ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ನ ವ್ಯಾಪ್ತಿ ಇನ್ನಷ್ಟು ವಿಸ್ತರಿಸಲಿದೆ. ಇಂಡಸ್ಇಂಡ್ ಬ್ಯಾಂಕ್ ಲಿಮಿಟೆಡ್ ಈಗಾಗಲೇ ಕೋಟಕ್ ಮಹೀಂದ್ರ ಬ್ಯಾಂಕ್ ಜೊತೆ ವಿಲೀನವಾಗುವ ಬಗ್ಗೆ ಮಾತುಕತೆ ನಡೆಸಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೋಟಕ್ ಮಹೀಂದ್ರ ಬ್ಯಾಂಕ್ ಇದು ವೈಯಕ್ತಿಕ ಹಣಕಾಸು, ಹೂಡಿಕೆ ಬ್ಯಾಂಕಿಂಗ್, ಜೀವ ವಿಮೆ, ಮತ್ತು ಸಂಪತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಕಾರ್ಪೊರೇಟ್ ಮತ್ತು ಚಿಲ್ಲರೆ ಗ್ರಾಹಕರಿಗೆ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಹಣಕಾಸು ಸೇವೆಗಳನ್ನು ಒದಗಿಸುತ್ತದೆ. ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಇಂಡಸ್ಇಂಡ್ ಬ್ಯಾಂಕ್ ವಿಲೀನದ ಬಗ್ಗೆ ಭಾನುವಾರ ಸಂಜೆಯಿಂದ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇಂಡಸ್ಇಂಡ್ನ ಮಾರುಕಟ್ಟೆ ಬೆಲೆ ಸುಮಾರು 50 ಸಾವಿರ ಕೋಟಿ ಇದೆ ಎನ್ನಲಾಗಿದೆ.
ಇದನ್ನೂ ಓದಿ: Mysore Dasara 2020: ಇಂದು ದಸರಾ ಜಂಬೂಸವಾರಿ; ಮೈಸೂರು ಅರಮನೆ ಸುತ್ತ ನಿಷೇಧಾಜ್ಞೆ ಜಾರಿ
ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಕೋಟಕ್ ಮಹೀಂದ್ರಾ ಗ್ರೂಪ್ನ ಚೀಫ್ ಕಮ್ಯುನಿಕೇಷನ್ ಆಫೀಸರ್ ರೋಹಿತ್ ರಾವ್, ಇಂಡಸ್ಇಂಡ್ ಬ್ಯಾಂಕ್ ಅನ್ನು ಸ್ವಾಧೀನಕ್ಕೆ ಪಡೆಯುವ ಬಗ್ಗೆ ನಾವು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಇಂಡಸ್ಇಂಡ್ ಬ್ಯಾಂಕ್ನ ಅಧಿಕಾರಿಗಳು ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇದು ವದಂತಿಯಾಗಿದ್ದು, ವಿನಾಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದಿದ್ದಾರೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ