ಇತ್ತೀಚಿನ ದಿನಗಳಲ್ಲಿ ಕೊಲೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಶೋಷಣೆ ಮುಂತಾದ ಅಪರಾಧಗಳು (Crime) ದಿನೇ ದಿನೇ ಹೆಚ್ಚಾಗುತ್ತಾನೆ ಇದೆ. ಸರ್ಕಾರ ಎಷ್ಟೇ ಕಡಿವಾಣ ಹಾಕಿದರೂ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಅದರಲ್ಲೂ ಮಹಿಳೆಯರಿಗೆ ಕೊಡುವ ಲೈಂಗಿಕ ಕಿರುಕುಳ ( Harassment ) ಶೋಷಣೀಯ ಎಂದರೆ ತಪ್ಪಾಗಲಾರದು. ವಾಣಿಜ್ಯ ನಗರಿಯಾದ ಮುಂಬೈನಲ್ಲಿ(Mumbai) ವಿದೇಶಿ ಮಹಿಳೆಯೊಬ್ಬರಿಗೆ ( foreign woman) ಇಬ್ಬರು ವ್ಯಕ್ತಿಗಳು ಲೈಂಗಿಕ ಕಿರುಕುಳ ಕೊಟ್ಟ ಘಟನೆ ನಡೆದಿದೆ. ವಿದೇಶಿ ಮಹಿಳೆ ಮೂಲತಃ ದಕ್ಷಿಣ ಕೊರಿಯಾದವರು.(Korean ) ಇವರು ಯೂಟ್ಯೂಬರ್ (Youtuber) ಆಗಿದ್ದಾರೆ.
ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ
ಮುಂಬೈನ ಖಾರ್ ಪ್ರದೇಶದಲ್ಲಿ ದಕ್ಷಿಣ ಕೊರಿಯಾದ ಮಹಿಳೆ ಯೂಟ್ಯೂಬರ್ಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರನ್ನು ಮುಂಬೈ ಪೊಲೀಸರು (ಡಿ. 01 ) ಬಂಧಿಸಿದ್ದಾರೆ. ಮೊಬೀನ್ ಚಂದ್ ಮೊಹಮ್ಮದ್ ಶೇಖ್(19) ಮತ್ತು ಮೊಹಮ್ಮದ್ ನಕೀಬ್ ಸದರಿಯಾಲಂ ಅನ್ಸಾರಿ(20) ಬಂಧಿತ ಆರೋಪಿಗಳಾಗಿದ್ದಾರೆ.
ವಿಡಿಯೋದಲ್ಲಿ ಏನಿದೆ?
ವೈರಲ್ ವಿಡಿಯೋದಲ್ಲಿ ಇರುವಂತೆ ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ ಕೊರಿಯನ್ ಯೂಟ್ಯೂಬರ್ ಮಹಿಳೆಗೆ ಇಬ್ಬರು ವ್ಯಕ್ತಿಗಳಾದ ಮೊಬೀನ್ ಚಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ, ಕಿರುಕುಳ ನೀಡಿದ್ದಾರೆ. ಇದಲ್ಲದೆ ಮಹಿಳೆಯ ಕೈ ಹಿಡಿದು ಎಳೆದು ಮುತ್ತು ಕೊಡಲು ಪ್ರಯತ್ನಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
@MumbaiPolice A streamer from Korea was harassed by these boys in Khar last night while she was live streaming in front of a 1000+ people. This is disgusting and some action needs to be taken against them. This cannot go unpunished. pic.twitter.com/WuUEzfxTju
— Aditya (@Beaver_R6) November 30, 2022
ಇದನ್ನೂ ಓದಿ: Viral Video: ಅಬ್ಬಬ್ಬಾ! ಇಂಥಾ ಮಹಿಳೆಯರು ಕೂಡ ಇರ್ತಾರಾ? ಈ ವಿಡಿಯೋ ನೋಡಿದ್ರೆ ನೀವೂ ಬೈಯ್ತೀರಿ!
ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ ?
ಮುಂಬೈನ ಖಾರ್ (ಪಶ್ಚಿಮ) ಪ್ರದೇಶದಲ್ಲಿ ಸೆಲ್ಫಿ ಸ್ಟಿಕ್ ಬಳಸಿ ವಿಡಿಯೋ ಚಿತ್ರೀಕರಿಸುತ್ತಿದ್ದಾಗ "ಇಬ್ಬರು ವ್ಯಕ್ತಿಗಳು ಬಂದು ನನ್ನ ವಯಸ್ಸು ಕೇಳಿದರು. ಇದಲ್ಲದೆ ಒಬ್ಬ ವ್ಯಕ್ತಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ” ಎಂದು ಮಹಿಳೆ ಹೇಳಿದ್ದಾರೆ. ಮಹಿಳೆಯು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. “ಆ ವ್ಯಕ್ತಿಯು ತನ್ನ ಸ್ನೇಹಿತನೊಂದಿಗೆ ಇದ್ದ” ಎಂದು ಮಹಿಳೆ ಟ್ವೀಟ್ ಮಾಡಿ ಮುಂಬೈ ಪೊಲೀಸ್ ಅವರಿಗೆ ತನ್ನನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾಳೆ. ಇದಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಕೇಸ್ ದಾಖಲು
ವಿದೇಶಿ ಮಹಿಳೆಗೆ ಕಿರುಕುಳ ನೀಡಿದ ಇಬ್ಬರು ಆರೋಪಿಗಳಾದ ಮೊಬೀನ್ ಚಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯರ ಮೇಲಿನ ದೌರ್ಜನ್ಯ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಈ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಾಹಿತಿಯ ಪ್ರಕಾರ "ಖಾರ್ ವೆಸ್ಟ್ ವ್ಯಾಪ್ತಿಯಲ್ಲಿ ಕೊರಿಯನ್ ಮಹಿಳೆ(ವಿದೇಶಿ) ಜೊತೆ ಸಂಭವಿಸಿದ ಘಟನೆಯಲ್ಲಿ ಮುಂಬೈ ಪೊಲೀಸರು ಖಾರ್ ಪೊಲೀಸ್ ಠಾಣೆ ಸುವೋ ಮೋಟೋ ಕ್ರಮ ಕೈಗೊಂಡಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿ ಸಂಬಂಧಿತ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಟ್ವಿಟ್ಟರ್ ಅಧಿಕೃತ ಖಾತೆಯಲ್ಲಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ