ಕೋಲ್ಕತಾ: ಹಳಸಿದ ಬಿರಿಯಾನಿ ಬಡಿಸಿದ ಕಾರಣಕ್ಕೆ ಹಲ್ಲೆಗೊಳಗಾದ 48 ವರ್ಷ ಮಹಿಳೆಯೊಬ್ಬರು ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯ ಮೇಲೆ ಆಕೆಯ ಅತ್ತಿಗೆಯೇ ಹಲ್ಲೆ ಎಸಗಿರುವುದು ತಿಳಿದುಬಂದಿದೆ. ಮೃತಪಟ್ಟ ಮಹಿಳೆ ಫಾಲ್ಗುಣಿ ಬಸು.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿ ಪ್ರಕಾರ, ಡಾಲ್ಹೌಸಿ ಪ್ರದೇಶದಲ್ಲಿ ಆರ್ಕಿಟೆಕ್ಚರ್ ಸಂಸ್ಥೆಯ ಒಡತಿಯಾಗಿರುವ ಹಲ್ಲೆ ಆರೋಪಿಯಾಗಿದ್ದಾಳೆ. ಫಾಲ್ಗುಣಿ ಬಸು ಬಡಿಸಿದ ಹಳಸಿದ ಬಿರಿಯಾನಿ ತಿಂದ ತನ್ನ ಮಗ ವಾಂತಿ ಮಾಡಿಕೊಳ್ಳಲು ಪ್ರಾರಂಭಿಸಿದ 40 ವರ್ಷದ ಆರೋಪಿ ಕೋಪಗೊಂಡು ಬಸು ಮೇಲೆ ಹಲ್ಲೆ ಮಾಡಿದ್ದಾಳೆ.
ಇದನ್ನೂ ಓದಿ : ಲವ್ ಜಿಹಾದ್ ಚರ್ಚೆ ನಡುವೆ ಇಷ್ಟಪಟ್ಟವರನ್ನು ಮದುವೆಯಾಗುವುದು ಮೂಲಭೂತ ಹಕ್ಕು ಎಂದ ಹೈ ಕೋರ್ಟ್
ನಂತರ ಫಾಲ್ಗುಣಿ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಯಲಿಲ್ಲ. ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದು ಇನ್ನಷ್ಟು ತನಿಖೆ ನಡೆಸುತ್ತಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ