Students Protest: ಶಿಕ್ಷಕರ ಮೇಲಿನ ಪ್ರೀತಿಗೆ ರೈಲನ್ನೇ ತಡೆದ ಚಿಕ್ಕ ಚಿಕ್ಕ ಮಕ್ಕಳು! ಪ್ರಯಾಣಿಕರು ಹೈರಾಣ

ನಾರಾಯಣಪುರ ಅಕ್ಷಯ ವಿದ್ಯಾಮಂದಿರದದ ಐವರು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿತ್ತು. ಇದು ವಿದ್ಯಾರ್ಥಿಗಳಲ್ಲಿ ಭಾರೀ ಸಿಟ್ಟು, ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಭಟನೆಯ ದೃಶ್ಯ

ಪ್ರತಿಭಟನೆಯ ದೃಶ್ಯ

  • Share this:
ಕೋಲ್ಕತ್ತಾ: ಶಾಲೆ ಕಲಿಸೋ ಟೀಚರ್ ಅಂದ್ರೆ ಮಕ್ಕಳಿಗೆ, ಮಕ್ಕಳ ಪೋಷಕರಿಗೂ ಪ್ರೀತಿ ಗೌರವ ಇರುತ್ತೆ. ಶಿಕ್ಷಕರ ವರ್ಗಾವಣೆ ಮಾಡ್ಬೇಡಿ ಅಂತ ಪ್ರತಿಭಟನೆ ನಡೆಸಿದ ಸುದ್ದಿಯನ್ನು ಕೇಳಿರುತ್ತೇವೆ, ಆದರೆ ಇದು ಅದಕ್ಕಿಂತ ದೊಡ್ಡ ಮಟ್ಟದಲ್ಲಿ ಶಿಕ್ಷಕರ ವರ್ಗಾವಣೆಯನ್ನು ಮಾಡಬೇಡಿ ಎಂದು ಪ್ರತಿಭಟಿಸಿದ ಘಟನೆ. ಕೋಲ್ಕತ್ತಾದ (Kolkatta) ಸೀಲ್ದಾಹ್ ದಕ್ಷಿಣ ವಿಭಾಗದ ಗೌರ್ದಾಹ್ ನಿಲ್ದಾಣದಲ್ಲಿ ರೈಲು ತಡೆ ಪ್ರತಿಭಟನೆ ನಡೆದಿದೆ. ಈ ರೈಲು ತಡೆದವರು ಬೇರೆ ಯಾರೊ ಆಗಿದ್ದರೆ ಈ ಸುದ್ದಿ ಇಷ್ಟು ಸಂಚಲನ ಮೂಡಿಸುತ್ತಿರಲಿಲ್ಲ. ಬದಲಿಗೆ, ರೈಲು ತಡೆಗಟ್ಟಿದವರು (Students Blocked Train in Kolkatta) ವಿದ್ಯಾರ್ಥಿಗಳು. ಕೋಲ್ಕತ್ತಾದ ಕ್ಯಾನಿಂಗ್‌ನಲ್ಲಿರುವ ಗೌರ್ದಾಹ್ ನಾರಾಯಣಪುರ ಅಕ್ಷಯ ವಿದ್ಯಾಮಂದಿರದ ವಿದ್ಯಾರ್ಥಿಗಳೇ ಈ ರೈಲು ತಡೆ ಸಾಹಸ ಕೈಗೊಂಡವರು.

ನಾರಾಯಣಪುರ ಅಕ್ಷಯ ವಿದ್ಯಾಮಂದಿರದದ ಐವರು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿತ್ತು. ಇದು ವಿದ್ಯಾರ್ಥಿಗಳಲ್ಲಿ ಭಾರೀ ಸಿಟ್ಟು, ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ನೆಚ್ಚಿನ ಶಿಕ್ಷಕರ ವರ್ಗಾವಣೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಬೆಳಗ್ಗೆ ಶಾಲಾ ಬಟ್ಟೆ ಧರಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ರೈಲು ತಡೆ ಪ್ರತಿಭಟನೆ ಮುಂದುವರೆಸುತ್ತೇವೆ; ವಿದ್ಯಾರ್ಥಿಗಳ ಎಚ್ಚರಿಕೆ
ಗೌರ್ದಾಹ್ ನಿಲ್ದಾಣದಲ್ಲಿ ರೈಲು ತಡೆದು ಐವರು ಶಿಕ್ಷಕರ ವರ್ಗಾವಣೆ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ರೈಲು ತಡೆ ಮುಂದುವರೆಸುವುದಾಗಿಯೂ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.  ಘಟನೆಯಿಂದ ನಿಲ್ದಾಣದ ಆವರಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ.

ವಿದ್ಯಾರ್ಥಿಗಳ ಬೇಡಿಕೆ ಏನು?
ನಮ್ಮ ಪ್ರದೇಶದಲ್ಲಿ ಹಲವಾರು ಶಾಲೆಗಳಿವೆ. ಪ್ರತಿ ಶಾಲೆಯಿಂದ ಒಬ್ಬ ಶಿಕ್ಷಕರನ್ನು ವರ್ಗಾವಣೆ ಮಾಡಿದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಒಂದು ಶಾಲೆಯಿಂದ ಐವರು ಶಿಕ್ಷಕರನ್ನು ವರ್ಗಾವಣೆ ಮಾಡುವುದರಿಂದ ನಮ್ಮ ಶಿಕ್ಷಣಕ್ಕೆ ಪೆಟ್ಟು ಬೀಳುತ್ತದೆ. ನಮ್ಮ ಶಾಲೆಯಲ್ಲಿ 11 ಮತ್ತು 12 ನೇ ತರಗತಿಯಲ್ಲಿ ಕೇವಲ 3 ಶಿಕ್ಷಕರಿದ್ದಾರೆ. ಹೀಗಾಗಿ ಕೂಡಲೇ ನಿರ್ಧಾರ ಹಿಂಪಡೆಯಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.
Published by:ಗುರುಗಣೇಶ ಡಬ್ಗುಳಿ
First published: