• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Viral News: ದಾರಿ ತಪ್ಪಿ ಅಳುತ್ತಿದ್ದ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರ ತಲುಪಲು ಝೀರೋ ಟ್ರಾಫಿಕ್! ಪೊಲೀಸ್​ ​ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಿಗರ ಹ್ಯಾಟ್ಸಾಪ್

Viral News: ದಾರಿ ತಪ್ಪಿ ಅಳುತ್ತಿದ್ದ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರ ತಲುಪಲು ಝೀರೋ ಟ್ರಾಫಿಕ್! ಪೊಲೀಸ್​ ​ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಿಗರ ಹ್ಯಾಟ್ಸಾಪ್

ವಿದ್ಯಾರ್ಥಿನಿಗೆ ಸಹಾಯ ಮಾಡಿದ ಪೊಲೀಸ್​

ವಿದ್ಯಾರ್ಥಿನಿಗೆ ಸಹಾಯ ಮಾಡಿದ ಪೊಲೀಸ್​

ಬಾಲಕಿಯ ಕುಟುಂಬಸ್ಥರು ಹತ್ತಿರದ ಸಂಭಂದಿಕರ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದರಿಂದ, ಆಕೆ ಒಬ್ಬಳೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾಳೆ. ಆದರೆ ದಾರಿ ತಪ್ಪಿ ಬೇರೆ ಕೇಂದ್ರಕ್ಕೆ ಹೋಗಿದ್ದಾಳೆ. ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗದಿದ್ದರೆ, ಒಳಗೆ ಸೇರಿಸುವುದಿಲ್ಲ. ಇದರಿಂದ ತನ್ನ ಒಂದು ವರ್ಷದ ಓದು ವ್ಯರ್ಥವಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಚಕ್ರವರ್ತಿ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Kolkata, India
 • Share this:

ಕೋಲ್ಕತ್ತಾ : ಹತ್ತನೇ ತರಗತಿ ಪರೀಕ್ಷೆ (Exam) ಬರೆಯಲು ತೆರಳಿದ್ದ ವಿದ್ಯಾರ್ಥಿನಿ (Student)ದಾರಿ ತಪ್ಪಿದ್ದು, ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ (Exam Center) ತೆರಳಲು ಸಾಧ್ಯವಾಗದೆ ಅಳುತ್ತಾ ನಿಂತಿದ್ದಳು. ಇದನ್ನು ಕಂಡ ಪೊಲೀಸ್​ ಇನ್ಸ್‌ಪೆಕ್ಟರ್ ವಿದ್ಯಾರ್ಥಿನಿಯನ್ನು ತಮ್ಮ ವಾಹನದಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಶಾಲಾ ಬಾಲಕಿಯ ಬಗ್ಗೆ ಪೊಲೀಸ್ (Police) ಅಧಿಕಾರಿಯ ಹೃದಯಸ್ಪರ್ಶಿ ನಡೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಕೋಲ್ಕತ್ತಾ ಪೊಲೀಸರು ( Kolkata Police) ಅಧಿಕೃತ ಫೇಸ್‌ಬುಕ್ ಪೇಜ್​ನಲ್ಲಿ ಹಂಚಿಕೊಂಡಿರುವ ಕಥೆಯು ಎಲ್ಲಾ ವರ್ಗಗಳ ಜನರ ಹೃದಯವನ್ನು ಗೆದ್ದಿದೆ.


ಈ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದ್ದು, ಹೌರಾ ಬ್ರಿಡ್ಜ್ ಟ್ರಾಫಿಕ್ ಇನ್ಸ್‌ಪೆಕ್ಟರ್ ಸೌವಿಕ್ ಚಕ್ರವರ್ತಿ ಅವರು ರಾಜಾ ಕತ್ರಾ ಬಳಿಯ ಸ್ಟ್ರಾಂಡ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಬಾಲಕಿಯೊಬ್ಬಳು ಶಾಲಾ ಸಮವಸ್ತ್ರದಲ್ಲಿ ಅಳುತ್ತಾ ಸಹಾಯ ಕೇಳುತ್ತಿದ್ದದ್ದನ್ನು ಚಕ್ರವರ್ತಿ ಗಮನಿಸಿದ್ದಾರೆ. ಅವಳ ಬಳಿ ಹೋಗಿ ವಿಚಾರಿಸಿದಾಗ, ಬಾಲಕಿ ತಾನೂ ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಂದಿರುವುದಾಗಿ ತಿಳಿಸಿದ್ದಾಳೆ.


ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ಕುಟುಂಬ


ಬಾಲಕಿಯ ಕುಟುಂಬಸ್ಥರು ಹತ್ತಿರದ ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ಹೋಗಿದ್ದರಿಂದ, ಆಕೆ ಒಬ್ಬಳೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾಳೆ. ಆದರೆ ದಾರಿ ತಪ್ಪಿ ಬೇರೆ ಕೇಂದ್ರಕ್ಕೆ ಹೋಗಿದ್ದಾಳೆ. ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗದಿದ್ದರೆ, ಒಳಗೆ ಸೇರಿಸುವುದಿಲ್ಲ. ಇದರಿಂದ ತನ್ನ ಒಂದು ವರ್ಷದ ಓದು ವ್ಯರ್ಥವಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಚಕ್ರವರ್ತಿ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ.


ಇದನ್ನೂ ಓದಿ: Marriage Leave: ನವಜೋಡಿಗಳಿಗೆ 1 ತಿಂಗಳು ಸಂಬಳ ಸಹಿತ ಮದುವೆ ರಜೆ; ಚೀನಾ ಉದ್ದೇಶ ಬೇರೆನೇ ಇದೆ


ಸರಿಯಾದ ಸಮಯಕ್ಕೆ ತಲುಪಿಸಿದ ಪೊಲೀಸ್​


ವಿದ್ಯಾರ್ಥಿನಿಯ ಮಾತು ಕೇಳಿ ಮರುಗಿದ ಪೊಲೀಸ್​ ಆಕೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಕೂಡಲೇ ಆಕೆಯನ್ನು ತಮ್ಮ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡಿದ್ದಾರೆ. ಅಲ್ಲದೆ ಸಂಚಾರ ಪೊಲೀಸ್ ಕಂಟ್ರೋಲ್​ ರೂಮ್​ ಸಂಪರ್ಕಿಸಿ, ಗ್ರೀನ್ ಕಾರಿಡಾರ್ ಅಥವಾ ಸಿಗ್ನಲ್ ರಹಿತ ವ್ಯವಸ್ಥೆ ಮಾಡಿಕೊಂಡು 11.30ಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ವಾಹನ ಪರೀಕ್ಷಾ ಕೇಂದ್ರಕ್ಕೆ ಬರುವ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದ ಕೊಠಡಿಗಳನ್ನು ತೆರೆಯುತ್ತಿದ್ದರಿಂದ ಬಾಲಕಿ ಖುಷಿಯಿಂದ ಪೊಲೀಸ್​ಗೆ ಧನ್ಯವಾದ ತಿಳಿಸಿ ಹೋಗಿದ್ದಾಳೆ.
ಗ್ರೀನ್ ಕಾರಿಡಾರ್​ ವ್ಯವಸ್ಥೆ


ಕೇವಲ ವಿಐಪಿಗಳಿಗೆ, ರಾಜಕಾರಣಿಗಳಿಗೆ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಗ್ರೀನ್​ ಕಾರೀಡಾರ್​ ಅಥವಾ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಭವಿಷ್ಯಕ್ಕೆ ತೊಂದರೆಯಾಗುವ ಭೀತಿಯಲ್ಲಿದ್ದ ವಿದ್ಯಾರ್ಥಿನಿಗಾಗಿ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ಮಾಡುವ ಮೂಲಕ ಸ್ಪಂದಿಸಿದ ಪೊಲೀಸ್​ ಅಧಿಕಾರಿಯ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ


ಈ ಘಟನೆಯನ್ನು ಪೊಲೀಸ್​​ ಅಧಿಕಾರಿಯೊಬ್ಬರು ಫೇಸ್​ಬುಕ್ ಪೇಜ್​​ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಪೊಲೀಸ್​​ ಅಧಿಕಾರಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಈ ಪೋಸ್ಟ್​ಗೆ ಸುಮಾರು 79,000 ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 14,000 ಕ್ಕೂ ಹೆಚ್ಚು ಮಂದಿ ಕಮೆಂಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಥೆಯು ನೆಟ್ಟಿಗರ ಪ್ರೀತಿ ಮತ್ತು ಬೆಂಬಲದ ಮಹಾಪೂರವನ್ನು ಗಳಿಸಿದೆ, ಅನೇಕರು ಪೊಲೀಸ್ ಇನ್ಸ್​ಪೆಕ್ಟರ್‌ನ ದಯೆ ಮತ್ತು ಅವರ ಕರ್ತವ್ಯ ಬದ್ಧತೆಯನ್ನು ಶ್ಲಾಘಿಸುತ್ತಿದ್ದಾರೆ.

Published by:Rajesha M B
First published: