HOME » NEWS » National-international » KOLKATA POLICE ARRESTS ANOTHER BJP SUPPORTER FOR GOLI MAR SLOGAN AT AMIT SHAH RALLY GNR

ಅಮಿತ್ ಶಾ ರ‍್ಯಾಲಿಯಲ್ಲಿ ಗೋಲಿಮಾರ್​​ ಘೋಷಣೆ ಪ್ರಕರಣ: ನಾಲ್ವರ ಬಂಧನ

ಇದಾದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೆನ್ನತ್ತಿದ ಪೊಲೀಸರು ಇಲ್ಲಿಯವೆರಗೂ ನಾಲ್ವರಿಗೆ ಬಲೆ ಬೀಸಿದ್ದಾರೆ. ಐಪಿಸಿ ಸೆಕ್ಷನ್ 505, 506, 34 ಮತ್ತು 153-ಎ ಅಡಿಯಲ್ಲಿ ಆರೋಪಿಗಳ ವಿವಿಧ ಪ್ರಕರಣಗಳು ದಾಖಲಾಗಿವೆ.

news18-kannada
Updated:March 3, 2020, 10:11 PM IST
ಅಮಿತ್ ಶಾ ರ‍್ಯಾಲಿಯಲ್ಲಿ ಗೋಲಿಮಾರ್​​ ಘೋಷಣೆ ಪ್ರಕರಣ: ನಾಲ್ವರ ಬಂಧನ
ಕೇಂದ್ರ ಗೃಹ ಸಚಿವ ಅಮಿತ್​ ಶಾ
  • Share this:
ಕೋಲ್ಕತ್ತಾ(ಮಾ.03): ಇಲ್ಲಿನ ಶಾಹೀದ್ ಮಿನಾರ್ ಮೈದಾನದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಗೂ ಮುನ್ನ "ದೇಶ್ ಕೆ ಗದ್ದಾರೋಂ ಕೋ, ಗೋಲಿ ಮಾರೋ ಸಾಲೋಂ ಕೋ" ಎಂದು ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವನ ಬಂಧನವಾಗಿದೆ. ಹೀಗೆ ವಿವಾದಾತ್ಮಕ ಘೋಷಣೆಗಳನ್ನು ಕೂಗಿದ್ದವರ ಪೈಕಿ ನಾಲ್ವರು ಪ್ರಮುಖ ಆರೋಪಿಗಳನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ಧಾರೆ.

ಇನ್ನು ಬಂಧಿತ ಆರೋಪಿ ನಾರ್ತ್​ 24 ಪರಗಣ ಜಿಲ್ಲೆಯ ಸೋದೆಪುರ್​ನ ಗೋಲಾದ ನಿವಾಸಿ ಸುಜಿತ್ ಬರುವಾ(51) ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ ಈ ಆರೋಪಿಯನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಪೈಕಿ ಪಂಕಜ್​ ಪ್ರಸಾದ್​, ಸುರೇಂದ್ರ ಕುಮಾರ್ ತಿವಾರಿ, ಧ್ರುವಾ ಬಸು ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಇತ್ತೀಚೆಗೆ ಭಾನುವಾರ ಕೇಂದ್ರ ಗೃಹ ಸಚಿವ ಒಂದು ದಿನದ ಪ್ರವಾಸಕ್ಕಾಗಿ ಕೋಲ್ಕತ್ತಾಗೆ ತೆರಳಿದ್ದರು. ಈ ವೇಳೆ ಮಧ್ಯಾದ್ನ 1.15 ಸುಮಾರಿಗೆ ನಡೆದ ಅಮಿತ್ ಶಾ ರ‍್ಯಾಲಿಯಲ್ಲಿ ಬಿಜೆಪಿ ಧ್ವಜ ಹಿಡಿದಿದ್ದ ಬಿಜೆಪಿ ಬೆಂಬಲಿಗರ ಗುಂಪೊಂದು “ದೇಶದ್ರೋಹಿಗಳಿಗೆ ಗುಂಡಿಕ್ಕಿ” ಎಂದು ಘೋಷಣೆ ಕೂಗಿದ್ದರು. ಹಾಗೆಯೇ "ಕಿಸ್ಕೊ ಚಾಹಿಯೆ ಆಜಾದಿ, ಹಮ್ ದೇಂಗೆ ಆಜಾದಿ (ಯಾರಿಗೆ ಸ್ವಾತಂತ್ರ್ಯ ಬೇಕು, ನಾವು ನೀಡುತ್ತೇವೆ ಸ್ವಾತಂತ್ರ್ಯ)" ಎಂದು ಘೋಷಣೆ ಕೂಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಇದನ್ನೂ ಓದಿ: ಗೋಲಿಮಾರ್​​ ಅಂದ್ರೆ ಸಹಿಸೋಕೆ ಇದು ದೆಹಲಿಯಲ್ಲ, ಪಶ್ಚಿಮ ಬಂಗಾಳ​: ಬಿಜೆಪಿಗರಿಗೆ ದೀದಿ ಎಚ್ಚರಿಕೆ

ಇದಾದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೆನ್ನತ್ತಿದ ಪೊಲೀಸರು ಇಲ್ಲಿಯವೆರಗೂ ನಾಲ್ವರಿಗೆ ಬಲೆ ಬೀಸಿದ್ದಾರೆ. ಐಪಿಸಿ ಸೆಕ್ಷನ್ 505, 506, 34 ಮತ್ತು 153-ಎ ಅಡಿಯಲ್ಲಿ ಆರೋಪಿಗಳ ವಿವಿಧ ಪ್ರಕರಣಗಳು ದಾಖಲಾಗಿವೆ.

ಈಗಾಗಲೇ ಅಮಿತ್​​ ಶಾ ಸಭೆಗೆ ಮುನ್ನ ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಮೊಳಗಿದ ಘೋಷಣೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ನೀವು ಗೋಲಿಮಾರ್​​ ಎಂದು ಘೋಷಣೆ ಕೂಗಿದರೆ ಸಹಿಸಲು ದೆಹಲಿಯಲ್ಲ, ಬದಲಿಗೆ ಇದು ಪಶ್ಚಿಮ ಬಂಗಾಳ ಎಂದು ಖಡಕ್​​​ ಸಂದೇಶ ರವಾನಿಸಿದ್ದಾರೆ. ಅಲ್ಲದೇ ಯಾರದರೂ ಹೀಗೆ ಗೋಲಿಮಾರ್​​ ಎಂದು ರಾಜ್ಯದ ಶಾಂತಿ ಕದಡುವ ಹೇಳಿಕೆ ನೀಡಿದರೆ, ರಾಜ್ಯದ ಕಾನೂನು ತನ್ನ ಕರ್ತವ್ಯ ನಿರ್ವಹಿಸಲಿದೆ' ಎಂದು ಮಮತಾ ಬ್ಯಾನರ್ಜಿ ವಾರ್ನ್​​ ಮಾಡಿದ್ಧಾರೆ.
Youtube Video
First published: March 3, 2020, 10:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories