ಯೋಗಿ ಆದಿತ್ಯನಾಥ್ "ಅಭಿವೃದ್ಧಿ" ಜಾಹೀರಾತಿನಲ್ಲಿ ಕೊಲ್ಕತ್ತದ ಎಂಎಎ ಪ್ಲೈಓವರ್ ಫೋಟೋ; ಟಿಎಂಸಿ ಅಪಹಾಸ್ಯ

ಸುಮಿತ್ರ ಮುಜುಂದಾರ್ ಎಂಬುವರು ಟ್ವೀಟ್ ಮಾಡಿದ್ದು, ಯುಪಿ ಮಾದರಿಯನ್ನು ತೋರಿಸಲು ಕೊಲ್ಕತ್ತ ಫೋಟೋವನ್ನು ಬಳಸಲಾಗಿದೆ. ಪಾರದಾರ್ಶಕ ಯುಪಿ ಎಂದರೆ ಇತರ ರಾಜ್ಯಗಳ ಅಭಿವೃದ್ಧಿಯ ಫೋಟೋಗಳನ್ನು ಕದ್ದು, ಪತ್ರಿಕೆಗೆ ಜಾಹೀರಾತು ನೀಡುವುದಾಗಿದೆ ಎಂದಿದ್ದಾರೆ.

ಯೋಗಿ ಆದಿತ್ಯನಾಥ್​ ಜಾಹೀರಾತಿನಲ್ಲಿ ಕೋಲ್ಕತ್ತಾ ಫ್ಲೈಓವರ್.

ಯೋಗಿ ಆದಿತ್ಯನಾಥ್​ ಜಾಹೀರಾತಿನಲ್ಲಿ ಕೋಲ್ಕತ್ತಾ ಫ್ಲೈಓವರ್.

 • Share this:
  ಲಖನೌ (ಸೆಪ್ಟೆಂಬರ್​ 12); ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಇಮೇಜ್ ಹೆಚ್ಚಿಸುವ ಸಲುವಾಗಿ ಬಿಜೆಪಿ ಇಂದು ಉತ್ತರಪ್ರದೇಶದ ಎಲ್ಲಾ ಪತ್ರಿಕೆಗಳಲ್ಲೂ ಪೂರ್ಣ ಪುಟದ ಜಾಹಿರಾತು ನೀಡಿತ್ತು. ಆದರೆ, ಆ ಜಾಹೀರಾತು ಇದೀಗ ರಾಷ್ಟ್ರ ಮಟ್ಟದಲ್ಲಿ ಟ್ರೋಲ್​ಗೆ ಗುರಿಯಾಗಿದೆ. ಇನ್ನೂ ತೃಣಮೂಲ ಕಾಂಗ್ರೆಸ್ ಇದೇ ಜಾಹೀರಾತನ್ನು ಬಳಸಿಕೊಂಡು ಬಿಜೆಪಿ ಮತ್ತು ಯೋಗಿ ಆದಿತ್ಯನಾಥನ್ನು ಟ್ರೋಲ್​ಗೆ ಗುರಿಮಾಡಿದೆ. ಅಲ್ಲದೆ, ಯೋಗಿ ಆದಿತ್ಯನಾಥನ್ನು ಪುಂಡ ಯೋಗಿ ಎಂದು ಅಪಹಾಸ್ಯ ಮಾಡಿದೆ. ಅದಕ್ಕೆ ಕಾರಣ ಮುಂದಿನ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಮತ್ತೆ ಅಧಿಕಾರವನ್ನು ಹಿಡಿಯುವ ಸಲುವಾಗಿ ಬಿಜೆಪಿ ಪಶ್ಚಿಮ ಬಂಗಾಳದ ಅಭಿವೃದ್ಧಿ ಪೋಟೋಗಳನ್ನು ಉತ್ತರಪ್ರದೇಶದ ಪೋಟೋಗಳಂತೆ ಬಿಂಬಿಸಿ ಮತ ಯಾಚಿಸುತ್ತಿದೆ. ಅದರಲ್ಲೂ ಯೋಗಿ "ಅಭಿವೃದ್ಧಿ" ಜಾಹೀರಾತಿನಲ್ಲಿ ಕೊಲ್ಕತ್ತದ ಎಂಎಎ ಪ್ಲೈಓವರ್ ಫೋಟೋ ನೀಡಿರುವುದು ಸಾಕಷ್ಟು ಟ್ರೋಲ್​ಗೆ ಗುರಿಯಾಗಿದೆ.  ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯರಾದ ಮಹುವ ಮೊಯಿತ್ರ ತಮ್ಮ ಖಾಸಗಿ ಟ್ವಿಟರ್​ ಖಾತೆಯಲ್ಲಿ, "ದಿ ಸಂಡೇ ಎಕ್ಸ್‌ಪ್ರೆಸ್‌" ಪತ್ರಿಕೆಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಜಾಹೀರಾತಿನ ಫೋಟೋವನ್ನು ಹಂಚಿಕೊಂಡು "ಪುಂಡ ಯೋಗಿ" (Thuggy Yogi) ಎಂದು ಕರೆದಿದ್ದಾರೆ. ಅಲ್ಲದೆ, "ನಿಮ್ಮ ಆತ್ಮವನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿ, ಅಥವಾ ಕನಿಷ್ಠ ನಿಮ್ಮ ಜಾಹೀರಾತು ಏಜೆನ್ಸಿಯನ್ನಾದರೂ ಬದಲಿಸಿ" ಎಂದು ಕುಟುಕಿದ್ದಾರೆ.  ಫ್ಯಾಕ್ಟ್ ಚೆಕ್ ಟ್ವಿಟರ್‌ ಖಾತೆಯು ಪ್ರತಿಕ್ರಿಯಿಸಿದ್ದು, "ಯೋಗಿ ಆದಿತ್ಯನಾಥ ಅವರೇ, ಪಶ್ಚಿಮ ಬಂಗಾಳ ಅಭಿವೃದ್ಧಿಯನ್ನು ನಿಮ್ಮ ಜಾಹೀರಾತಿನಲ್ಲಿ ಕಾಣಲು ಖುಷಿಯಾಗುತ್ತಿದೆ. ಐಟಿಸಿ ಕಡೆಗೆ ತೆರಳಲಿರುವ ಎಂಎಎ ಫ್ಲೈಓವರ್‌ನ ಸ್ಟಾಕ್ ಫೋಟೋವನ್ನು ಜಾಹೀರಾತಿನಲ್ಲಿ ಬಳಸಲಾಗಿದೆ" ಎಂದಿದೆ.

  ಸುಮಿತ್ರ ಮುಜುಂದಾರ್ ಎಂಬುವರು ಟ್ವೀಟ್ ಮಾಡಿದ್ದು, "ಯುಪಿ ಮಾದರಿಯನ್ನು ತೋರಿಸಲು ಕೊಲ್ಕತ್ತ ಫೋಟೋವನ್ನು ಬಳಸಲಾಗಿದೆ. ಪಾರದಾರ್ಶಕ ಯುಪಿ ಎಂದರೆ ಇತರ ರಾಜ್ಯಗಳ ಅಭಿವೃದ್ಧಿಯ ಫೋಟೋಗಳನ್ನು ಕದ್ದು, ಪತ್ರಿಕೆಗೆ ಜಾಹೀರಾತು ನೀಡುವುದಾಗಿದೆ" ಎಂದಿದ್ದಾರೆ.

  "ಎಂಎಎ ಫ್ಲೈಓವರ್‌” (MAA flyover) ಎಂದು ಗೂಗಲ್ ಮಾಡಿದರೆ, ಕೊಲ್ಕತ್ತದಲ್ಲಿರುವ ಈ ಮೇಲ್ಸೇತುವೆಯ ಕುರಿತು ವರದಿಯಾಗಿರುವ ಸುದ್ದಿಗಳನ್ನು ನೋಡಬಹುದು."

  ಇದನ್ನೂ ಓದಿ: Basavaraj Bommai: ಆರೋಗ್ಯ ಸಚಿವರ ಎದುರಲ್ಲೇ ಆರೋಗ್ಯ ವ್ಯವಸ್ಥೆ ಸರಿಯಿಲ್ಲ ಎಂದ ಸಿಎಂ; ಮುಜುಗರಕ್ಕೀಡಾದ ಸುಧಾಕರ್

  ಜಾಹೀರಾತು ಕುರಿತು ಸ್ಪಷ್ಟನೆ ನೀಡಿರುವ ಇಂಡಿಯನ್ ಎಕ್ಸಪ್ರೆಸ್ ಸಂಸ್ಥೆಯು, "ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಿಂದಾಗಿರುವ ತಪ್ಪು ಇದು. ಇದಕ್ಕಾಗಿ ತೀವ್ರ ವಿಷಾದಿಸುತ್ತೇವೆ. ಪತ್ರಿಕೆಯ ಎಲ್ಲ ಡಿಜಿಟಲ್ ಆವೃತ್ತಿಗಳಿಂದ ಈ ಫೋಟೋವನ್ನು ಅಳಿಸಿಹಾಕುತ್ತೇವೆ" ಎಂದು ಟ್ವೀಟ್ ಮಾಡಿದೆ.
  Published by:MAshok Kumar
  First published: